ಹುಲಿಯ ನೆನಪುಗಳು

Author : ಬಿ.ಬಿ. ಅಶೋಕ್‌ ಕುಮಾರ್‌

Pages 206

₹ 180.00




Year of Publication: 2020
Published by: ಸಪ್ನ ಬುಕ್ ಹೌಸ್
Address: 3ನೇ ಅಡ್ಡರಸ್ತೆ, ಗಾಂಧಿನಗರ, ಬೆಂಗಳೂರು-560009
Phone: 08040114455

Synopsys

ಲೇಖಕ ಹಾಗೂ ನಿವೃತ್ತ ಎಸಿಪಿ ಬಿ.ಬಿ. ಅಶೋಕಕುಮಾರ ಅವರ ಕೃತಿ ‘ಹುಲಿಯ ನೆನಪುಗಳು. ಇವರ ಬುಲೆಟ್ ಸವಾರಿ ಕೃತಿಯ ಮುಂದುವರಿದ ಭಾಗವಾಗಿ ಈ ಕೃತಿ ಇದೆ. ತಮ್ಮ ವೃತ್ತಿ ಅವಧಿಯಲ್ಲಿ ಘಟಿಸಿದ ಸನ್ನಿವೇಶಗಳನ್ನು ಮರೆಯಲಾರದ ವೃತ್ತಾಂತಗಳನ್ನು ಇಲ್ಲಿ ದಾಖಲಿಸಿದೆ. ವೀರಪ್ಪನ್ ಕರಾಳ ಸಾಮ್ರಾಜ್ಯದತ್ತ, ವೀರಪ್ಪನ್ ಎಂದರೆ ಕ್ರೂರಪ್ಪನ್ ಎಂದೇ ಅರ್ಥ, ಹಂದಿ ಮಾಂಸ ತಿನ್ನಲು ಹೋಗಿ ಸಿಕ್ಕಿಬಿದ್ದ ವೀರಪ್ಪನ್, ಗೃಹಸಚಿವರತ್ತ ಕ್ಯಾಪ್ ಎಸೆದ ಎಸ್ ಪಿ, ಹೊಂಚು ಹಾಕಿ ಕೊಂದ ವೀರಪ್ಪನ್, ನನ್ನ ಬಾಳ ಸಂಗಾತಿಗೆ ವೈಧವ್ಯದ ಪಾಠ, ಗೋಪಾಲ್ ಹೊಸೂರು ಬದುಕಿದ್ದೇ ಪವಾಡ, ವೀರಪ್ಪನ್ ಜಾಡು ಅರಸಿ ಪಾದರಪಾಳಂ ಬೆಟ್ಟಕ್ಕೆ, ಅತ್ತ ಮಗುವಿನ ಉಸಿರು ನಿಲ್ಲಿಸಿದ್ದ ವೀರಪ್ಪನ್, ಗುಂಡಿಗೆ ಬಲಿಯಾದ ವೀರಪ್ಪನ್ ಬಂಟ, ಮುಗಿದ ಎಸ್ಟಿಪಿ ದಿನಗಳು ಹೀಗೆ ಒಟ್ಟು 30 ಅಧ್ಯಾಯಗಳ ಮೂಲಕ ವೀರಪ್ಪನ್ ವಿರುದ್ಧದ ಪೊಲೀಸ್ ವಿಶೇಷ ಪಡೆಯ ಕಾರ್ಯಾಚರಣೆಯ ಸಮಗ್ರ ಮಾಹಿತಿಯನ್ನು ಲೇಖಕರು ದಾಖಲಿಸಿದ್ದಾರೆ.

ಬಹುತೇಕ ಎಲ್ಲ ಅಧ್ಯಾಯಗಳು ಸರಣಿ ರೂಪದಲ್ಲಿ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದವು. ನಿವೃತ್ತ ಐಜಿಪಿ ಹಾಗೂ ಡಿಜಿಪಿ ಶಂಕರ ಬಿದರಿ ಹಾಗೂ ನಿವೃತ್ತ ಐಜಿಪಿ ಹಾಗೂ ಐಪಿಎಸ್ ಅಧಿಕಾರಿ ಗೋಪಾಲ್ ಹೊಸೂರ್ ಕೃತಿಗೆ ಬೆನ್ನುಡಿ ಬರೆದು ‘ದುರ್ಗಮ ಅರಣ್ಯ ಪ್ರದೇಶದಲ್ಲಿ ವಿವಿಧ ಭಾಷೆ ಮಾತನಾಡುವ ಜನರ ಮಧ್ಯೆ, ಸಹಜವಾಗೇ ಇದ್ದ ವಿರಸ, ಪ್ರತಿಕ್ಷಣಕ್ಕೂ ಪ್ರಾಣಾಪಾಯ ಇರುವ ಸನ್ನಿವೇಶದಲ್ಲೂ ಒಬ್ಬ ನಿಷ್ಠಾವಂತ ಅಧಿಕಾರಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಬಲ್ಲ ಎಂಬುದನ್ನು ಈ ಪುಸ್ತಕ ಸಾಬೀತು ಪಡಿಸಿದೆ. ಈ ಕೃತಿಯಲ್ಲಿ ಉತ್ಪ್ರೇಕ್ಷಗಳು ಅಪ್ಪಿ-ತಪ್ಪಿಯೂ ನುಸುಳಿಲ್ಲ’ ಎಂದು ಪ್ರಶಂಸಿಸಿದ್ದಾರೆ. ಈ ವೀರಪ್ಪನ್ ವಿರುದ್ಧದ ಅಂದಿನ ಕಾರ್ಯಾಚರಣೆಯಲ್ಲಿ ಲೇಖಕರೊಂದಿಗೆ ಈ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳು ಇದ್ದರು ಎಂಬುದು ಗಮನಾರ್ಹ. 2015 ರಲ್ಲಿ ಈ ಕೃತಿಯ ಮೊದಲ ಮುದ್ರಣ ಹಾಗೂ ಈವರೆಗೆ 6 ಮುದ್ರಣಗಳನ್ನು ಕಂಡಿದೆ.  

About the Author

ಬಿ.ಬಿ. ಅಶೋಕ್‌ ಕುಮಾರ್‌

.ಸಹಾಯಕ ಪೊಲೀಸ್ ಅಧಿಕಾರಿಯಾಗಿದ್ದ ಬಿ.ಬಿ. ಅಶೋಕಕುಮಾರ ಅವರು ಟೈಗರ್ ಅಶೋಕಕುಮಾರ್ ಎಂದೇ ಖ್ಯಾತಿ. ಬೆಂಗಳೂರಿನಲ್ಲಿ (1983) ಸರಗಳ್ಳರ ಹಾವಳಿ ಮಟ್ಟಹಾಕಲು ರಚಿಸಿದ್ದ ಆಪರೇಷನ್ ಟೈಗರ್’ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಜನರು ಅವರಿಗೆ ನೀಡಿದ ಬಿರುದು -ಟೈಗರ್. ವೃತ್ತಿಯಲ್ಲಿಯ ಈ ಸಾಹಸ-ಧೈರ್ಯದ ಹಿನ್ನೆಲೆಯಲ್ಲಿ ಹಲವು ಚಲನಚಿತ್ರಗಳು ತೆರೆ ಕಂಡವು. ಆ ಪೈಕಿ, ದೇವರಾಜ್ ಅಭಿನಯದ ಸರ್ಕಲ್ ಇನ್ಸಪೆಕ್ಟರ್, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಬಾ ನಲ್ಲೆ ಮಧುಚಂದ್ರಕೆ,ಇತ್ತೀಚಿನ ಮೈನಾ, ಹೀಗೆ ಹಲವಾರು.. ಕಾರ್ಯದಕ್ಷತೆಗೆ ಹೆಸರಾಗಿದ್ದ ಅಶೋಕಕುಮಾರ್, ನರಹಂತಕ ವೀರಪ್ಪನ್ ಹಿಡಿಯಲು ವಿಶೇಷ ತನಿಖಾ ದಳದೊಂದಿಗೆ ಮಲೆ ಮಾದೇಶ್ವರ ಬೆಟ್ಟಕ್ಕೆ ಹೋಗುವ ಮುನ್ನ ಪತ್ನಿಗೆ ...

READ MORE

Related Books