ಈಶ್ವರ ಅಲ್ಲಾ ತೇರೋ ನಾಮ್

Author : ಮಹೇಶ್ ಕುಮಾರ್ ಸಿ.ಎಸ್

Pages 222

₹ 180.00




Year of Publication: 2014
Published by: ಪ್ರಗತಿ ಗ್ರಾಫಿಕ್ಸ್
Address: #119, 3ನೇ ತಿರುವು, 8ನೇ ಮುಖ್ಯರಸ್ತೆ, ಹಂಪೀನಗರ, ಬೆಂಗಳೂರು- 560104

Synopsys

ಮಹೇಶ್ ಕುಮಾರ್ ಸಿ.ಎಸ್ ಅವರ ಸಂಶೋಧನಾ ಕೃತಿ ‘ಈಶ್ವರ ಅಲ್ಲಾ ತೇರೋ ನಾಮ್ ’- ಕೆಲ ದಶಕಗಳಿಂದ ಕರ್ನಾಟಕದ ಗುರು ದತ್ತಾತ್ರೇಯ ಬಾಬಾ ಬುಡನ್ಗಿರಿ ದರ್ಗಾದ ವಿವಾದ ಕಾರಣ ಮತ್ತು ಅದರ ನಿವಾರಣೆಗೆ ಒಂದು ಪರಿಹಾರವನ್ನು ಈ ಕೃತಿಯು ತನ್ನದೇ ನೆಲೆಯಲ್ಲಿ ಮಂಡಿಸುತ್ತದೆ. ಗಿರಿಯ ವಿವಾದವೇ ಈ ಸಂಶೋಧನೆಯ ಕೇಂದ್ರ ಪ್ರಶ್ನೆಯನ್ನು – ದರ್ಗಾಗಳು ಸಿಂಕ್ರಟಿಸಂನ ಪರಿಣಾಮವೇ? – ರೂಪಿಸುವುದು ಮಾತ್ರವಲ್ಲದೆ, ಅದು ಗಿರಿಯ ವಿವಾದವನ್ನು ಬಗೆಹರಿಸಲು ಮತ್ತಷ್ಟು ವಿಶಾಲ ಪರಿಪ್ರೇಕ್ಷ್ಯದಲ್ಲಿ ದರ್ಗಾಗಳನ್ನು ಇಟ್ಟು ನೋಡಬೇಕಾದ ಅಗತ್ಯವನ್ನು ಸೂಚಿಸುತ್ತದೆ.

ಈ ಅಗತ್ಯವನ್ನು ಆಧರಿಸಿ ಮಹೇಶ್, ದರ್ಗಾವನ್ನು ಸಿಂಕ್ರಟಿಸಂ ಎಂದು ಪರಿಕಲ್ಪಿಸುವುದು ಏಕೆ ಸರಿಯಲ್ಲ, ಅದು ಹೇಗೆ ದರ್ಗಾದ ಶ್ರದ್ಧೆಯ ಭಾಗವಾಗಿರುವ ಜನರ ದೃಷ್ಟಿಗೆ ಅನುಗುಣವಾಗಿಲ್ಲ ಎನ್ನುವುದನ್ನು ವಿವರಿಸುತ್ತಾ, ಮುಂದೆ ಹೋಗಿ ದರ್ಗಾ ಸಿಂಕ್ರಟಿಸಂನ ಪರಿಣಾಮವಲ್ಲ ಎಂದು ವಾದಿಸುತ್ತಾರೆ. ಈ ವಾದ ಮಂಡನೆಗೆ, ಸಿಂಕ್ರಟಿಸಂ ಪರಿಭಾಷೆಯ ಪೂರ್ವಗ್ರಹಿಕೆ, ಭಾರತದಲ್ಲಿ ಇದರ ಬಳಕೆಯ ಇತಿಹಾಸವನ್ನು ಪರಿಶೀಲನೆಗೆ ಮತ್ತು ಈ ಪರಿಕಲ್ಪನೆಯ ಬಳಕೆ ಮಾಡುವ ವಿದ್ವಾಂಸರ ತಿಳುವಳಿಕೆಯ ಚೌಕಟ್ಟನ್ನು ಹೊರತೆಗೆದು ತೋರಿಸುತ್ತದೆ. ಇದು ಸಂಶೋಧನೆಯ ಅರ್ಧ ದಾರಿಯ ಪ್ರಯಾಣವಾಗಿದೆ. ಉಳಿದರ್ಧ, ದರ್ಗಾಗಳಿಗೆ ಸಿಂಕ್ರಟಿಸಂಗಿಂತ ಭಿನ್ನವಾದ ವಿವರಣೆಯನ್ನು, ಅದಕ್ಕೆ ನಡೆದುಕೊಳ್ಳುವ ಜನರ ಗ್ರಹಿಕೆಯನ್ನು – ಸಂಶೋಧಕರ ಮಾತಿನಲ್ಲೇ ಹೇಳುವುದಾದರೆ, ವಸ್ತು ಪಾತಳಿಯ ಹಂತದಲ್ಲೇ – ವಿವರಿಸುವ ಸವಾಲನ್ನು ಕೈಗೆತ್ತಿಕೊಳ್ಳುತ್ತದೆ.

About the Author

ಮಹೇಶ್ ಕುಮಾರ್ ಸಿ.ಎಸ್
(25 May 1982)

ಲೇಖಕ, ಸಂಶೋಧಕ, ಪ್ರಕಾಶಕರೂ ಆಗಿರುವ ಮಹೇಶ್ ಕುಮಾರ್ ಸಿ.ಎಸ್ ಅವರು ಮೂಲತಃ ಬೆಂಗಳೂರಿನ ಚಿಕ್ಕನಹಳ್ಳಿ ಗ್ರಾಮದವರು. ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಎಂ.ಎ ಪದವಿ ಪಡೆದ ಮಹೇಶ್ ಅವರು ಯೂರೋಪ್ ಬೆಲ್ಜಿಯಂನ ಫೆಂಟ್ ವಿಶ್ವವಿದ್ಯಾನಿಲಯದಿಂದ ಫೇಲೋಶಿಪ್ ಪಡೆದು. ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪಿ.ಎಚ್.ಡಿ ಪೂರ್ಣಗೊಳಿಸಿದ್ದಾರೆ. ಜೊತೆಗೆ ಭಾರತ ಸರಕಾರದ ವಿಶ್ವವಿದ್ಯಾಲಯದ ಧನ ಸಹಾಯ ಆಯೋಗದಿಂದ ಡಾ. ರಾಧಕೃಷ್ಣ 2015-17ನೇ ಸಾಲಿನಲ್ಲಿ ಪೋಸ್ಟ್ ಡಾಕ್ಟ್ರಲ್ ಫೆಲೋ ಆಗಿ ಆಯ್ಕೆಯಾಗಿದ್ದರು. ಕಳೆದ 13 ವರ್ಷಗಳಿಂದ ಇಸ್ಲಾಂ ಮತ್ತು ಭಾರತೀಯ ಸಂಪ್ರದಾಯಗಳ ಒಡನಾಟದ ಬಗೆಗೆ ಸಂಶೋಧನೆ ನಡೆಸುತ್ತಿರುವ ಮಹೇಶ್ ಅವರು ಈ ವಿಚಾರವಾಗಿ ಎರಡು ...

READ MORE

Related Books