ಜಲ ಜಂಬೂಕನ್ಯೆ

Author : ರವಿಕುಮಾರ್ ನೀಹ

Pages 80

₹ 50.00




Year of Publication: 2011
Published by: ಅನ್ನಪೂರ್ಣ ಪ್ರಕಾಶನ
Address: #176, 12ನೇ ಮುಖ್ಯರಸ್ತೆ, ಮಾಗಡಿ ಮುಖ್ಯರಸ್ತೆ, ಅಗ್ರಹಾರ ದಾಸರಹಳ್ಳಿ, ಬೆಂಗಳೂರು-79
Phone: 080-23153226

Synopsys

ರವಿಕುಮಾರ್ ನೀಹ ಅವರ ಖಂಡಕಾವ್ಯ ‘ಜಲ ಜಂಬೂಕನ್ಯೆ’ - ಈ ಕೃತಿಗೆ ಕವಿ, ಲೇಖಕ, ಸಾಂಸ್ಕೃತಿಕ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ಅವರು ದೀರ್ಘ ಮುನ್ನುಡಿಯನ್ನ ಬರೆದಿದ್ದಾರೆ. ಅವರೇ ಹೇಳುವಂತೆ ‘ಕುಲಮೂಲದ ನೆನಪುಗಳನ್ನು ಅದರ ಪರಂಪರೆಯ ಹಿನ್ನೆಲೆಯಲ್ಲಿ ಮರುಜೋಡಿಸಿಕೊಳ್ಳುತ್ತಾ ಪುರಾಣದಿಂದ ವರ್ತಮಾನಕ್ಕೆ, ವರ್ತಮಾನದಿಂದ ಇತಿಹಾಸಕ್ಕೆ, ಇತಿಹಾಸದಿಂದ ಮತ್ತೆ ವರ್ತಮಾನಕ್ಕೆ ಹರಿದಾಡುವ ಜಲಜಂಬೂಕನ್ನೆ ಕಾವ್ಯವನ್ನು ಡಾ. ರವಿಕುಮಾರ್ ನೀಹ ಬರೆದಿದ್ದಾರೆ. ಸಮುದಾಯ ಕಾವ್ಯ ಎಂಬ ಉಪಶೀರ್ಷಿಕೆಯನ್ನೂ ಇದಕ್ಕೆ ಕೊಟ್ಟಿದ್ದಾರೆ’. ವಿಸ್ಮೃತಿಯ ಆಳಗಳಿಂದ ಎಚ್ಚರದ ಎತ್ತರಗಳನ್ನು ತಲುಪಲಿಕ್ಕೆ ತಳಾದಿ ಸಂಸ್ಕೃತಿಗಳು ಕೈಗೊಂಡಿರುವ ಮಹಾಯಾನಕ್ಕೆ ಇಂಬು ಕೊಡುವ ಒಂದು ಯತ್ನವಾಗಿ ಕುಲಮೂಲದ ಸ್ಮೃತಿಗಳನ್ನು ಹೀಗೆ ಕಾವ್ಯದಲ್ಲಿ ತಂದುಕೊಂಡಿರುವ ಜಲಜಂಬೂಕನ್ನೆ ರೂಪುಗೊಂಡಿದೆಯೆಂದು ನನಗೆ ಅನಿಸುತ್ತದೆ ಎನ್ನುತ್ತಾರೆ ಬಂಜಗೆರೆ ಜಯಪ್ರಕಾಶ್. 

ಭರತವರ್ಷದ ಮೂಲ ಹೆಸರುಗಳಲ್ಲಿ ಒಂದಾದ ಜಂಬೂದ್ವೀಪ, ಅದರ ಮೂಲ ಪುರುಷನಾದ ಜಾಂಬವಮುನಿ, ಆತ ತನ್ನ ಮಕ್ಕಳನ್ನೇ ಬಲಿಕೊಟ್ಟು ಭೂಮಿಯನ್ನು ಹೆಪ್ಪುಗಟ್ಟಿಸಿದ ಸಾಹಸದ ಸ್ಮೃತಿ, ಮಹಾಮುನಿ ಮತಂಗ, ಆದಿ ದೇವತೆಯಾದ ಮಾರಮ್ಮ,ಬಸವಣ್ಣ, ಹರಳಯ್ಯ, ಕೋಡಿ ಮಠ, ಕೊಂಕಣಿ ಮಠ ಮುಂತಾದ ಹಲವಾರು ಅಂಶಗಳು ಈ ಕಾವ್ಯಧಾರೆಯಲ್ಲಿ ಹರಿದಿವೆ. ಒಂದು ಸಾಂಸ್ಕೃತಿಕ ಪರಂಪರೆಯ ಹರವು ಎಷ್ಟು ವಿಸ್ತಾರವಾದುದು, ಅದರ ಮೂಲದ ಆಳ ಎಷ್ಟು ಸಾವಿರ ವರ್ಷಗಳದ್ದಿರಬಹುದು ಎಂಬುದರ ಕಾವ್ಯಾತ್ಮಕ ಸೂಚನೆಯನ್ನು ಕೊಡುವ ನಿಟ್ಟಿನಲ್ಲಿ ಜಲಜಂಬೂಕನ್ನೆ ಒಂದು ಮಹತ್ವದ ಪಯತ್ನವನ್ನು ಮಾಡುತ್ತಿದೆ.

About the Author

ರವಿಕುಮಾರ್ ನೀಹ
(15 July 1977)

ಕನ್ನಡದ ಬಹುವಿಸ್ತಾರದ ವಿಮರ್ಶಾಲೋಕದಲ್ಲಿ ಹೊಸ ಹೆಜ್ಜೆ-ಹೊಳಹುಗಳಿಂದ ಗಮನಸೆಳೆದಿರುವ ಡಾ. ರವಿಕುಮಾರ್ ನೀಹ ಅವರು ಹಳ್ಳಿಗಾಡಿನ ಪ್ರತಿಭೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲೋಕಿನ ನೀಲಗೊಂಡನಹಳ್ಳಿಯಲ್ಲಿ ಜನನ. ತಂದೆ- ಎನ್.ಸಿ. ಹನುಮಂತಯ್ಯ, ತಾಯಿ ದೊಡ್ಡಕ್ಕ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ರವಿಕುಮಾರ್ ಬೆಂಗಳೂರು ವಿವಿಯಲ್ಲಿ ಕನ್ನಡ ಎಂ.ಎ.ಪದವಿಗಳಿಸಿದ್ದಾರೆ. ಆನಂತರ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಡಾ. ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಪುಸ್ತಕ ವಿಮರ್ಶೆಯ ಸ್ವರೂಪ’ ಎಂಬ ವಿಷಯ ಕುರಿತ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪಡೆದಿದ್ದಾರೆ. ಬರಹದ ಪಯಣದಲ್ಲಿ ವಿಮರ್ಶೆಯ ಮಾರ್ಗ ಹಿಡಿದಿರುವ ರವಿಕುಮಾರ್ ನೀಹ ಸಂಶೋಧನೆ, ಖಂಡಕಾವ್ಯಗಳೆಡೆಗೂ ಗುರುತಿಸಿಕೊಂಡವರು. ...

READ MORE

Related Books