ಹೃದಯ

Author : ಎಚ್.ಎಂ. ನಾಗರಾಜರಾವ್ ಕಲ್ಕಟ್ಟೆ

Pages 168

₹ 110.00




Year of Publication: 2009
Published by: ನೇಕಾರ ಪ್ರಕಾಶನ
Address: ನೇಕಾರ ಪ್ರಕಾಶನ, ಗುರುಮಂದಿರ ರಸ್ತೆ, ಸೊರಬ-577429 ಶಿವಮೊಗ್ಗ ಜಿಲ್ಲೆ
Phone: 9141833556

Synopsys

ಹೃದಯ - ಲೇಖಕ ಎಚ್.ಎಂ.ನಾಗರಾಜ ರಾವ್ ಕಲ್ಕಟ್ಟೆಯವರ ಲೇಖನ ಸಂಕಲನ. ಹೃದಯ ಮಿಡಿವ ಯೌವನಾಶ್ರಯಿತ ಪ್ರತಿ ಪ್ರೇಮಿಗಳಿಗೂ ಎಚ್.ಎಂ, ನಾಗರಾಜ ರಾವ್ ಕಲ್ಕಟ್ಟೆ ತಮ್ಮ 'ಹೃದಯ' ಬರಹಗಳ ಮೂಲಕ ಹೊಸ ಉತ್ಸಾಹ ನೀಡಿದ್ದಾರೆ. ಅವರ ಬರಹಗಳ ಬಿಂಬ - ಪ್ರತಿಬಿಂಬ' ತಾವೇ ಎಂದು ಪ್ರತಿ ಪ್ರೇಮಿಗಳೂ ಅಂದುಕೊಳ್ಳುತ್ತಾರೆ ಎಂಬುದು ನಿಸ್ಸಂಶಯ. ಸಾಂದರ್ಭಿಕವಾಗಿ, ಕನ್ನಡ ಚಿತ್ರಗೀತೆಗಳ ಸಾಲುಗಳನ್ನು ಅವರು ಬಳಸಿಕೊಂಡಿರುವುದು ಖುಷಿಕೊಡುತ್ತದೆ.

About the Author

ಎಚ್.ಎಂ. ನಾಗರಾಜರಾವ್ ಕಲ್ಕಟ್ಟೆ

ಲೇಖಕ, ಗಾಯಕ, ನಾಟಕಕಾರ ಎಚ್. ಎಂ. ನಾಗರಾಜರಾವ್ ಕಲ್ಕಟ್ಟೆ ಪ್ರಸ್ತುತ ಚಿಕ್ಕಮಗಳೂರು ತಾಲ್ಲೂಕು ಕಳಸಾಪುರದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರು. ವಿದ್ಯಾರ್ಥಿ ಜೀವನದಲ್ಲಿ ಇವರು ಕಲಿಕೆಯಲ್ಲಿ ಚಿನ್ನದ ಪದಕಗಳನ್ನು ಗಳಿಸಿದವರು. ಸಾಹಿತ್ಯ, ಸಂಗೀತ, ಅಭಿನಯ, ಸಾಂಸ್ಕೃತಿಕ ಸಂಘಟನೆ, ಸಮಾಜಸೇವೆ, ಧಾರ್ಮಿಕ ಸೇವೆ ಹೀಗೆ ಹಲವು ಕ್ಷೇತ್ರಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಅವರ ಸಾಹಿತ್ಯವಿರುವ ನೂರಕ್ಕೂ ಹೆಚ್ಚು ಅಡಕ ಮುದ್ರಿಕೆಗಳು ಲೋಕಾರ್ಪಣೆಗೊಂಡಿವೆ. ಕಾಂತಾವರ ಕನ್ನಡ ಸಂಘವೇ ಪ್ರಕಟಿಸಿದ 'ಕನ್ನಡ ಕೋಗಿಲೆ ಪಿ. ಕಾಳಿಂಗರಾವ್' ಹಾಗೂ ’ಪ್ರಥಮ ಪುಟ’, ’ಬೆಳಕು’ ಪುಸ್ತಕವೂ ಸೇರಿ ಈವರೆಗೆ ಇಪ್ಪತ್ತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಆರು ಕೃತಿಗಳನ್ನು ...

READ MORE

Related Books