ಹುಲಿಯ ಜೊತೆ ಜೊತೆಯಲಿ !

Author : ಸಿ.ಆರ್. ಚಂದ್ರಶೇಖರ್

Pages 136

₹ 45.00




Year of Publication: 2011
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 7353530805

Synopsys

ಮಾನವರಿಗೆ ಎದುರಾಗುವ ಸಣ್ಣ ಪುಟ್ಟ ನಿರಾಶೆಗಳು, ಕಿರಿಕಿರಿ ಇತ್ಯಾದಿಗಳಿಗೆ ಸಿಕ್ಕಿ ಒತ್ತಡದಲ್ಲಿ ಸಿಕ್ಕಿ ಬೀಳುತ್ತಿದ್ದಾರೆ. ಒತ್ತಡವಿಲ್ಲದೆ ಜೀವನ ಸಾಧ್ಯವಿಲ್ಲ ಎಂದರೂ ಒತ್ತಡಕ್ಕೆ ಸಿಲುಕದೆ ಪಾರಾಗುವುದು ಹೇಗೆ? ಒತ್ತಡ ನಿರ್ವಹಣೆಯ ಈ ಕೃತಿಯೇ ’ಹುಲಿಯ ಜೊತೆ ಜೊತೆಯಲ್ಲಿ’.

ಒತ್ತಡವಿಲ್ಲದ ಜೀವನ ಸಾಧ್ಯವೇ ? ನಮ್ಮನ್ನು ಒತ್ತಡಕ್ಕೆ ಸಿಲುಕಿಸುವ ಕಾರಣಗಳು ಯಾವುವು ? ನಮ್ಮನ್ನು ಹೆಚ್ಚಾಗಿ ಬಾಧಿಸುವ ಪ್ರಧಾನ ಒತ್ತಡಗಳು ಯಾವುವು ? ಅವು ರೋಗಗಳಾಗಿ ನಮ್ಮನ್ನು ಮುಂದೆ ಕಾಡಿಸಬಹುದೆ? ಒತ್ತಡ ನಿರ್ವಹಣೆಯ ಒಳಸುಳಿವುಗಳು ಯಾವುವು ? ಎಂಬುದನ್ನು ವಿವರಿಸಿ, ಒತ್ತಡದ ಭೀತಿಯನ್ನು ಹೊಡೆದೋಡಿಸಲು ಸಹಾಯಕವಾಗುವಲ್ಲಿ ಕೃತಿ ಮಾರ್ಗದರ್ಶನವೀಯುತ್ತದೆ. ಡಾ. ನಾ. ಸೋಮೇಶ್ವರ ಲೇಖನಗಳನ್ನು ಬರೆದಿದ್ದು, ಡಾ. ಸಿ.ಆರ್‍. ಚಂದ್ರಶೇಖರ್ ಅವರು ಸಂಪಾದಿಸಿದ್ದಾರೆ.

About the Author

ಸಿ.ಆರ್. ಚಂದ್ರಶೇಖರ್
(12 December 1948)

ಡಾ. ಸಿ.ಆರ್. ಚಂದ್ರಶೇಖರ್  ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ರಾಷ್ಟ್ರೀಯ ಮನೋರೋಗ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಉಪ ಆರೋಗ್ಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯುಳ್ಳ ಹಿರಿಯ ವೈದ್ಯರು ರೋಗಿಗಳ ಶುಶ್ರೂಷೆ,  ಬೋಧನೆ ಮತ್ತು ತರಬೇತಿ ನೀಡುತ್ತಿರುವುದರ ಜೊತೆಗೆ ಕಳೆದ 30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಮನೋವಿಜ್ಞಾನದ ಬಗ್ಗೆ ಕನ್ನಡದಲ್ಲಿ ರಚಿಸಿರುವ ಇವರ ಹಲವು ಪುಸ್ತಕಗಳು ತೆಲುಗು, ಉರ್ದು, ಗುಜರಾತಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. 1000 ಕ್ಕೂ ಹೆಚ್ಚು  ಪ್ರೌಢ ಲೇಖನಗಳನ್ನು ಬರೆದಿದ್ದಾರೆ. ...

READ MORE

Related Books