ಇಟಗಿ ಶ್ರೀ ಭೀಮಾಂಬಿಕೆ

Author : ಚನ್ನಪ್ಪ ಕಟ್ಟಿ

Pages 68

₹ 40.00




Year of Publication: 2014
Published by: ಪೂಜ್ಯ ಶ್ರೀ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ
Address: ಸಾರಂಗಿಮಠ, ಸಿಂದಗಿ, ಬಿಜಾಪುರ

Synopsys

ಮಕ್ಕಳ ಸಾಹಿತ್ಯ ಮಾಲಿಕೆಯಲ್ಲಿ ಪ್ರಕಟವಾದ ಕೃತಿ ‘ಇಟಗಿ ಶ್ರೀಭೀಮಾಂಬಿಕೆ’. ಗದಗ ಜಿಲ್ಲೆಯ ರೋಣ ತಾಲೂಕಿನ ಇಟಗಿ ಗ್ರಾಮದಲ್ಲಿ ಶ್ರೀ ಭೀಮಾಂಬಿಕೆ ಕರ್ತೃ ಗದ್ದಿಗೆ ಇದೆ. ಇದು ಇಂದು ಇಷ್ಟಾರ್ಥ ಸಿದ್ದ ತಾಣವಾಗಿದೆ. ಶಿವಶರಣೆಯಾಗಿ, ಪರಮ ಭಕ್ತರನ್ನು ಗಳಿಸಿ ಅನೇಕರ ಮನೆ ಮನ ಪರಿವರ್ತನೆ ಮಾಡಿದ ಮಹಾಮಾತೆ ಭೀಮಾಂಬಿಕೆ. ಬಾಲ್ಯದಲ್ಲಿ ಇಟಗಿ ಭೀಮಮ್ಮ ಕಲಿತಿರಲಿಲ್ಲ. ಅದಕ್ಕೆ ಆಕೆಯಲ್ಲಿ ಚಿಂತೆಯು ಇರಲಿಲ್ಲ. ಭೀಮವ್ವ ಅವರ ಸಾಧನೆ ಬದುಕಿನುದ್ದಕ್ಕೂ ಆಧ್ಯಾತ್ಮಿಕ ಸಾಧನೆಯಾಗಿತ್ತು.

ಭೀಮಮ್ಮ ತನ್ನ ಜನಿಸಿದ ಗ್ರಾಮ ಬಿಟ್ಟು ಯಾವ ಗುರುವಿನ ಅನುಹ ಪಡೆಯಲು ಹೋದವಳಲ್ಲ. ಆಧ್ಯಾತ್ಮ ಧರ್ಮಗಳನ್ನು ಗುರುವೆಂದು ನಂಬಿ ಬಡವರ, ಆಶ್ರಯ ಬಯಸಿ ಬರುವವರ ಸಂಕಷ್ಟಗಳಿಗೆ ಪರಿಹಾರ ಸೂಚಿಸುತ್ತಾ. ಯಾರೇ ಬಂದರೂ ಅವರ ಕಣ್ಣೀರು ಒರಿಸಿ ಸಾಂತ್ವನ ಹೇಳಿ ಆತ್ಮಸ್ಥೈರ್ಯ ತುಂಬಿ ಮೆರೆದ ಧೀಮಂತ ಸಾಧ್ವಿಮಣಿ. ಇಟಗಿ ಶ್ರೀ ಭೀಮಾಂಬಿಕಾ ತಾಯಿ ಹಾಲುಮತ ಕೃಷಿಕ ಕುಟುಂಬದಲ್ಲಿ ಜನಿಸಿದವರು. ಸಂಸಾರಿಕಾಶ್ರಮ ಸ್ವೀಕರಿಸಿ, ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಅನೇಕ ಜನರಿಗೆ ಆಶ್ರಯವಾದರು. ನಿರಂತರ ಅನ್ನದಾಸೋಹವನ್ನಿಟ್ಟು ಮಹಾ ದಾಸೋಹಿಯನಿಸಿದರು. ಈ ಮಹಾದೇವತೆಯ ಜೀವನ ಚಿತ್ರಣವೇ ಈ ಕೃತಿ. ಕವಿ, ಕಥೆಗಾರ ಚನ್ನಪ್ಪ ಕಟ್ಟಿಯವರು ಶ್ರೀ ಭೀಮಾಂಬಿಕೆಯವರ ಜೀವನ ಚಿತ್ರಣವನ್ನು ಅರ್ಥಪೂರ್ಣವಾಗಿ ರಚಿಸಿದ್ದಾರೆ. 

About the Author

ಚನ್ನಪ್ಪ ಕಟ್ಟಿ
(01 May 1956)

ಡಾ. ಚನ್ನಪ್ಪ ಕಟ್ಟಿಯವರ ಪೂರ್ಣ ಹೆಸರು ಚನ್ನಪ್ಪ ಕನಕಪ್ಪ ಕಟ್ಟಿ. ಮೂಲತಃ  ಗದಗ ಜಿಲ್ಲೆ, ರೋಣ ತಾಲ್ಲೂಕು ಹಿರೇಹಾಳ ಗ್ರಾಮದವರು. ಪ್ರಾಥಮಿಕ ಶಿಕ್ಷಣವನ್ನು ಹಿರೇಹಾಳ ಗ್ರಾಮದಲ್ಲಿ ಮುಗಿಸಿದ ಅವರು ಮಾಧ್ಯಮಿಕ ಶಿಕ್ಷಣವನ್ನು ಶ್ರೀ ವೀರಪುಲಿಕೇಶಿ ಮಾಧ್ಯಮಿಕ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ. ಆನಂತರ ಶ್ರೀವೀರಪುಲಿಕೇಶಿ ಪದವಿ ಪೂರ್ವ ಮಹಾವಿದ್ಯಾಲಯ, ಬಾದಾಮಿಯಲ್ಲಿ ಪದವಿ ಪೂರ್ಣ ಶಿಕ್ಷಣ ಪಡೆದ ಅವರು, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡದಲ್ಲಿ ಇಂಗ್ಲಿಷ್ ನಲ್ಲಿ ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆನಂತರ ಸಿಂದಗಿಯ ಜಿ.ಪಿ.ಪೋರವಾಲ ಕಲಾ, ವಾಣಿಜ್ಯ ಹಾಗೂ ವಿ.ವಿ.ಸಾಲಿಮಠ ವಿಜ್ಞಾನ ...

READ MORE

Related Books