ಜನ್ನನ ಯಶೋಧರ ಚರಿತೆ- ತಿಳಿಗನ್ನಡ ಅವತರಣ

Author : ಎಚ್. ಎಸ್. ವೆಂಕಟೇಶಮೂರ್ತಿ

Pages 132

₹ 135.00




Year of Publication: 2019
Published by: ಅಭಿನವ ಪ್ರಕಾಶನ
Address: 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ಜನ್ನ ‘ಯಶೋಧರ ಚರಿತೆ’ಯನ್ನು ಬಹುಪಾಲು ಕಂದಪದ್ಯಗಳ ಮೂಲಕವೇ ರಚಿಸಿದ್ದಾನೆ. ಕನ್ನಡ ಸಾಹಿತ್ಯದಲ್ಲಿ ಇದು ಕೂಡ ಬಹುಚರ್ಚಿತ ಕೃತಿಗಳಲ್ಲೊಂದು. ಹಳೆಗನ್ನಡದಲ್ಲಿರುವ ಇಲ್ಲಿನ ಎಲ್ಲ ಪದ್ಯಗಳನ್ನು ಕವಿ ಎಚ್‌.ಎಸ್‌. ವೆಂಕಟೇಶಮೂರ್ತಿ ತಿಳಿಗನ್ನಡದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಪ್ರತಿ ಪದ್ಯಗಳ ಭಾವಾರ್ಥ ಮತ್ತು ಅದರ ಮಹತ್ವವನ್ನು ಕವಿ ಹೊಸ ಬಗೆಯ ರೂಪಕಗಳಲ್ಲಿ ಬಿಚ್ಚಿಟ್ಟಿರುವುದು ಇಲ್ಲಿ ಗಮನಾರ್ಹ. ಈ ಪದ್ಯಗಳ ಕೊನೆಯಲ್ಲಿ ಶಬ್ದಕೋಶವನ್ನು ಉಲ್ಲೇಖಿಸಿರುವುದು ಮತ್ತಷ್ಟು ಹೊಸ ಶಬ್ದಗಳ ಗ್ರಹಿಕೆಗೂ, ಸರಾಗ ಓದಿಗೂ ಪೂರಕವಾಗಿದೆ. ಜನ್ನನ ಮೂಲ ಕಾವ್ಯದ ಪ್ರವೇಶಿಕೆಗೂ ತಿಳಿಗನ್ನಡದ ಈ ಅವತರಣಿಕೆಯು ಕೈದೀವಿಗೆಯಂತಿದೆ. ಸಾಹಿತ್ಯಾಸಕ್ತರಿಗೆ, ಕಾವ್ಯದ ಕುರಿತು ಕುತೂಹಲವಿರುವವರಿಗೆ ಈ ಕೃತಿ ಉಪಯುಕ್ತವಾಗಲಿದೆ.

About the Author

ಎಚ್. ಎಸ್. ವೆಂಕಟೇಶಮೂರ್ತಿ
(23 June 1944)

ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. 2000 ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ...

READ MORE

Related Books