ಜನಪದ ಸಾಹಿತ್ಯದಲ್ಲಿ ಮೌಲ್ಯ ಪ್ರತಿಪಾದನೆ

Author : ಮುಮ್ತಾಜ್ ಬೇಗಂ, ಗಂಗಾವತಿ

Pages 104

₹ 150.00




Year of Publication: 2020
Published by: ಜೀವನ್‌ ಪ್ರಕಾಶನ
Address: ಜೀವನ್‌ ನಿಲಯ, ಶ್ರೀಸಾಯಿಬಾಬಾ ನಗರ, ಉಳಿದಗ್ಗಿ, ಮೊದಲನೇ ಮುಖ್ಯರಸ್ತೆ, ವಾಡರಹಟ್ಟಿ, ಗಂಗಾವತಿ ತಾಲ್ಲೂಕು, ಕೊಪ್ಪಳ-583235
Phone: 9986666075

Synopsys

ಸಾಮಾಜಿಕ, ಮಾನವೀಯ ಮೌಲ್ಯಗಳನ್ನು ಜಾನಪದೀಯ ನೆಲೆಗಟ್ಟಿನಲ್ಲಿ ಅಧ್ಯಯನ ನಡೆಸಿ ರಚಿಸಲಾಗಿರುವ ಕೃತಿ ‘ಜನಪದ ಸಾಹಿತ್ಯದಲ್ಲಿ ಮೌಲ್ಯ ಪ್ರತಿಪಾದನೆ’. ಲೇಖಕಿ ಮುಮ್ತಾಜ್‌ ಬೇಗಾಂ ಅವರು ಬರೆಯುತ್ತಾ ‘ಮನುಷ್ಯ ಬದುಕು ಹೇಗಿರಬೇಕು ಎಂಬ ನಿದರ್ಶನಗಳನ್ನು ತಮ್ಮ ಅನುಭವದ ನುಡಿಗಳಲ್ಲಿ ಕಟ್ಟಿಕೊಟ್ಟವರು ಜನಪದರು. ಬದುಕಿನ ರೀತಿ, ನೀತಿ, ನಡವಳಿಕೆ, ಆದರ್ಶ ಪಾಲನೆ, ಮೌಲ್ಯಗಳ ಅಳವಡಿಸಿಕೊಳ್ಳುವಿಕೆ ಹೀಗೆ ಬದುಕಿಗೆ ಬೇಕಾದ ಪಾಠಗಳನ್ನು ಜನಪದರು ಜನಪದ ಸಾಹಿತ್ಯ ಕಟ್ಟುವ ಮೂಲಕ ತಿಳಿಯಪಡಿಸಿದ್ದಾರೆ. ವ್ಯಕ್ತಿತ್ವ ವಿಕಸನದಂತಹ ಶಿಬಿರಗಳಿಗೆ ಹೋಗುವ ಇಂದಿನ ವರ್ತಮಾನದಲ್ಲಿ ಬಹು ಹಿಂದೆಯೇ ಜನಪದರು ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಅಂಶಗಳನ್ನು ಜನಪದ ಸಾಹಿತ್ಯದ ಮೂಲಕ ಅಭಿವ್ಯಕ್ತಿಸಿದ್ದಾರೆ. ನಮ್ಮ ನಡೆ, ನುಡಿ, ಊಟ ಉಪಚಾರ, ಆಚಾರ, ವಿಚಾರ, ನಡೆಯುವ, ನೋಡುವ, ಮಾತನಾಡುವ ಕ್ರಿಯೆಗಳ ಬಗೆಗೆ ತಮ್ಮದೇ ಅನುಭವವನ್ನು ವ್ಯಕ್ತಿತ್ವ ವಿಕಸನದ ಅಮೃತವನ್ನು ಕಟ್ಟಿಕೊಟ್ಟಿದ್ದಾರೆ’ ಎಂದಿದ್ದಾರೆ. ಪ್ರಸ್ತುತ ಕೃತಿಯು ಜಾನಪದೀಯ ಮೌಲ್ಯಗಳ ಕುರಿತು ಸಮಗ್ರ ಅಧ್ಯಯನ ನಡೆಸಿರುವ ಮಹತ್ವದ ಕೃತಿಯಾಗಿದೆ.

About the Author

ಮುಮ್ತಾಜ್ ಬೇಗಂ, ಗಂಗಾವತಿ

ಡಾ. ಮಮ್ತಾಜ್ ಬೇಗಂ ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯವರು. ತಂದೆ ಹುಸೇನಸಾಬ, ತಾಯಿ ಕಾಸಿಂಬಿ ಮುಧೋಳ. ಗಂಗಾವತಿಯಲ್ಲೇ ಪದವಿವರೆಗೂ ಶಿಕ್ಷಣ ಪೂರ್ಣಗೊಳಿಸಿ, ಗುಲಬಗಾ ವಿ.ವಿ.ಯಿಂದ ಎಂ.ಎ ಹಾಗೂ 'ಪಿಂಜಾರರು: ಒಂದು ಜಾನಪದೀಯ ಅಧ್ಯಯನ' ವಿಷಯವಾಗಿ ಮಹಾಪ್ರಬಂಧ ಸಲ್ಲಿಸಿ ಪಿಎಚ್ ಡಿ ಪಡೆದರು. ಸದ್ಯ, ಗಂಗಾವತಿಯ ಶ್ರೀ ಕೊಲ್ಲಿ ನಾಗೇಶ್ವರರಾವ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದಲ್ಲಿಸಹಾಯಕ ಪ್ರಾಧ್ಯಾಪಕಿಯಾಗಿದ್ದಾರೆ.  ಕಾವ್ಯ, ಸಂಶೋಧನೆ, ಜಾನಪದ, ವಚನ, ದಲಿತ ಸಾಹಿತ್ಯ, ಸ್ತ್ರೀವಾದಿ ಚಿಂತನೆಗಳ ಬರವಣಿಗೆ ಇವರ ಆಸಕ್ತಿಯ ಕ್ಷೇತ್ರಗಳು. ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ, ಕನ್ನಡ ವಿಶ್ವವಿದ್ಯಾಲಯ ದೂರಶಿಕ್ಷಣ ಪಠ್ಯಪುಸ್ತಕ ಸಮಿತಿಯ ಸದಸ್ಯರಾದ್ಗಿದಾರೆ. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ...

READ MORE

Related Books