ಜನಪದ ಚಾರಿತ್ರಿಕ ಕಥನ ಗೀತೆಗಳು

Author : ಬಿ.ಎಸ್. ತಲ್ವಾಡಿ

Pages 544

₹ 50.00




Year of Publication: 2014
Published by: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು

Synopsys

ಜನಪದ ಚಾರಿತ್ರಿಕ ಕಥನ ಕಾವ್ಯಗಳಲ್ಲಿ ರೂಪಾಂತರ ಕಡಿಮೆ: ಹಾಡುವ ಧಾಟಿಯು ಬದಲಾಗುವುದಿಲ್ಲ. ಯಾವ ಮಟ್ಟಿದಲ್ಲಿ ವಕ್ತೃ ಹಾಡು ಕಲಿತಿರುತ್ತಾರೋ ಅದೇ ಮಟ್ಟನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅದಕ್ಕೇ ಅದರದೇ ಆದ ಲಯವಿರುತ್ತದೆ. ಛಂದಸ್ಸಿರುತ್ತದೆ. ಸಿದ್ಧ ರೂಪವಿರುತ್ತದೆ. ಹೆಸರೇ ಸೂಚಿಸಿರುವಂತೆ ಜನಪದ ಚಾರಿತ್ರಿಕ ಕಥನ ಕಾವ್ಯಗಳಲ್ಲಿ ಚರಿತ್ರೆಗೆ ಸಂಬಂಧಿಸಿದ ಕತೆ ಇರುತ್ತದೆ. ಇದರಲ್ಲಿ ಮಾಗಡಿ ಕೆಂಪೇಗೌಡ, ಸರ್ಜಪ್ಪನಾಯಕ, ಧೋಂಡಜಿ ವಾಘ, ಸಂಗೊಳ್ಳಿ ರಾಯಣ್ಣ, ಐಗೂರ ಕತೆ, ಸರ್ಜಪ್ಪ ನಾಯಕನ ಕಥನಕಾವ್ಯ, ಬಾಜೀರಾಯನ ಹಾಡು, ಕಿತ್ತೂರ ಚಂನವ್ವನ ಸೊಸಿ ಪದ, ಬಾದಾಮಿ ಕಲ್ಲೆ ಕೆಡವಿದ ಪದ, ನರಗುಂದ ಸಂಸ್ಥಾನದ ಪದ, ರಾಮದುರ್ಗದ ದುರಂತ, ಸಂಗೊಳ್ಳಿ ರಾಯಣ್ಣ, ಚಾರಿತ್ರಿಕ ಕೋಲಾಟದ ಪದಗಳು, ಸರ್ಜಪ್ಪ ನಾಯಕನ ಪದ, ಟಿಳಕನ ಕತೆ ಮುಂತಾದ ಜಾನಪದ ಕಥನಗಳು ಈ ಕೃತಿಯಲ್ಲಿವೆ. 

About the Author

ಬಿ.ಎಸ್. ತಲ್ವಾಡಿ

ಡಾ.ಬಿ.ಎಸ್.ತಲ್ದಾಡಿ ಅವರು ಮೂಲತಃ ಮೈಸೂರು ಜಿಲ್ಲೆಯ ಚಾಮರಾಜನಗರದ ಬಳಿಯ ಮಲೆ ಮಹದೇಶ್ವರದವರು. ಮಲೆಮಹದೇಶ್ವರ ಸೇರಿದಂತೆ ಒಳಗಿರಂಗನ ಬೆಟ್ಟಗಳ ಪರಿಸರದ ಕಾಡು ಕಣಿವೆ. ಗುಡ್ಡ ಸುತ್ತಾಡಿ, ಸೋಲಿಗರು, ಬಡಗರು. ಲಂಬಾಣಿಗರು, ಕಾಡಾರರು ಕಾಡುಕುರುಬರು ಹೀಗೆ ಸಹಜವಾಗಿ ಬೆರೆತು ಅವರ ಬದುಕಿನ ವಿವಿಧ ಮಗ್ಗಲುಗಳನ್ನು ಸಾಹಿತ್ಯದ ಮೂಲಕ ಪರಿಚಯಿಸಿದವರು. ಸೋಲಿಗರ ಸಮಗ್ರ ಜೀವನದ ‘ಗುಂಗರು ಕಣಿವೆ ’ (1982) ಕಾದಂಬರಿ ರಚಿಸಿದ್ದಾರೆ. ಕಥೆ-ಕವನ, ವಿಮರ್ಶೆ, ಜೀವನ ಚರಿತ್ರೆ ಇತ್ಯಾದಿ ಪ್ರಕಾರದಲ್ಲೂ ಲೇಖನಗಳನ್ನು ಬರೆದಿದ್ದಾರೆ.  ...

READ MORE

Related Books