ಜನಪರ ಡಾ. ಹಿಂಗಮಿರೆ ಅಭಿನಂದನಾ ಗ್ರಂಥ

Author : ಬುದ್ದಣ್ಣ ಹಿಂಗಮಿರೆ

Pages 842

₹ 400.00




Year of Publication: 2011
Published by: ಸುಂದರ ಪುಸ್ತಕ ಪ್ರಕಾಶನ
Address: # 79, ಚಂದ್ರಕಿರಣ, 2ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, ಶಕ್ತಿನಗರ, ಧಾರವಾಡ-580004
Phone: 9448556458

Synopsys

ಸಾಹಿತಿ ಡಾ. ಬುದ್ದಣ್ಣ ಹಿಂಗಮಿರೆ ಅವರ ವ್ಯಕ್ತಿತ್ವ ಹಾಗೂ ಸಾಹಿತ್ಯಕ ಸಾಧನೆ ಕುರಿತು ಅವರ ಅಭಿಮಾನಿ ಚಿಂತಕರು ಲೇಖನ, ಕವಿತೆ, ಪ್ರಬಂಧ, ಒಡನಾಟ ಸ್ಮರಣೆ ಹೀಗೆ ವಿವಿಧ ಪ್ರಕಾರಗಳಲ್ಲಿ ಬರೆದು ಅಭಿನಂದಿಸಿದ ಕೃತಿ-ಜನಪರ. 

ಡಾ. ಬುದ್ದಣ್ಣ ಹಿಂಗಮಿರೆ ಅವರ ಸಾಹಿತ್ಯ, ಕವಿತೆ, ಅನುವಾದ, ರೂಪಾಂತರ, ರೇಡಿಯೋ ನಾಟಕಗಳು, ಸಂಪಾದಿತ ಗ್ರಂಥಗಳು, ವಿಮರ್ಶೆ ಗ್ರಂಥಗಳು  ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳ ಕುರಿತು ಗಂಭೀರವಾಗಿ ಚಿಶ್ಲೇಷಿಸಿದ ಬರೆಹಗಳು ಗ್ರಂಥದ ಮೌಲ್ಯ ಹೆಚ್ಚಿಸಿವೆ. 

 

 

About the Author

ಬುದ್ದಣ್ಣ ಹಿಂಗಮಿರೆ
(04 September 1933 - 17 August 2012)

ಕವಿ ಬುದ್ದಣ್ಣ ಹಿಂಗಮಿರೆ ಅವರು 1933 ಸೆಪ್ಟೆಂಬರ್ 4ರಂದು ಕೊಲ್ಹಾಪುರ ಜಿಲ್ಲೆಯ ರಾಜಾಪುರದಲ್ಲಿ ಜನಿಸಿದರು. ತಂದೆ ಬಾಬು, ತಾಯಿ ದುಂಡವ್ವ. ಬೆಳಗಾವಿಯ ಲಿಂಗರಾಜ ಕಾಲೇಜಿನಿಂದ ಬಿ.ಎ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ರಷ್ಯನ್ ಭಾಷೆಯಲ್ಲಿ ಎಂ.ಎ ಪದವಿ, ಪುಣೆ ವಿಶ್ವವಿದ್ಯಾಲಯದಿಂದ ಎಂ.ಎ ಹಾಗೂ ಪಿಎಚ್.ಡಿ. (ವಿಷಯ: ಕನ್ನಡದಲ್ಲಿ ಶೋಕ ಕಾವ್ಯ) ಪಡೆದರು.  ಅಥಣಿಯಲ್ಲಿ ಹೈಸ್ಕೂಲ್ ಶಿಕ್ಷಕರಾಗಿ, ನಿಪ್ಪಾಣಿಯ ಜಿ.ಐ. ಬಾಗೇವಾಡಿ ಕಾಲೇಜಿನಲ್ಲಿ ಹಾಗೂ ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ಮತ್ತು ಧಾರವಾಡದ ಕರ್ನಾಟಕ ಕಲಾ ವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿ.  ಕೃತಿಗಳು: ಹುಲ್ಲುಗೆಜ್ಜೆ, ಶಬ್ದ ರಕ್ತ ಮತ್ತು ...

READ MORE

Related Books