ಜೈನ ಕಥಾಕೋಶ

Author : ಹಂಪ ನಾಗರಾಜಯ್ಯ

Pages 808

₹ 450.00
Year of Publication: 1997
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಈ ಕಥಾಕೋಶವು ಪಾಕೃತ ಭಾಷೆಗಳಲ್ಲಿರುವ ಆಗಮ ಮತ್ತು ಆಗಮೇತರ ಕೃತಿಗಳಿಂದ ಅನುವಾದಿತ ಕೃತಿಗಳಾಗಿದದ್ದು, ಇಂಗ್ಲಿಷ್-ಹಿಂದಿ ಅನುವಾದಕರ ಅನುವಾದಗಳನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಹಳೆಗನ್ನಡದಲ್ಲಿನ ಕಥೆಗಳನ್ನು ಹೊಸಗನ್ನಡಕ್ಕೆ ಕೊಡಲಾಗಿದೆ. ಈ ಕಥೆಗಳು ಆ ಕಾಲದ ಜನರ ಸಾಂಸ್ಕೃತಿಕ ಪರಿಸರವನ್ನು ಪಡಿಮೂಡಿಸುತ್ತದೆ. ಈ ಸಂಕಲನದಲ್ಲಿ ಒಟ್ಟು ೩೮೩ ಜೈನ ಕಥೆಗಳಿವೆ. ಈ ಕಥಾಸಂಕಲನವು ಹೊಂದಿರುವ ಅಧ್ಯಾಯಗಳೆಂದರೆ: ಜೈನ ಕಥಾಕೋಶ : ಪ್ರೇರಣೆ - ಪ್ರಭಾವ , ಉತ್ತರಾಧ್ಯಯನ ಕಥೆಗಳು; ಉವಾಸದ ದಸಾಓ; ಕರಕಂಡು ಚರಿಉ ಕಥೆಗಳು; ಮಣಿಪತಿ ಚರಿತ ಕಥೆಗಳು; ಧಮ್ಮ ಪರಿಕ್ಷಾದ ಕಥೆಗಳು , ಅಂತಗಡ ದಸಾಓ ಕಥೆಗಳು; ಭಗವತೀ ಸೂತ್ರ ಶತಕ; ಆರಾಧನಾ ಸಾರ; ಮಹಾವೀರ ಯುಗ ಪ್ರಾತಿನಿಧಿಕ ಕಥೆಗಳು; ಉತ್ತರಾಧ್ಯಯನ ಸೂತ್ರ ಪ್ರಿಯದರ್ಶಿನಿ ಟೀಕೆ , ವಸುದೇವ ಹಿಂಡಿ ಕಥೆಗಳು; ನಾಯಾ ಧಮ್ಮ ಕಹಾಓ; ಉವಾಸಗ ದಸಾಟ; ಪುಣ್ಯಾಸ್ರವ ಕಥೆಗಳು; ಧರ್ಮಾಮೃತ ಕಥೆಗಳು; ಧರ್ಮಪರೀಕ್ಷೆ ಕಥೆಗಳು; ವಡ್ಡಾರಾಧನೆ ಕಥೆಗಳು , ಜೀವಸಂಬೋಧನೆ ಕಥೆಗಳು; ನೋಂಪಿಯ ಕಥೆಗಳು; ಮಹಾಪುರಾಣದ ಕಥೆಗಳು; ನಂದಿಸೂತ್ರದ ಕಥೆಗಳು ಇದು ಅರ್ಧಮಾಗದಿ, ಅಪಭ್ರಂಶ, ಜೈನ-ಮಹಾರಾಷ್ಟ್ರ, ಕೌರಸೇನಿ,

About the Author

ಹಂಪ ನಾಗರಾಜಯ್ಯ
(07 October 1936)

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಹಂ.ಪ. ನಾಗರಾಜಯ್ಯ ಅವರು ಕನ್ನಡದ ಪ್ರಮುಖ ಭಾಷಾ ವಿಜ್ಞಾನಿ, ಸಂಶೋಧಕ. ’ಹಂಪನಾ’ ಕಾವ್ಯನಾಮದಿಂದ ಬರೆಯುವ ನಾಗರಾಜಯ್ಯ ಅವರು ಮೂಲತಃ ಗೌರಿಬಿದನೂರು ತಾಲ್ಲೂಕಿನ ಹಂಪಸಂದ್ರದವರು. ಸದ್ಯ ಬೆಂಗಳೂರು ನಗರದ ನಿವಾಸಿ. ತಂದೆ ತಂದೆ ಪದ್ಮನಾಭಯ್ಯ ಮತ್ತು ತಾಯಿ ಪದ್ಮಾವತಮ್ಮ. ಪ್ರಾಥಮಿಕ, ಆರಂಭಿಕ ಶಿಕ್ಷಣವನ್ನು ಗೌರಿಬಿದನೂರು, ಮಧುಗಿರಿಯಲ್ಲಿ ಪಡೆದ ಅವರು ತುಮಕೂರಿನಲ್ಲಿ ಇಂಟರ್ ಮೀಡಿಯೆಟ್ ಓದಿದರು. ಮೈಸೂರು ಮಹಾರಾಜಾ ಕಾಲೇಜಿನಿಂದ ಬಿ.ಎ. (ಆನರ್ಸ್), ಎಂ.ಎ ಪದವಿ ಪಡೆದ ನಾಗರಾಜಯ್ಯ ಅವರು ವಡ್ಡಾರಾಧನೆ ಕುರಿತು ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್‌.ಡಿ. ಪದವಿ ಪಡೆದರು.   ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದ ಅವರು ...

READ MORE

Related Books