ಜಾನಪದ ಪ್ರವೇಶ

Author : ಚಕ್ಕೆರೆ ಶಿವಶಂಕರ್



Published by: ಕನ್ನಡ ಸಾಹಿತ್ಯ ಪರಿಷತ್ತು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು -560018
Phone: 0802662 3584

Synopsys

ಚಕ್ಕೆರೆ ಶಿವಶಂಕರ್ ಅವರ ಅಧ್ಯಯನ ಕೃತಿ ‘ಜಾನಪದ ಪ್ರವೇಶ’. ಈ ಕೃತಿಯ ಪರಿವಿಡಿಯಲ್ಲಿ ಜನಪದ ಸಾಹಿತ್ಯ ಚರಿತ್ರೆ ಪ್ರವೇಶಿಕೆ, ಜನಪದ ಗದ್ಯ, ಪದ್ಯಗಂಧೀ ಗದ್ಯ- ಸಾಹಿತ್ಯ ಪ್ರಕಾರಗಳು, ಜನಪದ ಹಾಡುಗಳು ಎಂಬ ಮೂರು ಭಾಗಗಳಿವೆ.

ಮೊದಲ ಭಾಗದಲ್ಲಿ ಕನ್ನಡ ದೇಸೀ ಸಾಹಿತ್ಯ ನಡೆದುಬಂದ ದಾರಿ, ಜನಪದ ಸಾಹಿತ್ಯದ ಅಧ್ಯಯನದ ವಿಭಾಗೀಕ್ರಮ, ಕನ್ನಡ ಜಾನಪದ ಶಾಸ್ತ್ರೀಯ ಅಧ್ಯಯನ, ಹೈದರಾಬಾದ ಕರ್ನಾಟಕ ಜನಪದ ಸಾಹಿತ್ಯ: ಪರಂಪರೆ, ಅನುವಾದಗೊಂಡು ಕನ್ನಡಕ್ಕೆ ಬಂದ ಜನಪದ ಸಾಹಿತ್ಯ ಎಂಬ ಶೀರ್ಷಿಕೆಗಳನ್ನು ಒಳಗೊಂಡಿದೆ.

ಎರಡನೇ ಭಾಗದಲ್ಲಿ ಜನಪದ ಗದ್ಯ ಕಥೆಗಳು, ಜನಪದ ಗಾದೆಗಳು, ಜನಪದ ಒಗಟುಗಳು, ಜನಪದ ಒಡಪುಗಳು, ಜನಪದ ಒಡಬುಗಳು, ಜನಪದ ಮಕ್ಕಳ ಹಾಡುಗಳು ಎಂಬ ಶೀರ್ಷಿಕೆಗಳಿವೆ. ಕೃತಿಯ ಮೂರನೇ ಭಾಗವಾದ ಜನಪದ ಹಾಡುಗಳಡಿಯಲ್ಲಿ ಹೊಲ-ಮನೆಕೆಲಸದ ಹಾಡುಗಳು, ಪ್ರದರ್ಶನ ಕಲೆಯ ಹಾಡುಗಳು, ಹಬ್ಬದ ಹಾಡುಗಳು, ಸಂಪ್ರದಾಯದ ಹಾಡುಗಳು, ಹೆಣ್ಣುಮಕ್ಕಳ ಜನಪದ ಕಥನ ಗೀತೆಗಳು, ಒಬ್ಬ ವಕ್ತಾರನ ಸಮಗ್ರ ಸಾಹಿತ್ಯ ಎಂಬ ಅನೇಕ ಶೀರ್ಷಿಕೆಗಳಿವೆ.

About the Author

ಚಕ್ಕೆರೆ ಶಿವಶಂಕರ್

ಜಾನಪದ ಚಿಂತಕ ಚಕ್ಕೆರೆ ಶಿವಶಂಕರ್ ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದವರು. ರಾಜ್ಯದ ಜಾನಪದ ವಿದ್ವಾಂಸರಲ್ಲಿ ಪ್ರಮುಖರು. ಪ್ರಸ್ತುತ ಕರ್ನಾಟಕ ಜಾನಪದ ಪರಿಷತ್ ಕಾರ್ಯದರ್ಶಿಯಾಗಿದ್ದಾರೆ. ಜನಪದ ಕಲೆ, ಸಾಹಿತ್ಯ ಮತ್ತು ವಿಶ್ಲೇಷಣೆಯಲ್ಲಿ ಜೀವಪರ ನಿಲುವನ್ನು ಉಳ್ಳ ಅವರು `ಕುವೆಂಪು ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ' ಎನ್ನುವ ಪ್ರಬಂಧಕ್ಕೆ ಮೈಸೂರು ವಿವಿಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ‘ಲೆಕ್ಕದಲ್ಲಿ ಜಾನಪದ ತಿಳಿವಳಿಕೆ, ಜಾನಪದ ಗ್ರಹಿಕೆ, ಜನಪದ ಕಲಾ ಪ್ರವೇಶ, ಮಹಾ ಕಾವ್ಯ ಲೇಖನಗಳು, ಗೊರವರ ಸಂಸ್ಕೃತಿ’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books