ಜನಪದ ಕಲಾವಿದರು

Author : ಕುರುವ ಬಸವರಾಜ್

Pages 121

₹ 60.00




Year of Publication: 2009
Published by: ಕರ್ನಾಟಕ ಜಾನಪದ ಪರಿಷತ್
Address: ನಂ.1, ಜಲದರ್ಶಿನಿ ಬಡಾವಣೆ, ಎಂ.ಎಸ್. ರಾಮಯ್ಯ ಆಸ್ಪತ್ರೆ ಮಹಾದ್ವಾರದ ಹತ್ತಿರ, ನ್ಯೂ ಬಿ.ಇ.ಎಲ್. ರಸ್ತೆ, ಬೆಂಗಳೂರು- 560054

Synopsys

‘ಜನಪದ ಕಲಾವಿದರು’ ಡಾ. ಕುರುವ ಬಸವರಾಜ್ ಅವರ ಜಾನಪದ ಲೋಕೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸುವ ಕೃತಿ. ಈ ಕೃತಿಗೆ ಪ್ರೊ.ಡಿ. ಲಿಂಗಯ್ಯ ಅವರ ಬೆನ್ನುಡಿ ಬರಹವಿದೆ. ಇದು ಕರ್ನಾಟಕ ಜಾನಪದ ಪರಿಷತ್ತು ಪ್ರಕಟಿಸುತ್ತಿರುವ ವಿಭಿನ್ನ ಕೃತಿ: ಜನಪದ ಸಾಹಿತ್ಯ ಚರಿತ್ರಿಗೆ ಸಂಬಂಧಿಸಿದ ಆಕರಕೋಶ. ಕರ್ನಾಟಕ ಜಾನಪದದ ವಿವಿಧ ಕ್ಷೇತ್ರಗಳ ಅಪೂರ್ವ ಸಾಧಕ ಕಲಾವಿದರ ಕಿರುಪರಿಚಯ ಇಲ್ಲಿದೆ. ಇಂಥವರು ನಾಡಿನಲ್ಲಿ ಲೆಕ್ಕವಿಲ್ಲದಷ್ಟು ಮಂದಿ ಇದ್ದಾರೆ. ಕೆಲವರು ಮಾತ್ರ ದಾಖಲಾಗಿದ್ದಾರೆ ಎನ್ನುತ್ತಾರೆ ಪ್ರೊ.ಡಿ. ಲಿಂಗಯ್ಯ. ಜೊತೆಗೆ, ಈ ಅನನ್ಯ ಕಲಾವಿದರು ತಮ್ಮ ನೆನಪಿನೋವರಿಯಲ್ಲಿ ಮೌಖಿಕ ಜಾನಪದವನ್ನು ರಕ್ಷಿಸಿಕೊಂಡು ಬೆಳಸಿಕೊಂಡು ನಮಗೆ ನಿರೂಪಿಸದೆ ಇದ್ದರೆ, ಪ್ರದರ್ಶಿಸಿದೆ ಇದ್ದರೆ ಇಂದು ಕನ್ನಡ ಜಾನಪದದಲ್ಲಿ ಏನೇನೂ ಕೆಲಸವಾಗುತ್ತಿರಲಿಲ್ಲ. ಇವರೆಲ್ಲ ನಮ್ಮ ಅಧ್ಯಯನ ಸಂಪನ್ಮೂಲ ವ್ಯಕ್ತಿಗಳು ಎಂದಿದ್ದಾರೆ. ಜಾನಪದ ಕನಸುಗಾರ ನಾಡೋಜ ಎಚ್.ಎಲ್. ನಾಗೇಗೌಡರ ದೂರದೃಷ್ಟಿಯ ಫಲವಾಗಿ ರೂಪುಗೊಂಡು ಜಾನಪದ ಲೋಕದ ಉತ್ಸವದ ಸಂದರ್ಭದಲ್ಲಿ ಸನ್ಮಾನಕ್ಕೆ ಪಾತ್ರರಾದ ಈ ಕಲಾವಿದರ ಸಂಕ್ಷಿಪ್ತ ಪರಿಚಯವನ್ನು ಡಾ.ಚಕ್ಕೆರೆ ಶಿವಶಂಕರ್ ಮತ್ತು ಡಾ. ಕುರುವ ಬಸವರಾಜ್ ನಿರೂಪಿಸಿದ್ದಾರೆ.

About the Author

ಕುರುವ ಬಸವರಾಜ್

ಲೇಖಕ, ಜಾನಪದ ತಜ್ಞ ಕುರುವ ಬಸವರಾಜ್ ಅವರು ಮೂಲತಃ ಹಳೆಯ ಶಿವಮೊಗ್ಗ, ಈಗಿನ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಕುರುವ ಗ್ರಾಮದವರು. ಜಾನಪದ ಲೋಕದಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಕರ್ನಾಟಕ ವಿ.ವಿ.ಯಿಂದ ಎಂ.ಎ(ಕನ್ನಡ) ಪದವಿ ಮತ್ತು ಬೆಂಗಳೂರು ವಿ.ವಿ.ಯಲ್ಲಿ ‘ಜನಪದ ಮಹಾಕಾವ್ಯಗಳ ನಿರ್ಮಾಣ ಪ್ರತಿಭೆಯ ನೆಲೆಗಳು’ ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ಜಾನಪದ ಅಕಾಡೆಮಿ ಫೆಲೋಷಿಪ್ ಗಾಗಿ ಕರ್ನಾಟಕ ಜನಪದ ಸಂಗೀತ ಅಧ್ಯಯನ ಮಾಡಿದ್ದಾರೆ. ಪ್ರಕಟಿತ ಕೃತಿಗಳು: ಹುಲ್ಲೆಹಾಡು, ಕಾಡೊಡಲ ಹಾಡು, ಬೇಲಿ ಮ್ಯಾಗಳ ಹೂವು, ಮಣ್ಣ ಕುಸುಮದ ಹಕ್ಕಿ (ಕಾವ್ಯಸಂಗ್ರಹಗಳು) ಸೆಳೆತ, ...

READ MORE

Related Books