ಹುತಾತ್ಮ ಕಲಬುರ್ಗಿ

Author : ಕೆ.ಎಸ್. ಭಗವಾನ್

Pages 144

₹ 120.00




Year of Publication: 2016
Published by: ವಿಸ್ಮಯ ಪ್ರಕಾಶನ
Address: ವಿಸ್ಮಯ ಪ್ರಕಾಶನ, ಮೌನ, 366, ನವಿಲು ರಸ್ತೆ, ಕುವೆಂಪು ನಗರ, ಮೈಸೂರು-23
Phone: 9008798406

Synopsys

ಕಲಬುರ್ಗಿ ಅವರಂತಹ ಬಹುಶ್ರುತ ವಿದ್ವಾಂಸರ ಹತ್ಯೆ ಕಂಡು ನಾಡು ಅಷ್ಟೇ ಏಕೆ ಜಗತ್ತು ಮಮ್ಮಲ ಮರುಗಿತು. ನಾಡಿನ ವಿವಿಧ ಕ್ಷೇತ್ರದ ಮಂದಿ ಕಲಬುರ್ಗಿ ಅವರ ಘನ ವ್ಯಕ್ತಿತ್ವ ಕುರಿತು ಬರೆದರು. ಅವು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡವು. ಆ ಬಿಡಿ ಲೇಖನಗಳನ್ನು ಸಂಗ್ರಹಿಸಿ ಒಂದೆಡೆ ಈ ಕೃತಿಯಲ್ಲಿ ನೀಡಲಾಗಿದೆ. ಸಾಹಿತಿ ಭಗವಾನ್‌ ಇದರ ಸಂಪಾದಕರು. ಇದಲ್ಲದೆ ಕಲಬುರ್ಗಿ ಬದುಕಿದ್ದಾಗ ಮಾಡಲಾದ ಅವರ ಎರಡು ಸಂದರ್ಶನಗಳು ಮತ್ತು ಹತ್ಯೆ ಕುರಿತಂತೆ ಚಂಪಾ ಅವರು ನೀಡಿದ ಸಂದರ್ಶನವನ್ನೂ ಪ್ರಕಟಿಸಲಾಗಿದೆ.

About the Author

ಕೆ.ಎಸ್. ಭಗವಾನ್
(14 July 1945)

ವಿಮರ್ಶಕ, ಅನುವಾದಕರಾದ ಕೆ.ಎಸ್.ಭಗವಾನ್ ಅವರು 14-07-1945ರಂದು ಮೈಸೂರು ಜಿಲ್ಲೆಯ ಕಲ್ಲಹಳ್ಳಿಯಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ವಿಷಯದಲ್ಲಿ ಎಂ.ಎ ಪದವಿ ಪಡೆದಿರುವ ಅವರು ಅಮೆರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಡಿ.ಲಿಟ್.ಪದವಿಯನ್ನೂ ಪಡೆದಿದ್ದಾರೆ. ಬಂಡಾಯ ವಿಮರ್ಶೆಯ ಮೊದಲ ಮತ್ತು ಮುಖ್ಯ ವಿಮರ್ಶಕರಾದ ಭಗವಾನ್ ವಿಮರ್ಶೆಯಲ್ಲಿ ಅಂತರ್ ಶಿಸ್ತೀಯ ಅಧ್ಯಯನಗಳನ್ನು ಪ್ರಾರಂಭಿಸಿದವರು.  ಮೈಸೂರಿನ ಕುವೆಂಪು ನಗರದಲ್ಲಿ ವಾಸವಾಗಿರುವ ಅವರು, ಮೈಸೂರಿನ ಮಹಾರಾಜ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. ಅನುವಾದಕರಾಗಿ ಹೆಸರುವಾಸಿಯಾಗಿರುವ ಭಗವಾನ್ ಷೇಕ್ಸ್ ಪಿಯರ್ ನ ಒಂಬತ್ತು ಮಹತ್ವದ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರ ಕೃತಿ ಶಂಕರಾಚಾರ್ಯ ಮತ್ತು ಪ್ರತಿಗಾಮಿತನ ...

READ MORE

Related Books