ಜಾಗೃತಾತ್ಮರಿಗಾಗಿ

Author : ಹೂ.ವೆ. ಶೇಷಾದ್ರಿ

Pages 70

₹ 30.00




Year of Publication: 2004
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

`ಜಾಗೃತಾತ್ಮರಿಗಾಗಿ' ಎಂಬುದು ವ್ಯಕ್ತಿತ್ವ ವಿಕಸನ ಕುರಿತ ಪುಸ್ತಕವಿದು. ಲೇಖಕ ಹೂ.ವೆ. ಶೇಷಾದ್ರಿ  ರಚಿಸಿದ್ದಾರೆ. ಚಿಂತನ ಕಿರಣಗಳು ಎಂಬ ಅಡಿಶೀರ್ಷಿಕೆಯನ್ನು ಈ ಪುಸ್ತಕವು ಹೊಂದಿದೆ. ಹೆಚ್ಚಿನ ವ್ಯಕ್ತಿತ್ವ ವಿಕಸನ ಪುಸ್ತಕಗಳು ವ್ಯಕ್ತಿ ಕೇಂದ್ರಿತ. ಹೆಚ್ಚೆಂದರೆ ಕುಟುಂಬಕೇಂದ್ರಿತ ವಿಷಯಗಳನ್ನು ತಿಳಿಸಿಕೊಡುತ್ತವೆ. ಪ್ರಸ್ತುತ ಕೃತಿ ವಿಭಿನ್ನವಾಗಿದೆ. ಇಲ್ಲಿನ ಲೇಖನಗಳೆಲ್ಲ ವ್ಯಕ್ತಿಯೊಬ್ಬನು ತನ್ನ ಸಮಾಜ, ಸ್ವದೇಶದ ಏಳಿಗೆಯ ದೃಷ್ಟಿಕೋನದಿಂದ ವಿಕಾಸಗೊಳ್ಳಬೇಕು ಎಂಬ ಆಶಯವನ್ನು ವ್ಯಕ್ತಪಡಿಸುತ್ತವೆ. ಸಮಾಜದ ಬಗೆಗೆ ಕಳಕಳಿ, ದೇಶಪ್ರೇಮ ಹೊರಹೊಮ್ಮಿಸಲು ಇಲ್ಲಿನ ಲೇಖನಗಳು ಪ್ರೇರಣೆ ನೀಡುತ್ತವೆ.

About the Author

ಹೂ.ವೆ. ಶೇಷಾದ್ರಿ
(26 May 1926 - 14 August 2005)

ಖ್ಯಾತ ಲೇಖಕ ಶೇಷಾದ್ರಿಯವರು (26-05-1926) ಹುಟ್ಟಿದ್ದು ಹೊಂಗಸಂದ್ರದಲ್ಲಿ. ತಂದೆ ವೆಂಕಟರಾಮಯ್ಯ, ತಾಯಿ ಪಾರ್ವತಮ್ಮ. ಬೆಂಗಳೂರಿನ (19476) ಸೆಂಟ್ರಲ್ ಕಾಲೇಜಿನಿಂದ ರಸಾಯನ ಶಾಸ್ತ್ರದಲ್ಲಿ ಸ್ವರ್ಣಪದಕದೊಂದಿಗೆ ಎಂ.ಎಸ್ಸಿ. ಪದವೀಧರರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪೂರ್ಣಾವಧಿ ಕಾರ್ಯಕರ್ತರು. 1980ರಲ್ಲಿ ಕ್ಷೇತ್ರೀಯ (ಕರ್ನಾಟಕ, ಆಂಧ್ರ, ಕೇರಳ, ತಮಿಳುನಾಡು) ಪ್ರಚಾರ ಕಾರ‍್ಯ ನಿರ್ವಹಣೆ, ಸಂಘದ ಪ್ರಧಾನ ಕಾರ‍್ಯದರ್ಶಿಯಾಗಿಯೂ ಆಗಿದ್ದರು.ಸಂಘದ ವೈಚಾರಿಕ ಹಾಗೂ ಸೈದ್ಧಾಂತಿಕ ಬರಹಗಳನ್ನು ಬರೆದರು.  ವಿಕ್ರಮ, ಉತ್ಥಾನ-ಕನ್ನಡ ಪತ್ರಿಕೆಗಳಲ್ಲಿ, ಇಂಗ್ಲಿಷ್‌ನ ಆರ್ಗನೈಸರ್, ಹಿಂದಿಯ ಪಾಂಚಜನ್ಯ ಹಾಗೂ ದೇಶದ ಇತರ ಭಾಷೆಗಳ ನಿಯತ ಕಾಲಿಕೆಗಳಲ್ಲಿ ಲೇಖನ, ವಿಮರ್ಶಾತ್ಮಕ ವಿಶ್ಲೇಷಣೆಗಳನ್ನು ಬರೆದರು. ಕೃತಿಗಳು-ಯುಗಾವತಾರ, ಅಮ್ಮಾ ಬಾಗಿಲು ತೆಗೆ, ಚಿಂತನಗಂಗಾ, ದೇಶ ...

READ MORE

Related Books