ಜಾನಪದ ಇಬ್ಬನಿಗಳು

Author : ಎಂ.ಜಿ.ಈಶ್ವರಪ್ಪ

Pages 231

₹ 60.00
Year of Publication: 1999
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ದಾವಣಗೆರೆಯ ಡಿ.ಆರ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಪರಾಗಿದ್ದ ’ಡಾ.ಎಂ.ಜಿ ಈಶ್ವರಪ್ಪ’ ನವರು ನಿರರ್ಗಳ ಮಾತುಗಾರಿಕೆಗೆ ಹೆಸರಾದವರು. ಇವರು ಜಾನಪದ ಕ್ಷೇತ್ರದ ಖ್ಯಾತ ವಿದ್ವಾಂಸರು, ವಿಮರ್ಶಕರು. ಇವರು ಬರೆದ “ಜಾನಪದ ಇಬ್ಬನಿಗಳು” ಎಂಬುದು ಜಾನಪದದ ಕುರಿತು ಇರುವ ಒಟ್ಟು 12 ಲೇಖನಗಳ ಒಂದು ಗುಚ್ವವಾಗಿದೆ. ಈ ದೇಶದ ಅವಿಭಾಜ್ಯ ಅಂಗ, ದೇಶದ ಬೆನ್ನುಲುಬು ಎಂದು ನಾವು ಕರೆಯುವ ರೈತರೂ ದಿನನಿತ್ಯದ ಜೀವನದಲ್ಲಿ ಅನುಭವಿಸುವ ಕಷ್ಟಗಳು , ರೈತರನ್ನು ತನ್ನತನವನ್ನು ಕಳೆದುಕೊಳ್ಳುವುದರ ಬಗ್ಗೆ , ಜೀವನವನ್ನು ಪೋಷಣೆ ಮಾಡುವಂತಹ ಕೆಲವು ಸತ್ವಗಳು , ಪ್ರಸ್ತುತ ಆಧುನಿಕ ಲೋಕಕ್ಕೆ ಆಧಾರಪೂರಕವಾಗಿರುವ ವಿಷಯಗಳ ಬಗ್ಗೆ ವಿವರಗಳನ್ನು ಈ ಕೃತಿಯೂ ಒದಗಿಸುತ್ತದೆ.

About the Author

ಎಂ.ಜಿ.ಈಶ್ವರಪ್ಪ

ಡಾ. ಎಂ.ಜಿ. ಈಶ್ವರಪ್ಪನವರು ದಾವಣಗೆರೆಯ  ಡಿ.ಆರ್.ಎಂ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದರು. ಈಶ್ವರಪ್ಪನವರು ತಮ್ಮ ನಿರರ್ಗಳ ಮಾತುಗಾರಿಕೆಗೆ ಹೆಸರಾದವರು. ಗದ್ಯ ಮತ್ತು ಪದ್ಯಗಳ ಬೋಧನೆಯನ್ನು ರಸವತ್ತಾಗಿ ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಾರೆ. ದಾವಣಗೆರೆಯ ಸಾಹಿತ್ಯವಲಯದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.  ಇವರು ಡಿ.ಆರ್.ಎಮ್. ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ದಿನಗಳಲ್ಲಿ ಇವರ ರಸವತ್ತಾದ ಕಥೆಗಾರಿಕೆಗೆ, ಮಾತುಗಾರಿಕೆಗೆ ಮನಸೋತು ತಮಗೆ ತರಗತಿ ಇಲ್ಲದ ವಿದ್ಯಾರ್ಥಿಗಳೂ ಕೂಡಾ ಇವರ ತರಗತಿಯಲ್ಲಿ ಹಾಜರಿರುತ್ತಿದ್ದರು.  ಈಶ್ವರಪ್ಪನವರು ವಿಮರ್ಶಕರಾಗಿಯೂ ಕೆಲಸ ಮಾಡಿದ್ದಾರೆ. ಸಮಕಾಲೀನ ಸಾಹಿತ್ಯದ ಒಬ್ಬ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಇವರೂ ಒಬ್ಬರು. ತಮ್ಮ ನಿವೃತ್ತಿಯ ಅಂಚಿನಲ್ಲಿ ಎಂ.ಎಸ್.ಬಿ ಪದವಿ ...

READ MORE

Related Books