ಹುಕುಂಪತ್ರ

Author : ಪ್ರಭುಲಿಂಗ ನೀಲೂರೆ

Pages 64

₹ 40.00




Year of Publication: 2010
Published by: ಬಿಸಿಲನಾಡು ಪ್ರಕಾಶನ
Address: # 1-871, ವೆಂಕಟೇಶ ನಗರ, ಕಲಬುರಗಿ- 585102
Phone: 9481000094

Synopsys

ಕನ್ನಡದ ಮೊಟ್ಟಮೊದಲ ಮುಸ್ಲಿಂ ತತ್ವಪದಕಾರ ಚೆನ್ನೂರ ಜಲಾಲ್‌ಸಾಹೇಬರ ಶರಣ ಸಾಹಿತ್ಯ ಹಾಗೂ ಸೌಹಾರ್ದ ಬದುಕಿನ ಕುರಿತು ನಡೆಸಿದ ಹೋರಾಟದ ಕಥಾಹಂದರ ಹೊಂದಿರುವ ಐತಿಹಾಸಿಕ ನಾಟಕ ಕೃತಿಯೇ ಹುಕುಂಪತ್ರ. ಪತ್ರಕರ್ತ ಪ್ರಭುಲಿಂಗ ನೀಲೂರೆ ರಚಿಸಿದ್ದಾರೆ. ಚೆನ್ನೂರ ಜಲಾಲ್‌ಸಾಹೇಬರು ಸಗರನಾಡಿನ ಸೂಫಿ ಪರಂಪರೆಯ ಪ್ರತೀಕವಾಗಿ ಬಾಳಿಹೋಗಿದ್ದಾರೆ.  ಮಡಿವಾಳಪ್ಪನವರ ಶಿಷ್ಯ ಪರಂಪರೆಯ ಸಮೂಹದಲ್ಲಿದ್ದು, ಹಿಂದು-ಮುಸ್ಲಿಂ ಭಾವೈಕ್ಯತೆಯ ಹರಿಕಾರರಾಗಿದ್ದರು. ತಮ್ಮ ಸಮಕಾಲೀನ ಸಮಾಜದ ಸೌಹಾರ್ದತೆಯ ಸೇತುವೆಯಾಗಿದ್ದ ಜಲಾಲ್ ಸಾಹೇಬರು ವ್ಯಕ್ತಿಗಿಂತಲೂ ತತ್ವದೊಡ್ಡದು, ಮತಧರ್ಮಗಳಿಗಿಂತಲೂ ವಾಸ್ತವ ಬದುಕು ದೊಡ್ಡದು ಎಂಬುದನ್ನು ನಂಬಿದ್ದರು. ಹಿಂದು-ಮುಸ್ಲಿಂ ಎರಡೂ ಪರಂಪರೆಯಲ್ಲಿರುವ ಒಳಿತನ್ನು ಸ್ವೀಕರಿಸಿ ಮತೀಯ ಸೌಹಾರ್ದಕ್ಕೆ ಸೇತುವೆಯಾಗಿ ಬಾಳಿದವರು. ಮುಸ್ಲಿಂ ಧರ್ಮದಲ್ಲಿ ಜನಿಸಿದ ಜಲಾಲ್‌ಸಾಹೇಬರು ತಮ್ಮ ಸಾತ್ವಿಕತೆಯಿಂದ ಶರಣತತ್ವವನ್ನು ಅಳವಡಿಸಿಕೊಂಡವರು. ಇದನ್ನೇ ಮಠವೊಂದರಲ್ಲಿ ಪುರಾಣದ ಮೂಲಕ ಸಾರ್ವಜನಿಕರಿಗೆ ತಿಳಿಹೇಳಬೇಕು ಎಂಬ ಆಪೇಕ್ಷೆಯನ್ನು  ಇಟ್ಟುಕೊಂಡವರು. ಪುರಾಣ ಹೇಳಲು ಎರಡೂ ಧರ್ಮದವರು ಅಡ್ಡಿಪಡಿಸಿದಾಗ ಹೈದ್ರಾಬಾದ್‌ನ ನಿಜಾಮ್ ದೊರೆ ಹತ್ತಿರ ಹೋಗಿ ಹುಕುಂಪತ್ರ(ಒಪ್ಪಿಗೆಪತ್ರ)ತಂದು ಪುರಾಣ ಆರಂಭಿಸುವ ಕಥಾಹಂದರವೇ ಈ ‘ಹುಕುಂಪತ್ರ’.

About the Author

ಪ್ರಭುಲಿಂಗ ನೀಲೂರೆ
(22 July 1974)

ಲೇಖಕ ಹಾಗೂ ಪತ್ರಕರ್ತ ಪ್ರಭುಲಿಂಗ ನೀಲೂರೆ ಅವರು ಮೂಲತಃ  ಕಲಬುರಗಿ ಜಿಲ್ಲೆಯ  ಆಳಂದ ತಾಲೂಕಿನ ಹಳ್ಳಿಸಲಗರ ಗ್ರಾಮದವರು. ಬಿ.ಎಸ್.ಸಿ. ಪದವೀಧರರು. ವಿಜಯ ಕರ್ನಾಟಕ ಕನ್ನಡ ದಿನಪತ್ರಿಕೆಯ ಕಲಬುರಗಿ ಆವೃತ್ತಿಯಲ್ಲಿ ಮುಖ್ಯ ಉಪ ಸಂಪಾದಕರು. 1990ರಲ್ಲಿ ಮಹತ್ವಾಕಾಂಕ್ಷಿ ಸಾಮಾಜಿಕ ಸೇವಾ ಸಂಸ್ಥೆ ಆರಂಭಿಸಿದ್ದಾರೆ. ಕನ್ನಡದ ಮೊಟ್ಟಮೊದಲ ಉಪಲಬ್ದ ಗ್ರಂಥ ಕವಿರಾಜಮಾರ್ಗದ ರಚನೆಕಾರ ಶ್ರೀವಿಜಯನ ಹೆಸರಲ್ಲಿ ರಾಜ್ಯಮಟ್ಟದ ಸಾಹಿತ್ಯಕ ಪ್ರಶಸ್ತಿ ಆರಂಭಿಸಿ, ಸರಕಾರ ಆ ಪ್ರಶಸ್ತಿ ಘೋಷಣೆ ಮಾಡುವವರೆಗೂ ಸಂಸ್ಥೆ ಮೂಲಕ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ. ಬಿಸಿಲನಾಡು ಪ್ರಕಾಶನ ಸಂಸ್ಥೆಯೂ ನಡೆಸುತ್ತಿದ್ದಾರೆ. ಕೃತಿಗಳು: ಅಜ್ಜ ಹೇಳಿದ ಕಲ್ಯಾಣಕ್ರಾಂತಿ ಕಥೆ (ಮಕ್ಕಳ ಕಥನ)  ಹುಕುಂಪತ್ರ (ಐತಿಹಾಸಿಕ ನಾಟಕ) -ತತ್ವಪದಕಾರ ಚನ್ನೂರ ...

READ MORE

Related Books