ಇತಿಹಾಸದ ರಾಜಕೀಯ

Author : ಕೆ.ಎಲ್. ಗೋಪಾಲಕೃಷ್ಣಯ್ಯ

Pages 96

₹ 63.00




Year of Publication: 2011
Published by: ನವಕರ್ನಾಟಕ ಪಬ್ಲಿಕೇಶನ್ಸ್‌
Address: ಎಂಬಸಿ ಸೆಂಟರ್, ಕ್ರೂಸೆಂಟ್ ರಸ್ತೆ, ಕುಮಾರ್ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 080- 22161900

Synopsys

ಲೇಖಕ ಡಾ. ಕೆ. ಎಲ್.‌ ಗೋಪಾಲಕೃಷ್ಣಯ್ಯನವರ, ಇತಿಹಾಸಕ್ಕೆ ಸಂಬಂಧಿಸಿದ ಕೃತಿ ʼಇತಿಹಾಸದ ರಾಜಕೀಯʼ. ಹಲವು ಮೂಲಗಳಿಂದ ಹಾಗೂ ಆಕರ ಗ್ರಂಥಗಳಿಂದ ಸಂಗ್ರಹಿಸಿದ ವಿಷಯಗಳನ್ನು ಲೇಖಕರು ಈ ಕೃತಿಯಲ್ಲಿ ವಿಮರ್ಶಾತ್ಮಕವಾಗಿ ಸಮೀಕ್ಷಿಸಿದ್ದಾರೆ. ಇತಿಹಾಸದ ರಾಜಕೀಯದ ಮೇಲಿನ ಪ್ರಕರಣವನ್ನು ಸೂಕ್ಷ್ಮ ವಿಶ್ಲೇಷಣೆಗೊಳಪಡಿಸಿ ವಸ್ತು ಸ್ಥಿತಿಯನ್ನು ಗ್ರಹಿಸಲು ಇದು ಸಹಾಯಮಾಡುತ್ತದೆ. ಇದರಲ್ಲಿ ಆರ್ಯರು ಭಾರತಕ್ಕೆ ಹೊರಗಿನಿಂದ ವಲಸೆ ಬಂದವರು ಮತ್ತು ಖಗ್ವೇದವು ಆರ್ಯರ ಹಿಂದಿನ ಹಾಗೂ ನಂತರದ ಅನುಭವಗಳನ್ನು ಪ್ರತಿಫಲಿಸುತ್ತದೆ ఎంబ ಅಭಿಪ್ರಾಯಗಳ ಸತ್ಯಾಂಶಗಳ ಬಗ್ಗೆಯೂ ಚರ್ಚಿಸಲಾಗಿದೆ. ಈ ಮಧ್ಯೆ ಇಬ್ಬರು ವಿದ್ವಾಂಸರು ಸಿಂಧೂ ಲಿಪಿಯನ್ನು ನಿರ್ವಚಿಸಿ, ಆರ್ಯರ ವಲಸೆ ಕುರಿತು ಸಮರ್ಥ ಆಧಾರ ಒದಗಿಸಿದ ಕುರಿತಾಗಿಯೂ ಇಲ್ಲಿ ಹೇಳಲಾಗಿದೆ.

About the Author

ಕೆ.ಎಲ್. ಗೋಪಾಲಕೃಷ್ಣಯ್ಯ

ಡಾ. ಕೆ.ಎಲ್. ಗೋಪಾಲಕೃಷ್ಣಯ್ಯ ಅವರು ಮೂಲತಃ (ಜನನ: 18-07-1938) ಕಳಸಪುರದವರು. ಎಂ.ಎ. ಹಾಗೂ ಪಿಎಚ್ ಡಿ ಪದವೀಧರರು. ಕಾಲೇಜು ಅಧ್ಯಾಪಕರಾಗಿ ನಿವೃತ್ತರು. ಚಿಂತಕರು. ಹೊಸತು ಮಾಸಪತ್ರಿಕೆಯ ಸಹ ಸಂಪಾದಕರು. ಕೃತಿಗಳು: ತಿರುವುಗಳು (ಕಾದಂಬರಿ), ಸಮಾಜವಾದ ಪರಿಚಯ; ಶತಮಾನದ ಅಂಚಿನಲ್ಲಿ ಶಿಕ್ಷಣ; ಧರ್ಮ ನಿರಪೇಕ್ಷತೆ ಮತ್ತು ಅಲ್ಪಸಂಖ್ಯಾತರು, ಭಾರತೀಯ ಇತಿಹಾಸದ ವೈಲಕ್ಷಣಗಳು (ಅನುವಾದಿತ ಕೃತಿಗಳು), ಕನ್ನಡ ಸಾಹಿತ್ಯದಲ್ಲಿ ಪುರಾಣ ಪ್ರಜ್ಞೆ(ಪಿಎಚ್ ಡಿ ಮಹಾಪ್ರಬಂಧ)  ಸಾಹಿತ್ಯ ಸಂವಾದ, ಇತಿಹಾಸದ ರಾಜಕೀಯ (ವಿಮರ್ಶೆ/ಸಂಶೋಧನೆ),  ಪುರಾಣ (ವಿಮರ್ಶೆ)  ಭೌತವಾದೀಯ ಚಿಂತನೆಗಳು, ಯಶವಂತ ಚಿತ್ತಾಲ (ಜೀವನ ಚಿತ್ರಣ), ವಿಮರ್ಶೆಯ ದಾರಿ-1, ಪ್ರೌಢಶಾಲಾ ಕನ್ನಡ ಕೈಪಿಡಿ,ಭಾಷೆಯ ಬೆಳಕು, ...

READ MORE

Related Books