ಜೈನ ಧರ್ಮಕ್ಕೊಂದು ಕೈಪಿಡಿ

Author : ಎಸ್.ಪಿ. ಪದ್ಮಪ್ರಸಾದ್‌

Pages 434

₹ 300.00




Year of Publication: 2012
Published by: ತುಕೋಳ್ ಟಿ ಖೇ ಎಜ್ಯುಕೇಶನಲ್ ಮತ್ತು ಚ್ಯಾರಿಟೇಬಲ್ ಟ್ರಸ್ಟ್
Address: ಬೆಂಗಳೂರು

Synopsys

ಡಾ. ಎಸ್.ಪಿ. ಪದ್ಮಪ್ರಸಾದ್ ಅವರು ವಿದ್ವಾಂಸ ಟಿಕೆ.ತುಕೋಳ್ ಅವರು ಇಂಗ್ಲಿಷಿನಲ್ಲಿ ಬರೆದ ಕೃತಿಯನ್ನು ‘ಜೈನ ಧರ್ಮಕ್ಕೊಂದು ಕೈಪಿಡಿ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಜೈನ ಧರ್ಮದ ಕ್ಲಿಷ್ಟ ಪಾರಿಭಾಷಿಕ ಶಬ್ದಗಳನ್ನು ಅರ್ಥೈಸಿಕೊಳ್ಳಲು ಈ ಕೃತಿಯು ಉಪಯುಕ್ತವಾಗಿದೆ ಮಾತ್ರವಲ್ಲ; ಜೈನ ಧರ್ಮದ ಮೂಲ ಪರಿಕಲ್ಪನೆಗಳನ್ನು ತಿಳಿಯಲೂ ಸಹ ಪ್ರಯೋಜಕಾರಿಯಾಗಿದೆ. ಜೈನ ಧರ್ಮದ ಅಗಾಧತೆಯನ್ನು ಈ ಕೃತಿ ಕಟ್ಟಿಕೊಡುತ್ತದೆ.

About the Author

ಎಸ್.ಪಿ. ಪದ್ಮಪ್ರಸಾದ್‌

ಎಸ್.ಪಿ. ಪದ್ಮಪ್ರಸಾದ್‌ ಜಾನಪದ, ಕಾವ್ಯ, ನಾಟಕ, ವಿಮರ್ಶೆ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಪದ್ಮ ಪ್ರಸಾದವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ.  ತಂದೆ ಎಸ್.ಪಿ. ಪಾಯಪ್ಪಶೆಟ್ಟಿ, ತಾಯಿ ಜಿನ್ನಮ್ಮ. ಪ್ರಾರಂಭಿಕ ಶಿಕ್ಷಣ ಹೊಸನಗರದಲ್ಲಿ. ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಿಂದ ಬಿ.ಎಸ್ಸಿ ಪದವಿ ಮತ್ತು ನ್ಯಾಷನಲ್ ಕಾಲೇಜ್ ಆಫ್ ಎಜುಕೇಷನ್‌ನಿಂದ ಬಿ.ಇಡಿ. ಪದವಿಯನ್ನೂ,. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಹಾಗೂ ‘‘ಜೈನ ಜನಪದ ಸಾಹಿತ್ಯ-ಸಂಪಾದನೆ ಹಾಗೂ ಅಧ್ಯಯನ’’ ಪ್ರಬಂದ ಮಂಡಿಸಿ ಬೆಂಗಳೂರು ವಿಶ್ವ ವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ ಪಡೆದಿದ್ದಾರೆ.  ಹೈಸ್ಕೂಲು ಅಧ್ಯಾಪಕರಾಗಿ ಪಿಎಚ್.ಡಿ. ಪದವಿಗಳಿಸಿದ ರಾಜ್ಯದ ...

READ MORE

Related Books