ಜಾನಪದ : ಸಾಂಸ್ಕೃತಿಕ ಆಯಾಮಗಳು

Author : ಹಿ.ಶಿ. ರಾಮಚಂದ್ರೇಗೌಡ

Pages 332

₹ 60.00




Year of Publication: 1998
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಲೇಖಕ ಹಿ.ಶಿ.ರಾಮಚಂದ್ರೇಗೌಡ ಕನ್ನಡದ ಪ್ರಮುಖ ಜಾನಪದ ಪ್ರಕಾರಗಳಾದ  ಕಥೆ, ಕಥನಗೀತೆ, ಬಯಲಾಟ, ಪುರಾಣ, ಕಾವ್ಯ , ಹೆಣ್ಣು, ಆಹಾರ, ರಾಜಕೀಯ, ಕನ್ನಡದ ಬಳ್ಳಿ ಬಡಗ ಜನರನ್ನು ಮುಂದಿಟ್ಟಕೊಂಡು ಸಂಸ್ಕ್ರತಿಯ ಮೂಲ ನೆಲೆಯನ್ನು , ಅದರ ವಾಸ್ತವವನ್ನು ಸಂಶೋಧಿಸಿದ, ಮೂಲ ವಾಸ್ತವದ ಬಗ್ಗೆ ಅನ್ವೇಷಣೆ ನಡೆಸಿದ ಪರಿಣಾಮ ಈ ಕೃತಿಯನ್ನು ರಚಿಸಿದ್ದಾರೆ. ಒಟ್ಟು ಈ ಕೃತಿಯು ಕನ್ನಡ ಸಂಸ್ಕ್ರತಿಯ ಒಟ್ಟು ಚಿಂತನೆ, ಹಾಗು ಕನ್ನಡ ಸಂಸ್ಕ್ರತಿಯ ಮರುಸೃಷ್ಟಿ ಬಗ್ಗೆ , ಕನ್ನಡ ಸಂಸ್ಕ್ರತಿಯ ಕೆಲವು , ಕನ್ನಡ ಜಾನಪದದ ಕೆಲವು ಅಂಗಗಳನ್ನು ಪರಿಗಣಿಸಿಕೊಂಡು ಅದನ್ನು ವಿವೇಚನೆಗೆ ಒಳಪಡಿಸುವ ಕೆಲಸವನ್ನು ಈ ಕೃತಿಯಲ್ಲಿ ಮಾಡಲಾಗಿದೆ. ಸಮಕಾಲಿನವಾಗಿ ಉದ್ಭವಿಸುವ ಕೆಲವು ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಅದನ್ನು ಆಧುನಿಕವಾಗಿ ಹೇಗೆ ಅನ್ವಯಿಕವಾಗಿದೆ ಎಂಬೆಲ್ಲಾ ವಿಷಯದ ಬಗ್ಗೆ ಮಾಹಿತಿಯನ್ನು ಲೇಖಕರು ಈ ಕೃತಿಯಲ್ಲಿ ಒದಗಿಸಿದ್ದಾರೆ.

About the Author

ಹಿ.ಶಿ. ರಾಮಚಂದ್ರೇಗೌಡ

ಜಾನಪದ ತಜ್ಞ, ಸಾಹಿತಿ ಹಿ.ಶಿ.ರಾಮಚಂದ್ರೇಗೌಡ ಅವರು ದೇಸೀ-ಸಂಸ್ಕೃತಿಯ ಬಹುಮುಖ್ಯ ಚಿಂತಕರು. ಎಲ್ಲ ತರಹದ ಜೀವವಿರೋಧಿ ಸಿದ್ಧಾಂತಗಳನ್ನು ಸಾರಾಸಗಟಾಗಿ ಓಡಿಸಬೇಕು ಎಂಬ ಸಾತ್ವಿಕ ಸಿಟ್ಟಿನ ಕುಲುಮೆಯಲ್ಲಿ ಅವರ ಬರಹಗಳು ಹುಟ್ಟುತ್ತವೆ. ‘ಭೂಮಿ ಮತ್ತು ಹಿಂಸೆ, ರಾಮ ಅಳುತ್ತಿದ್ದಾನೆ, ಕ್ಲಿಂಟನ್ ನಗು, ಜಾನಪದ ಸಾಂಸ್ಕೃತಿಕ ಆಯಾಮಗಳು, ಜಾನಪದ ತಡಕಾಟ, ಪುರದ ಪುಣ್ಯ, ಜಾನಪದದ ನ್ಯಾಯ, ಜಾನಪದ ಪ್ರಕೃತಿ’ ಮುಂತಾದ 25ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ.  ...

READ MORE

Related Books