ಇಷ್ಟೋಪದೇಶ

Author : ಎರ್ತೂರು ಶಾಂತಿರಾಜಶಾಸ್ತ್ರಿ

Pages 44

₹ 100.00




Year of Publication: 2008
Published by: ಪಂಡಿತರತ್ನ ಎ.ಶಾಂತಿರಾಜಶಾಸ್ತ್ರಿ ಟ್ರಸ್ಟ್
Address: ಜಯನಗರ, ಬೆಂಗಳೂರು- 560070

Synopsys

ಶ್ರೀಮತ್ಪೂಜ್ಯಪಾದಾಚಾರ್ಯ ವಿರಚಿತ ಇಷ್ಟೋಪದೇಶವನ್ನು ಎರ್ತೂರು ಶಾಂತಿರಾಜಶಾಸ್ತ್ರಿಗಳು ವ್ಯಾಖ್ಯಾನಸಿದ್ದಾರೆ. ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧಪುರುಷಾರ್ಥಗಳಲ್ಲಿ ಮೊದಲನೆಯದಾದ ಧರ್ಮಪುರುಷಾರ್ಥವು ನ ತಂ ವಿನಾ ಯದ್ಭವ ತೋರ್ಥಕಾಮೌ ಎನ್ನುವಂತೆ ಅರ್ಥಕಾಮಪುರುಷಾರ್ಥಗಳಿಗೆ ಸಾಧನವಾಗಿರುವುದಲ್ಲದೆ ಪ್ರತಿಯೊಬ್ಬ ಜೀವಾತ್ಮನ ಪರಮಧ್ಯೇಯವಾಗಿರುವ ಮೋಕ್ಷ ಪುರುಷಾರ್ಥದ ಪ್ರಾಪ್ತಿಗೂ ಸಾಧನವಾಗಿರುವುದು. ಆದುದರಿಂದ ಪ್ರತಿಯೊಬ್ಬ ಆತ್ಮಹಿತಕಾಂಕ್ಷಿಯೂ ಧರ್ಮಪುರುಷಾರ್ಥಕ್ಕೆ ಬಾಧೆಯಿಲ್ಲದಂತೆ ಅರ್ಥಕಾಮ ಪುರುಷಾರ್ಥಗಳನ್ನು ಅನುಭವಿಸುತ್ತ ಮೋಕ್ಷಪುರುಷಾರ್ಥದಲ್ಲಿ ಗುರಿಯನ್ನಿಟ್ಟು ಸಕಲಸಾಧನಗಳೊದಗಿದಾಗ ಅದನ್ನು ದೊರಕಿಸುವುದಕ್ಕೆ ಪ್ರಯತ್ನಪರನಾಗಬೇಕೆಂದು ಧರ್ಮಶಾಸ್ತ್ರವು ಹೇಳುತ್ತದೆ. ಈ ಚತುರ್ವಿಧಪುರುಷಾರ್ಥಗಳನ್ನು ಬೋಧಿಸುವ ಗ್ರಂಥಗಳಿಗೆ ಯಥಾಕ್ರಮವಾಗಿ ಧರ್ಮಶಾಸ್ತ್ರ, ಅರ್ಥಶಾಸ್ತ್ರ, ಕಾಮಶಾಸ್ತ್ರ, ಮೋಕ್ಷಶಾಸ್ತ್ರ ಅಥವಾ ಅಧ್ಯಾತ್ಮಶಾಸ್ತ್ರಗಳೆಂದು ಹೆಸರು. ಸಕಲಶಾಸ್ತ್ರಗಳಲ್ಲಿ ಮುಖ್ಯಸಾರವಾದುದು ಅಧ್ಯಾತ್ಮಶಾಸ್ತ್ರ. ಸಕಲವಿದ್ಯೆಗಳಲ್ಲಿ ಮುಖ್ಯಸಾರವಾದುದು ಅಧ್ಯಾತ್ಮವಿದ್ಯೆ-ವೇದಾಂತವಿದ್ಯೆ. ಇಂತಹ ವಿಷಯವನ್ನು ಬೋಧಿಸುವ ಗ್ರಂಥಗಳಲ್ಲಿ ಈ ಇಷ್ಟೋಪದೇಶ ಗ್ರಂಥವೂ ಒಂದಾಗಿದೆ. ಈ ಗ್ರಂಥವನ್ನು ರಚಿಸಿದವರು ಜೈನಸಮಾಜಕ್ಕೆ ಪರಮಪೂಜ್ಯರಾದ ಪೂಜ್ಯಪಾದಾಚಾರ್ಯರು. ಆ ಮಹಾತ್ಮರು ತರ್ಕ ವ್ಯಾಕರಣ ಆಗಮ ವೈದ್ಯವಿದ್ಯೆಗಳಲ್ಲಿ ಅಸಾಧಾರಣ ವಿದ್ವಾಂಸರಾಗಿದ್ದರು. ಅವರು ಸಂಸ್ಕೃತದಲ್ಲಿ ಜೈನೇಂದ್ರವ್ಯಾಕರಣವನ್ನೂ ತತ್ತ್ವಾರ್ಥಸೂತ್ರಗ್ರಂಥಕ್ಕೆ ಸರ್ವಾರ್ಥಸಿದ್ಧಿಯೆಂಬ ಸಂಸ್ಕೃತವ್ಯಾಖ್ಯಾನವನ್ನೂ ಸಂಸ್ಕೃತದಶಭಕ್ತಿಗಳನ್ನೂ ಯಂತ್ರಮಂತ್ರಶಾಸ್ತ್ರಗ್ರಂಥಗಳನ್ನೂ ಲೋಕೋಪಕಾರ್ಥವಾಗಿ ಕಲ್ಯಾಣ ಕಾರಕ ವೆಂಬ ಅದ್ವಿತೀಯವಾದ ವೈದ್ಯಗ್ರಂಥವನ್ನೂ ಸಮಾಧಿಶತಕ ಮತ್ತು ಇಷ್ಟೋಪದೇಶವೆಂಬ ಆಧ್ಯಾತ್ಮವಿಷಯಕ ಗ್ರಂಥಗಳನ್ನೂ ಬರೆದ ದಿಗಂತ ವಿಶ್ರಾಂತಕೀರ್ತಿಶಾಲಿಗಳಾಗಿದ್ದಾರೆ. ಅವರಿಗೆ ಮೊದಲು ದೇವನಂದಿಯೆಂದೂ ಜೀನೇಂದ್ರಬುದ್ಧಿಯೆಂದೂ ಹೆಸರುಗಳಿದ್ದವು. ಅವರ ತಪಃ ಪ್ರಭಾವವನ್ನು ನೋಡಿ ವನದೇವತೆಗಳು ಅವರ ಪಾದಗಳನ್ನು ಪೂಜಿಸಿದುದರಿಂದ ಅವರಿಗೆ ಪೂಜ್ಯಪಾದರೆಂದು ಹೆಸರು ಬಂದಿತ್ತು. ಅವರು ಗಗನ ಗಮನಸಾಮರ್ಥ್ಯವುಳ್ಳವರೂ ವಿದೇಹಕ್ಷೇತ್ರಕ್ಕೆ ಹೋಗಿ ಸಾಕ್ಷಾಜ್ಜಿನದರ್ಶನವನ್ನು ಮಾಡಿದವರೂ ತಮ್ಮ ಪಾದಜಲಸ್ಪರ್ಶದಿಂದ ಕಬ್ಬಿಣವನ್ನು ಬಂಗಾರವನ್ನಾಗಿ ಮಾಡುವ ಸಾಮರ್ಥ್ಯವುಳ್ಳವರೂ ಆಗಿದ್ದರು. ಈ ವಿಷಯವು ಶ್ರವಣಬೆಳ್ಗೊಳದ 64, 254, 258 ನೆಯ ನೆಯ ಶಾಸನಗಳಿಂದ ಗೊತ್ತಾಗುವುದು. ಚಾಮುಂಡರಾಯನು ಅವರನ್ನು ಗಗನಗಮನಸಾಮರ್ಥ್ಯರ್ ತಾರ್ಕಿಕತಿಳಕರ್ ಎಂದೂ ವೃತ್ತ ವಿಲಾಸನು ವಿಶ್ವವಿದ್ಯಾಭರಣಂ ದೇವಾಂಗನಾರಾಧಿತಪದಕಮಳಂ ಎಂದೂ ಪಾರ್ಶ್ವಪಂಡಿತನು ಸಕಲೋರ್ವಿನುತಪೂಜ್ಯಪಾದಮುನಿಪಂ ಕಾರುಣ್ಯದುಗ್ಧಾರ್ಣವಂ ಎಂದೂ ಹೊಗಳಿದ್ದಾರೆ. ಅವರು ಶಕವರ್, 300 ರಲ್ಲಿ ಈಗ್ಗೆ 1695 ವರ್ಷಗಳ ಹಿಂದೆ ಕೊಳ್ಳೇಗಾಲದಲ್ಲಿ ಜನಿಸಿದರೆಂದು ರಾಜಾವಲೀ ಕಥೆಯಿಂದ ಗೊತ್ತಾಗುವುದು. ಆ ಮಹನೀಯರು ಈ ಗ್ರಂಥದ ಕರ್ತರೆಂದ ಮೇಲೆ ಇದರ ಮಹತ್ವ್ತವನ್ನು ಹೆಚ್ಚಾಗಿ ವರ್ಣಿಸಬೇಕಾದುದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಪಣಪಿಲ ಅರಮನೆಯ ಶ್ರೀಮಾನ್ ಶ್ರೀವರ್ಮ ಶೆಟ್ಟರೂ ಅವರ ಧರ್ಮಪತ್ನಿ ಶ್ರೀಮತೀ ದೇಜಮ್ಮನವರೂ ಮೂಡಬಿದಿರೆಯ ಸಿದ್ಧಾಂತ ಬಸ್ತಿನಲ್ಲಿ ಆಶ್ವಯುಜ ಶುದ್ಧ-8-ಜೀವದಯಾಷ್ಟಮಿಯ ದಿವಸ ಎಂದಿನಂತೆ ಶಾಸ್ತ್ರದಾನವನ್ನು ಮಾಡುವುದಕ್ಕಾಗಿ ಈ ಸಲ ಈ ಅಧ್ಯಾತ್ಮ ಗ್ರಂಥವನ್ನು ಆರಿಸಿದ್ದಾರೆ. ಆ ಧರ್ಮಾತ್ಮರುಗಳ ಧಾರ್ಮಿಕ ಪ್ರೇಮವೂ ಔದಾರ್ಯೂ ಸ್ತುತ್ಯವಾಗಿವೆ.

About the Author

ಎರ್ತೂರು ಶಾಂತಿರಾಜಶಾಸ್ತ್ರಿ

ಎರ್ತೂರು ಶಾಂತಿರಾಜ ಶಾಸ್ತ್ರಿಗಳು ಮೂಲತಃ ದಕ್ಷಿಣ ಕನ್ನಡ ಜಿಲ್ಲೆ, ಕಾರ್ಕಳ ತಾಲ್ಲೂಕಿನ ಜೈನಕಾಶಿ ಮೂಡುಬಿದರೆ ಬಳಿಯ ಎರ್ತೂರು ಎಂಬ ಸಣ್ಣ ಹಳ್ಳಿಯವರು. ಸಾಧಾರಣ ರೈತ ಕುಟುಂಬದಲ್ಲಿ 1888ರಲ್ಲಿ ಜನಿಸಿದರು. ತಂದೆ- ಧರಣಪ್ಪಾರ್ಯ ಮತ್ತು ತಾಯಿ- ಚೆಲುವಮ್ಮ. ಚಿಕ್ಕಂದಿನಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡು ಸುತ್ತಮುತ್ತಲಿನ ಪ್ರೀತಿಯ ತೊಟ್ಟಿಲಲ್ಲಿ ಬೆಳೆದರು. ಅವರ ಪ್ರಾರಂಭಿಕ ವಿದ್ಯಾಭ್ಯಾಸವೆಲ್ಲ ಎರ್ತೂರು ಮತ್ತು ಕಾರ್ಕಳದಲ್ಲಿ ನಡೆದವು. ಪೂರ್ವಾಶ್ರಮದಲ್ಲಿ ಅವರ ಅಜ್ಜ (ತಾಯಿಯ ತಂದೆ) ನವರಾಗಿದ್ದ ಆದಿಸಾಗರ(ಆದಿರಾಜಯ್ಯ) ಮುನಿಗಳು, ಕಾರ್ಕಳದ ಅಂದಿನ ಶ್ರೀಗಳು ಮತ್ತು ಶ್ರವಣಬೆಳಗೊಳದ ಸ್ವಸ್ತಿಶ್ರೀ ನೇಮಿಸಾಗರ ವರ್ಣಿಯವರ ಮಹದಾಶೀರ್ವಾದ ಮತ್ತು ಮಾರ್ಗದರ್ಶನದ ಫಲವಾಗಿ ವಿದ್ಯಾಭ್ಯಾಸವು ...

READ MORE

Related Books