ಎಚ್ಚೆಸ್ವಿ ವಿಮರ್ಶಾ ಸಂಪುಟ

Author : ಎಚ್. ಎಸ್. ವೆಂಕಟೇಶಮೂರ್ತಿ

Pages 724

₹ 400.00




Year of Publication: 2011
Published by: ಸಪ್ನ ಬುಕ್‌ ಹೌಸ್
Address: 3ನೇ ಮುಖ್ಯ ರಸ್ತೆ, ಗಾಂಧಿನಗರ ಬೆಂಗಳೂರು- 560009
Phone: 40114455

Synopsys

'ಎಚ್ಚೆಸ್ವಿ ವಿಮರ್ಶಾ ಸಂಪುಟ' ವಿಮರ್ಶಾ ಸಂಪುಟವು ಲೇಖಕ ಎಚ್.ಎಸ್‌ ವೆಂಕಟೇಶ್‌ ಮೂರ್ತಿಯವರು ರಚಿಸಿದ್ದಾರೆ. ಕೃತಿಯ ಬೆನ್ನುಡಿಯಲ್ಲಿ ಎಲ್.ಎಸ್‌ ಶೇಷಗಿರಿರಾವ್‌ ಅವರು ಸಾಹಿತ್ಯ ವಿಮರ್ಶೆಯ ತತ್ವಗಳನ್ನು ಅರಗಿಸಿಕೊಂಡು, ಅವುಗಳಾಚೆ ಚಿಂತನಶೀಲವಾಗಿ, ಹೃದಯವಂತಿಕೆಯಿಂದ ಮೂಡಿಬಂದಂಥ ಪ್ರತಿಕ್ರಿಯೆ. ಅನುಭವ ಮತ್ತು ಅಭಿವ್ಯಕ್ತಿ ಎರಡಕ್ಕೂ ಸ್ಪಂದಿಸುವ, ಪರಂಪರೆ ಮತ್ತು ಸ್ಪೋಪಜ್ಞತೆ ಎರಡನ್ನೂ ಗುರುತಿಸುವ ವಿಮರ್ಶೆ. ಇಲ್ಲಿ ನಮಗೆ ಲಭ್ಯವಾಗುವುದು ವಿಮರ್ಶಕನೊಬ್ಬನ ವಿಮರ್ಶೆಯಷ್ಟೇ ಅಲ್ಲ: ಒಬ್ಬ ಕವಿಯ ಅನುಭಾವ. ಎಚ್ಚೆಸಿ ಒಬ್ಬ ಸಾಹಿತಿಯ ಅಥವಾ ಒಂದು ಕೃತಿಯ ವೈಶಿಷ್ಟ್ಯವನ್ನು ಗ್ರಹಿಸಬಲ್ಲರು. ಸೊಗಸಾದ, ಸ್ಪಷ್ಟವಾದ, ವಿಚಿತವಾದ, ಶ್ರುತಿ ಹಿತವಾದ ಭಾಷೆಯನ್ನು ಬಳಸಬಲ್ಲವರಾದುದರಿಂದ ತಮ್ಮ ಗ್ರಹಿಕೆಯನ್ನು ಸಂಗ್ರಹವಾಗಿ ಹೇಳಬಲ್ಲರು. ಸಾಹಿತ್ಯದ ಅಭ್ಯಾಸಕ್ಕೆ ಕೈದೀಪವಾಗುವ ಇಂಥ ಬರಹವನ್ನು ಸಂತೋಷದಿಂದ ಸ್ವಾಗತಿಸಬೇಕು ಎಂದು ಬರೆದಿದ್ದಾರೆ.ಈ ಪುಸ್ತಕವು ಪಟ್ಟು ನೂರು ಅಧ್ಯಾಯಗಳನ್ನು ಹೊಂದಿದ್ದು, ನೂರುಮರ ನೂರುಸ್ವರ, ಆಕಾಶದ ಹಕ್ಕು, ಬಿಡಿಲೇಖನಗಳನ್ನು ಹೊಂದಿದೆ.

About the Author

ಎಚ್. ಎಸ್. ವೆಂಕಟೇಶಮೂರ್ತಿ
(23 June 1944)

ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. 2000 ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ...

READ MORE

Related Books