ಇಲ್ಲಿಯವರೆಗೆ ಇಷ್ಟು

Author : ಜೋಗಿ (ಗಿರೀಶ್ ರಾವ್ ಹತ್ವಾರ್)

Synopsys

ಲೇಖಕ ಜೋಗಿ (ಗಿರಿಶ್ ರಾವ್ ಹತ್ವಾರ್) ಅವರ ಪ್ರವಾಸ ಕಥನ-ಇಲ್ಲಿಯವರೆಗೆ ಇಷ್ಟು. ಲೇಖಕರು ತಮ್ಮ ನೇಪಾಳದ ಪ್ರವಾಸದ ಅನುಭವವನ್ನು ದಾಖಲಿಸಿದ್ದಾರೆ. ಚಿತ್ತನ್ ಎಂಬ ಅಭಯಾರಣ್ಯ, ಅಲ್ಲಿಯ ರೆಸಾರ್ಟ್, ನಡುರಾತ್ರಿ ನಿದ್ದೆಬಾರದೇ ಹೊರಗೆ ಬಂದರೆ ಉದ್ದಕ್ಕೂ ಹಬ್ಬಿದ ಕಾಡು. ಬೆಳದಿಂಗಳು, ಆನೆ ಹೀಗೆ ತಮ್ಮಗಾದ ಭೀಕರ ಅನುಭವಗಳನ್ನು ಹಂಚಿಕೊಂಡಿದ್ದು ಈ ಕೃತಿಯ ವೈಶಿಷ್ಟ್ಯ. ಲೇಖಕರು ಹೇಳುವಂತೆ ‘ಬದುಕು ಭಯಬೀಳಿಸುವುದನ್ನು ಬಿಟ್ಟೇ ಬಿಟ್ಟಿದ್ದೆ. ಎಲ್ಲವನ್ನೂ ತುಂಬ ನಿರ್ವಿಕಾರವಾಗಿ ನೋಡಲು ಆರಂಭಿಸಿದ್ದೇವೆ. ಒಂದು ಸಣ್ಣ ರೋಚಕತೆ ಬೇಕು ಅನ್ನಿಸಿದಾಗಲೂ ನಾವು ಮೊರೆಹೋಗುವುದು ವರ್ತಮಾನ ಪತ್ರಿಕೆ, ಟೀವಿ ಅಥವಾ ಸಿನಿಮಾಗಳಿಗೆ ಅದರಾಚೆಗೊಂದು ಲೋಕವಿದೆ ಮತ್ತು ಆ ಜಗತ್ತಿನೆಲ್ಲಿ ಬೆರಗುಗಳಿವೆ ಎಂದು ಕಾಣಿಸಿದರು ಹಲವರು. ಅವಧೂತರು, ಗುರುಗಳು, ಗೆಳೆಯ-ಗೆಳತಿಯರು, ಜ್ಯೋತಿ, ಖುಷಿ, ಅಮ್ಮ ಎಲ್ಲರೂ ಆ ಪಟ್ಟಿಯಲ್ಲಿದ್ದಾರೆ’ ಎಂದು ಉಲ್ಲೇಖಿಸುತ್ತಾರೆ. ಅವರಿಗೆ ಕೃತಜ್ಞತೆ.

About the Author

ಜೋಗಿ (ಗಿರೀಶ್ ರಾವ್ ಹತ್ವಾರ್)
(16 November 1965)

ಜೋಗಿ, ಜಾನಕಿ, ಎಚ್‌. ಗಿರೀಶ್‌ ರಾವ್, ಸತ್ಯವ್ರತ...... ಹೀಗೆ ವಿವಿಧ ಅಂಕಿತನಾಮಗಳ ಮೂಲಕವೇ ಓದುಗರನ್ನು ತಲುಪಿದವರು ಗಿರೀಶ್‌ ರಾವ್‌ ಹತ್ವಾರ್‌ (ಜೋಗಿ). ವೃತ್ತಿಯಲ್ಲಿ ಪತ್ರಕರ್ತರಾಗಿರುವ ಜೋಗಿ ಅವರು ಹುಟ್ಟಿದ್ದು 1965 ನವೆಂಬರ್‌ 16ರಂದು. ಮೂಲತಃ ಸೂರತ್ಕಲ್‌ ಸಮೀಪದ ಹೊಸಬೆಟ್ಟು ಊರಿನವರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.  ಹಾಯ್‌ ಬೆಂಗಳೂರು ವಾರಪತ್ರಿಕೆಯಲ್ಲಿ ‘ರವಿ ಕಾಣದ್ದು’, ‘ಜಾನಕಿ ಕಾಲಂ’ ಅಂಕಣ ಬರಹಗಳ ಮೂಲಕ ಓದುಗರಿಗೆ ಪರಿಚಯವಾದ ಜೋಗಿ ಅವರು ಪ್ರಸ್ತುತ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ವೃತ್ತಿ ಜೊತೆ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ಹಲವಾರು ಕೃತಿಗಳನ್ನು ...

READ MORE

Related Books