ಜಾತಿ ಸಾಮಾಜಿಕ ಪ್ರತ್ಯೇಕತೆ ಮತ್ತು ಬಡತನ

Author : ಬಿ. ಶ್ರೀಪಾದಭಟ್

Pages 52

₹ 36.00




Year of Publication: 2016
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಜಾತಿ ಹುಟ್ಟುಹಾಕಿರುವ ಸಮಸ್ಯೆ ಸಾಮಾಜಿಕ ಪ್ರತ್ಯೇಕತೆ ಮತ್ತು ಅದು ನೇರವಾಗಿ ಬಡತನಕ್ಕೆ ಕಾರಣವಾಗಬಲ್ಲದು. ಹೀಗೆ ಜಾತಿಯಿಂದ ಜನಿಸಿದ ಪ್ರತ್ಯೇಕತೆಯ ಗುಣಗಳನ್ನು ಅರಿಯುವ ಉದ್ದೇಶದಿಂದ ಸುಖದೇವ್‌ ಥೋರಟ್ ಪ್ರಸ್ತುತ ಕೃತಿಯನ್ನು ರಚಿಸಿದ್ದಾರೆ. ಕೃತಿ ಸಮಾಜೋ ವಿಜ್ಞಾನದ ತಳಹದಿಯಲ್ಲಿ ಶೋಷಣೆಯನ್ನು ವಿಶ್ಲೇಷಿಸುತ್ತದೆ. 

ಅಲ್ಲದೆ ಪ್ರತ್ಯೇಕತೆಯನ್ನು ಒಳಗೊಂಡ ದಬ್ಬಾಳಿಕೆ'ಗಳ ಸ್ವರೂಪ ಮತ್ತು ವಿವಿಧ ಆಯಾಮಗಳನ್ನು ಚರ್ಚಿಸಲಾಗಿದೆ. ತಳಸಮುದಾಯಗಳ ಬಡತನಕ್ಕೂ ಜಾತಿಗೂ ಇರುವ ನಂಟನ್ನು ಪ್ರಸ್ತಾಪಿಸಲಾಗಿದೆ. ಸಾಮಾಜಿಕ, ನಾಗರಿಕ, ಸಾಂಸ್ಕೃತಿಕ, ರಾಜಕೀಯ, ಆರ್ಥಿಕ ವಲಯಗಳಲ್ಲಿ ಜಾತಿಯ ಕಾರಣಕ್ಕೆ ಅವಕಾಶವಂಚಿತರಾಗಲು ಕಾರಣವಾದ ನೀತಿಗಳನ್ನು ಒರೆಗೆ ಹಚ್ಚಲಾಗಿದೆ. ಜಾತಿಯ ಕಾರಣಕ್ಕೇ ಉಂಟಾದ ಆರ್ಥಿಕ ಹಿಂದುಳಿದಿರುವಿಕೆ ಸೃಷ್ಟಿಸಿರುವ ದಾರಿದ್ಯ್ರವನ್ನು ಕೃತಿ ಚರ್ಚಿಸುತ್ತದೆ. 

About the Author

ಬಿ. ಶ್ರೀಪಾದಭಟ್

ಮೂಲತಃ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನವರು. ವೃತ್ತಿಯಿಂದ ಇಂಜಿನಿಯರ್. ವಿದ್ಯಾರ್ಥಿ ದೆಸೆಯಲ್ಲಿ ಎಂಬತ್ತರ ದಶಕದಲ್ಲಿ ಎಡಪಂಥೀಯ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದರು. ಬಳ್ಳಾರಿಯಲ್ಲಿ ಇಂಜಿನಿಯರಿಂಗ್ ವ್ಯಾಸಂಗದ ಸಂದರ್ಭದಲ್ಲಿ ಎಸ್ ಎಫ್ ಐ ಮತ್ತು ದಲಿತ ಸಂಘರ್ಷ ಸಮಿತಿಯ ಜೊತೆಗೂಡಿ ಪ್ರಗತಿಪರ ಚಳುವಳಿಗಳಲ್ಲಿ ಭಾಗವಹಿಸಿದ್ದರು. ಆಗ ನಡೆದ ವಿಜಯ ನಗರ ಉಕ್ಕು ಕಾರ್ಖಾನೆ ( ಈಗ ಜಿಂದಾಲ್)ಯ ಬೇಡಿಕೆಗಾಗಿ ನಡೆದ ಹೋರಾಟದಲ್ಲಿ ಭಾಗವಹಿಸಿದ್ದರು. ನಂತರ ತೊಂಬತ್ತರ ದಶಕದಲ್ಲಿ ವಿವಿದ ಪ್ರಗತಿಪರ ಸಂಘಟನೆಗಳೊಂದಿಗೆ ತೊಡಗಿಸಿಕೊಂಡಿದ್ದರು. ಆಗ ನಡೆದ ತುಂಗಾ ಉಳಿಸಿ ಹೋರಾಟ, ಜಪಾನ್ ಟೌನ್ ಶಿಪ್ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿದ್ದರು. ನಂತರ ಪರ್ಯಾಯ ...

READ MORE

Related Books