ಇಪ್ಪತ್ತು ವಿಜ್ಞಾನಿಗಳು

Author : ಜೆ.ಆರ್. ಲಕ್ಷ್ಮಣರಾವ್

Pages 112

₹ 45.00




Year of Publication: 2014
Published by: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು
Address: ಬೆಂಗಳೂರು

Synopsys

ಲೇಖಕ ಡಾ. ಜೆ.ಆರ್. ಲಕ್ಷ್ಮಣರಾವ್ ಅವರ ಕೃತಿ-ಇಪ್ಪತ್ತು ವಿಜ್ಞಾನಿಗಳು. ನ್ಯೂಟನ್, ಆರ್ಯುಭಟ, ಲಿಯೋನಾರ್ಡೋ ಡಾ ವಿನ್ಸಿ, ಥಾಮಸ್ ಎಡಿಸನ್ ಸೇರಿದಂತೆ ಒಟ್ಟು 20 ವಿಜ್ಞಾನಿಗಳ ಬದುಕು-ಸಾಧನೆಯನ್ನು ವಿವರಿಸಿ-ವಿಶ್ಲೇಷಿಸಿದ ಕೃತಿ ಇದು. ಮಕ್ಕಳಿಗೆ ತುಂಬಾ ಪ್ರೇರಣಾತ್ಮಕ ಬರೆಹಗಳನ್ನು ಈ ಕೃತಿ ಒಳಗೊಂಡಿದೆ.

About the Author

ಜೆ.ಆರ್. ಲಕ್ಷ್ಮಣರಾವ್
(21 January 1921 - 29 December 2017)

ಜಗಳೂರು ರಾಘವೇಂದ್ರರಾವ್ ಲಕ್ಷ್ಮಣರಾವ್ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಜೆ.ಆರ್‌. ಲಕ್ಷ್ಮಣರಾವ್ ಎಂದೇ ಚಿರಪರಿಚಿತರು. 1921 ಜನವರಿ 21 ರಂದು ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಜನಿಸಿದರು. ತಂದೆ ರಾಘವೇಂದ್ರ ರಾವ್ ಮತ್ತು ತಾಯಿ ನಾಗಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಜಗಳೂರಿನಲ್ಲಿ ನಡೆಸಿದ ಅವರು  ಪ್ರೌಢ ಶಾಲೆಯ ಅಭ್ಯಾಸ ದಾವಣಗೆರೆಯಲ್ಲಿ ಪೂರ್ಣಗೊಳಿಸಿದರು. ಈಗ ಯುವರಾಜ ಕಾಲೇಜು ಎಂದು ಕರೆಯಲಾಗುವ ’ಮೈಸೂರಿನಲ್ಲಿ ಇಂಟರ್ ಮೀಡಿಯೆಟ್ ಕಾಲೇಜ್’ ಅಧ್ಯಯನ ಮುಂದುವರೆಸಿದ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ, ರಸಾಯನ ಶಾಸ್ತ್ರದಲ್ಲಿ ಎಮ್ಮೆಸ್ಸಿ ಪದವಿ ಪಡೆದರು. ತುಮಕೂರು ಇಂಟರ್ ಮೀಡಿಯೆಟ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯಾರಂಭ ಮಾಡಿದ ಅವರು ಬೆಂಗಳೂರಿನ ಸೇಂಟ್ರಲ್ ಕಾಲೇಜ್, ಶಿವಮೊಗ್ಗೆಯ ಸಹ್ಯಾದ್ರಿ ...

READ MORE

Related Books