ಇಗೋ ಕನ್ನಡ ಸಂಯುಕ್ತ ಸಂಪುಟ

Author : ಜಿ. ವೆಂಕಟಸುಬ್ಬಯ್ಯ

Pages 820

₹ 675.00




Year of Publication: 2013
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580/01

Synopsys

ಇಗೋ ಕನ್ನಡ (ಸಂಯುಕ್ತ ಸಂಪುಟ)-ಈ ಕೃತಿಯನ್ನು ವಿದ್ವಾಂಸ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ರಚಿಸಿದ್ದು, ಕನ್ನಡ ಕಲಿಕೆ ಹಾಗೂ ಬೋಧನೆಗೆ ಪರಿಣಾಮಕಾರಿಯಾದ ಪುಸ್ತಕವಿದು. ಪ್ರಜಾವಾಣಿಯ ಅಂಕಣಗಳಲ್ಲಿ ಪ್ರಸಿದ್ಧಿ ಪಡೆದ ಈ ವಿಷಯದ ಬರೆಹಗಳು (ಇಗೋ ಕನ್ನಡದ ಮೂರು ಸಂಪುಟಗಳು) ಸೇರಿಸಿ ಸಂಯುಕ್ತ ಸಂಪುಟವಾಗಿದೆ. ಜನರಿಂದಲೇ ಕೇಳಲಾದ ಪದಗಳಿಗೆ ಇಲ್ಲಿ ವಿವರಣೆ ಇದೆ. ಪದದ ಮೂಲ, ವ್ಯುತ್ಪತ್ತಿ, ಅದು ಬಳಕೆಯಾದ ಪ್ರಸಿದ್ಧ ಕಾವ್ಯ, ಆಡುನುಡಿಗಳಲ್ಲಿ ಅದರ ರೂಪ ಬದಲಾವಣೆ ಹೀಗೆ ಎಲ್ಲ ವಿವರಗಳಿವೆ.

About the Author

ಜಿ. ವೆಂಕಟಸುಬ್ಬಯ್ಯ

ನಿಘಂಟು ತಜ್ಞರೆಂದೇ ಕನ್ನಡ ನಾಡಿನಲ್ಲಿ ಪ್ರಖ್ಯಾತರಾದ ವೆಂಕಟಸುಬ್ಬಯ್ಯನವರು ಹುಟ್ಟಿದ್ದು  1913 ಆಗಸ್ಟ್ 23 ಮಂಡ್ಯ ಜಿಲ್ಲೆಯ ಕೈಗೋನಹಳ್ಳಿಯಲ್ಲಿ. ಅವರು ಭಾಷಾ ತಜ್ಞರಾಗಿ, ಬರಹಗಾರರಾಗಿ, ಸಂಶೋಧಕರಾಗಿ, ಪ್ರಾಧ್ಯಾಪಕರಾಗಿ ನಾಡಿನಲ್ಲಿ ಪ್ರಸಿದ್ಧರಾಗಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ‘ಬಾಲ ಕರ್ನಾಟಕ’ ಸಂಘ ಸ್ಥಾಪನೆ ಮಾಡಿದರು. ಎಚ್.ಎಂ. ಶಂಕರ ನಾರಾಯಣರಾಯರು ಹೊರತಂದ ‘ರೋಹಿಣಿ’ ಕೈಬರಹದ ಪತ್ರಿಕೆಗೆ ಸಹಾಯ ನೀಡಿದರು. ಬೆಂಗಳೂರಿಗೆ ಬಂದ ನಂತರ ಸಾರ್ವಜನಿಕ ಚಟುವಟಿಕೆಗಳಲ್ಲಿ ಭಾಗಿಯಾದರು. 1954-56ರ ವರೆಗೆ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ, 1965-69ರ ವರೆಗೆ ಅಧ್ಯಕ್ಷರಾಗಿ, ಪರಿಷತ್ತಿನ ನಿಘಂಟು ಸಮಿತಿಯ ಸದಸ್ಯರಾಗಿ, 1965-67ರವರೆಗೆ ಕನ್ನಡ ವಿಶ್ವಕೋಶ ಸಮಿತಿಯ ಸದಸ್ಯರಾಗಿ, ವಿಶ್ವವಿದ್ಯಾಲಯದ ಅಕೆಡಮಿಕ್ ...

READ MORE

Related Books