ಜಾಣ ಜಾಣೆಯರಿಗಾಗಿ ಇದೋ ಪದಬಂಧ ಭಾಗ-1

Author : ವಿದ್ಯಾ ವಿ. ಹಾಲಭಾವಿ

Pages 224

₹ 140.00




Year of Publication: 2013
Published by: ಸಪ್ನ ಬುಕ್ಸ್‌
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು
Phone: 08040114455

Synopsys

ತೀಕ್ಷ್ಣ ಬುದ್ದಿಶಕ್ತಿಗೆ ನೆರವಾಗುವ ‘ಪದಬಂಧ’ವು ಅರ್ಥಪೂರ್ಣ ಅಕ್ಷರ ಜೋಡಣೆ ಮೂಲಕ ಕಂಡುಕೊಳ್ಳುವ ಒಂದು ಆರೋಗ್ಯಕರ ಹವ್ಯಾಸ. ವ್ಯಕ್ತಿಯ ಬುದ್ದಿವಂತಿಕೆಗೂ ಪದಬಂಧ ಸವಾಲಾಗುತ್ತದೆ ಮಾತ್ರವಲ್ಲ; ಭಾಷಾ ಸಂಪತ್ತನ್ನು ಸಮೃದ್ಧಿಗೊಳಿಸುತ್ತದೆ. ಈ ನಿಟ್ಟಿನಲ್ಲಿ ವಿದ್ಯಾ ವಿ.ಹಾಲಭಾವಿ ಅವರು ’ಜಾಣ ಜಾಣೆಯರಿಗಾಗಿ ಇದೋ ಪದಬಂಧ-ಭಾಗ-1’ ರಚಿಸಿದ್ದಾರೆ. ಪದಬಂಧದ ಇತಿಹಾಸವನ್ನು ಪರಿಚಯಿಸಿದ್ದು, ಪದಬಂಧ ಬಿಡಿಸುವ ಬಗೆಯನ್ನು ಉದಾಹರಣೆ ಸಮೇತ ವಿವರಿಸಿದ್ದಾರೆ.

 

About the Author

ವಿದ್ಯಾ ವಿ. ಹಾಲಭಾವಿ

ಬೆಂಗಳೂರಿನಲ್ಲಿ ನೆಲೆಸಿರುವ ಪದ ಸುಡೊಕು ಬರಹಗಾರ್ತಿ ವಿದ್ಯಾ ವಿ. ಹಾಲಭಾವಿ, ವಿವಿಧ ವಿಷಯಗಳ ಬಗ್ಗೆ ಬರೆದ ಸುಮಾರು 8000ಕ್ಕೂ ಹೆಚ್ಚು ಪದಬಂಧಗಳು ನಾನಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಗ್ರಿಡ್ಲರ್‌ ಪಜ಼ಲ್‌ ಹಾಗೂ ಸ್ಟ್ರಿಮೊ ಪಜ಼ಲ್‌ ಅನ್ನು ಕನ್ನಡಕ್ಕೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಜಾಣ ಜಾಣೆಯರಿಗಾಗಿ ಇದೋ ಪದಬಂಧ (ಭಾಗ 1,2), ಬಿಡಿಸಿದರೆ ಪದ ಸುಡೊಕು, ಮೆದುಳು ಚುರುಕು ಇವರ ಪ್ರಮುಖ ಕೃತಿಗಳು. ಇವರಿಗೆ ಆದರ್ಶ ಮಹಿಳೆ ಪುರಸ್ಕಾರ, ರಾಜಾಜಿನಗರ ರಾಜ್ಯೋತ್ಸವ ಪ್ರಶಸ್ತಿ, ಕಲಾಶ್ರೀ ಪ್ರಶಸ್ತಿ, ಹೂ ಗೊಂಚಲು ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿಗಳು ಸಂದಿವೆ. ...

READ MORE

Related Books