ಜಲಗಣ ಮನ

Author : ಶಿವಾನಂದ ಕಳವೆ

Pages 200

₹ 150.00




Year of Publication: 2019
Published by: ಸುವರ್ಣ ಮಹೋತ್ಸವ ಆಚರಣಾ ಸಮಿತಿ
Address: ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವ ಪುಸ್ತಕ ಮಾಲಿಕೆ, ಶ್ರೀಕ್ಷೇತ್ರ ಧರ್ಮಸ್ಥಳ 

Synopsys

ಲೇಖಕ ಶಿವಾನಂದ ಕಳವೆ, ಅವರ ಕೃತಿ-ಜಲ ಗಣ ಮನ. ಖ್ಯಾತ ಪರಿಸರವಾದಿ ಡಾ. ಅ.ನ ಎಲ್ಲಪ್ಪ ರೆಡ್ಡಿ ಅವರು ಕೃತಿಗೆ ಬರೆದ ಮುನ್ನುಡಿಯಲ್ಲಿ ‘ಗ್ರಾಮಾಭ್ಯುದಯದ ಹಸಿರು ಅರ್ಥಶಾಸ್ತ್ರ ಕೃತಿಯ ಪರಿಕಲ್ಪನೆಯಡಿಯಲ್ಲಿ ಪರಿಸರ ಸಂವರ್ಧನೆಯನ್ನೇ ಉಸಿರಾಗಿಸಿಕೊಂಡ ಹಳ್ಳಿಗರ ಹಾಗೂ ಕಾರ್ಯಕರ್ತರ ಧ್ವನಿಗಳನ್ನು ಕೇಳಿಸಿದ್ದಾರೆ. ಸುಮಾರು ಎರಡೂವರೆ ದಶಕಗಳಿಂದ ಕರ್ನಾಟಕ ರಾಜ್ಯದ ಹಲವಾರು ಜಿಲ್ಲೆಗೆ ಭೇಟಿ ನೀಡಿ ಅಲ್ಲಿಯ ಜೀವ ವೈವಿಧ್ಯತೆಯನ್ನು ಹಾಗೂ ಪರಂಪರೆಯ ಜ್ಞಾನಗಳನ್ನು ದಾಖಲಿಸುತ್ತಿದ್ದಾರೆ. ವ್ಯಕ್ತಿಯಾಗಿ ಒಂದು ಸಂಸ್ಥೆಯಂತೆ ನಿರಂತರವಾಗಿ ಕೆಲಸವನ್ನು ಮಾಡುತ್ತಿರುವ ಶಿವಾನಂದ ಕಳವೆ ಈ ಕೃತಿಯಲ್ಲಿ, ಕೆರೆ ಕಾಯಕದಲ್ಲಿ ಧರ್ಮಸ್ಥಳದ ಕೊಡುಗೆಗಳೇನು? ಬರ ನಿವಾರಣೆಗೆ ಸಮುದಾಯ ನೇತೃತ್ವದಲ್ಲಿ ಕೆರೆಗಳ ಪುನರುಜ್ಜೀವನ ಹೇಗೆ ನಡೆಯಿತು? ಇದರ ಫಲಾಫಲಗಳೇನು ಎಂಬುದನ್ನು ಸ್ವತಃ ಕ್ಷೇತ್ರ ಭೇಟಿಯ ಮೂಲಕ ಪರಿಣಾಮಕಾರಿಯಾಗಿ ದಾಖಲಿಸಿದ್ದಾರೆ. ಬಹಳಷ್ಟು ಜನಕ್ಕೆ ಅರಣ್ಯ ಜೀವವೈವಿಧ್ಯತೆ, ನೆಲ, ಜಲ, ಇತ್ಯಾದಿಗಳ ಬಗ್ಗೆ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿರುತ್ತಾರೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಶಿವಾನಂದ ಕಳವೆ

ಶಿವಾನಂದ ಕಳವೆ ಅವರು ಶಿರ್ಸಿ ಬಳಿಯ ಕಳವೆ ಗ್ರಾಮದವರು. ವೃತ್ತಯಿಂದ ಪತ್ರಕರ್ತರು. ಪರಿಸರ ಜಾಗೃತಿ ಮೂಡಿಸುವ ಬರೆಹಗಳು ಇವರ ವೃತ್ತಿ ವೈಶಿಷ್ಟತೆ. ಶಿರಸಿ ಸಮೀಪದ ನೀರ್ನಳ್ಳಿಯ ‘ಮಲೆನಾಡ ಮಳೆಕೇಂದ್ರ’ದ ರೂವಾರಿಯೂ ಹೌದು. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ, ಅಲ್ಲಿಯ ಕೃಷಿ, ಪರಿಸರ, ಪರಿಸರ, ಜನಜೀವನಗಳನ್ನು ದಾಖಲಿಸಿದ್ದಾರೆ. ಈ ಪ್ರವಾಸದ ಬರವಣಿಗೆ ‘ಕಾಡುನೆಲದ ಕಾಲಮಾನ’. ದೇಸೀ ಜ್ಞಾನದ ವಿವಿಧ ಮಜಲುಗಳ ಅಧ್ಯಯನ ನಡೆಸಿದ್ದಾರೆ.  ಮುಡೇಬಳ್ಳಿ, ಮುಳ್ಳೆಹಣ್ಣು (ಸಂಪದ.ನೆಟ್ ಅಂತರ್ಜಾಲ ಪತ್ರಿಕೆ), ಬಹುಧಾನ್ಯ (ಉದಯವಾಣಿ), ದಾಟ್ ಸಾಲು (ನೀರ ಸಂರಕ್ಷಣೆಯ ಕಾರ್ಯದ ದಾಖಲಾತಿ)-ಇವು ಅಂಕಣಗಳ ಶೀರ್ಷಿಕೆಗಳು.  ಪ್ರಮುಖ ಕೃತಿಗಳು: ಕಾನ್ ಗೌರಿ, ಗೌರಿ ಜಿಂಕೆಯ ಆತ್ಮಕಥೆ, ಅರಣ್ಯ (ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಿತ), ಅರಣ್ಯ ಜ್ಞಾನದ ...

READ MORE

Related Books