ಜನಪದ ಶರಣ ಕಾವ್ಯಗಳು

Author : ಪಿ.ಕೆ. ರಾಜಶೇಖರ್

Pages 616

₹ 400.00
Year of Publication: 2010
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು. ಲಿಂಗ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳು ನಿರಾಕರಿಸಿದರು. ಕಾಯಕದ ಮೂಲಕ ಸಮ ಸಮಾಜವನ್ನು ಕಟ್ಟಲು ಅವಿರತ ಶ್ರಮಿಸಿದ ಬಸವಣ್ಣ ಮತ್ತು ಆತನ ಸಮಕಾಲೀನ ಶರಣರ ಜೀವನ ಕಥಾನಕವನ್ನು ಇಲ್ಲಿರುವ ಕಾವ್ಯಗಳು ಕಟ್ಟಿಕೊಡುತ್ತದೆ. ಹನ್ನೆರಡನೇ ಶತಮಾನದ ಜೀವನಕ್ರಮವನ್ನು ಬೋಧಿಸುವ ಚರಿತ್ರೆಯಾಗಿ ಉಳಿಯದೆ ವಾಸ್ತವಿಕ ನೆಲೆಗಟ್ಟಿನಲ್ಲಿ ಸಮಾನತೆಯ ಸಮಾಜ ನಿರ್ಮಾಣದ ತಾತ್ವಿಕ ಕಿವಿಮಾತುಗಳನ್ನು ವಿವರಿಸುತ್ತದೆ. ಹಾಗಾಗಿ ‌ಈ ಕೃತಿಯಲ್ಲಿ ಮೂಡಿಬರುವ ಕಾವ್ಯಗಳು ಕಥೆಯ ರೂಪ ಇದ್ದರೂ ಅದು ಮುಖ್ಯವಾಗದೆ ತತ್ತ್ವಾದರ್ಶಗಳ ಚರ್ಚೆ ಮುನ್ನೆಲೆಗೆ ಬರುವಂತೆ ಲೇಖಕ .ಪಿ.ಕೆ.ರಾಜಶೇಖರ್ ರವರು ಮಾಡಿದ್ದಾರೆ.

About the Author

ಪಿ.ಕೆ. ರಾಜಶೇಖರ್
(13 October 1946)

ಗ್ರಂಥ ಸಂಪಾದನೆ, ಜಾನಪದ ಸಂಶೋಧನೆ ಹಾಗೂ ಜಾನಪದ ಗಾಯನದಲ್ಲಿ ತೊಡಗಿಕೊಂಡಿರುವ ಪಿ.ಕೆ.ರಾಜಶೇಖರ್ ಅವರು ಜನಿಸಿದ್ದು ಮೈಸೂರು ಜಿಲ್ಲೆಯ ಪಿರಿಯಾ ಪಟ್ಟಣದಲ್ಲಿ. ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಜಾನಪದ ಸಂಶೋಧನೆಯಲ್ಲಿ ತೊಡಗಿದ್ದಾರೆ.  ಮಾನಸದೀಪ್ತಿ, ಪ್ರತಿಬಿಂಬ, ಸ್ವಾತಿ ಮುತ್ತುಗಳು, ನಾನಲ್ಲದ ನಾನು(ಕಾವ್ಯ), ಪದವಿವರಣಕೋಶ, ಪದ ಸಂಪದ(ಭಾಷಾ ಶಾಸ್ತ್ರ), ಸಮಾಜ ಸೇವಾರತ್ನ, ವೀರಯೋಧ ಬೆಳ್ಳಿಯಪ್ಪ(ಜೀವನ ಚರಿತ್ರೆ), ಬೆಟ್ಟದ ಚಾಮುಂಡಿ, ಜನಪದ ರಾಮಾಯಣ, ಜನಪದ ಮಹಾಕಾವ್ಯ, ಮಲೆಯ ಮಾದೇಶ್ವರ, ಮಾಗಡಿ ಕೆಂಪೇಗೌಡ, ಹಾಡೋ ಮುತ್ತಿನರಗಿಣಿ, ಅವ್ವ ನಿನ ದನಿ, ಅಪರಂಜಿ, ನಮ್ಮ ಜನಪದ ವಾದ್ಯಗಳು, ಜನಪದ ಬಸವಪುರಾಣ, ಊರ ಹೆಸರಿನ ...

READ MORE

Related Books