ಹೈದರಾಲಿ

Author : ಡಿ.ಎ. ಶಂಕರ್

Pages 72

₹ 40.00




Year of Publication: 2006
Published by: ಅಭಿನವ ಪ್ರಕಾಶನ
Address: ಮುಖ್ಯರಸ್ತೆ, ಮಾರೇನಹಳ್ಳಿ, 17/18-2, 1ನೇ ವಿಜಯನಗರ, ಬೆಂಗಳೂರು -560040
Phone: 9448804905

Synopsys

ಕನ್ನಡ ಕಾವ್ಯ, ಅನುವಾದ, ವಿಮರ್ಶೆ, ಹಾಗೂ ನಾಟಕ ರಚನಾಕಾರರಾದ ಡಿ.ಎ ಶಂಕರ್‍ ವರು ರಚಿಸಿರುವ ನಾಟಕ ’ ಹೈದರಾಲಿ’.

ಈ ನಾಟಕದ ಮುಖ್ಯ ವಸ್ತು ಹೈದರಾಲಿ. ಮೈಸೂರು  ವಿಸ್ತರಣೆ, ಅದರ ಸ್ವಾತಂತ್ಯ್ರವನ್ನೇ ತನ್ನ ಗುರಿಯಾಗಿರಿಸಿಕೊಂಡಿದ್ದ ಈತ ಮೈಸೂರು ಇಂಗ್ಲಿಷರ ಕೈ ಸೇರದಂತೆ ಮಾಡಬೇಕು, ತನ್ನ ದೇಶ ಬಿಟ್ಟು ಓಡಿಸಬೇಕು, ಇವೇ ಮೊದಲಾದವು ಹೈದರನ ಗುರಿಯಾಗಿತ್ತು.  ಈ ನಾಟಕದ ಪಾತ್ರ ನಿರ್ವಹಣೆ ಹೈದರನ ತಂತ್ರಕ್ಕೆ ಪ್ರತಿತಂತ್ರ ಹೂಡಿದ ಬಗೆ, ಸಂಚಿಗೆ ಒಳಸಂಚು ಮಾಡಿದ ಬಗೆಯನ್ನು ತಿಳಿಸುವಂತದ್ದು.

ಹೈದರನ ಕ್ರಿಯೆಗಳ ಕಾಲವಿಸ್ತಾರ, ಸ್ಥಳ ವಿಸ್ತಾರ, ನಾಟಕದುದ್ದಕ್ಕೂ ಚಲಿಸುತ್ತದೆ.  ಹೈದರ್‍ ನಾಯಕನಾದವನು ಹೈದರಾಲಿ ಖಾನ್ ಬಹಾದ್ದೂರ್‍ ಆಗಿ, ಮುಂದೆ ದಳವಾಯಿ ಮತ್ತು ಸರ್ವಾಧಿಕಾರಿಯಾಗಿ ಸಾವನ್ನಪ್ಪುವವರೆಗೂ ನಡೆಯುವ ಘಟನಾವಳಿಗಳ ಸುತ್ತ ನಾಟಕ ಕ್ರಮಿಸುತ್ತದೆ.

ಇಮ್ಮಡಿ ಕೃಷ್ಣದೇವರಾಜ ಒಡೆಯರ್‍, ನಂಜರಾಜ ಒಡೆಯರ್‍, ಬೆಟ್ಟದ ಚಾಮರಾಜ ಒಡೆಯರ್‍ ಮತ್ತು ಆಸ್ಥಾನಕ್ಕೆ ಹೊಸದಾಗಿ ಆಯ್ಕೆಯಾದ ಬಾಲಕ ಹೈದರ್‍ ಈ ನಾಲಕ್ಕೂ ರಾಜರ ಕಾಲದ ಜೊತೆ ನಾಟಕ ಸಾಗುತ್ತದೆ.

About the Author

ಡಿ.ಎ. ಶಂಕರ್

ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದ ಡಿ.ಎ. ಶಂಕರ ಅವರು ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ.  ನಂತರ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದ ಅವರು ಮೈಸೂರು ವಿಶ್ವವಿದ್ಯಾನಿಲಯದ ಮೊದಲ ಎಮರಿಟಸ್ ಪ್ರೊಫೆಸರ್ ಆದವರು. ಕಾವ್ಯ, ಅನುವಾದ, ವಿಮರ್ಶೆ ಹಾಗೂ ನಾಟಕ ಹೀಗೆ ವಿವಿಧ ಪ್ರಕಾರಗಳಲ್ಲಿ ಶಂಕರ್ ಅವರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇಂಗ್ಲೆಂಡ್‌ನ ಫೀಲ್ಡ್ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿ ಪಡೆದ ಅವರು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡಿಯ ಫೆಲೋ ಆಗಿದ್ದರು. ಹಾಗೆಯೇ, ಕೆನಡಾದ ಬ್ರಿಟಿಷ್ ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ಫ್ಯಾಕಲ್ಟಿ ಫೆಲೋಶಿಪ್‌ನಲ್ಲಿ ಕಾರ್ಯನಿರ್ವಹಿಸಿದ್ದವರು. ಬೆಳಕಿನ ಮರ, ನಿಮ್ಮಲ್ಲೊಬ್ಬ, ಪವಾಡ  ಅವರ ...

READ MORE

Related Books