ಜಯಪ್ರಕಾಶ ನಾರಾಯಣ

Author : ಯಡೂರ ಮಹಾಬಲ

₹ 300.00




Year of Publication: 2021
Published by: ಕಾವ್ಯಕಲಾ ಪ್ರಕಾಶನ
Address: ನಂ-1273, 7ನೇ ತಿರುವು, ಚಂದ್ರಾ ಬಡಾವಣೆ, ವಿಜಯನಗರ, ಬೆಂಗಳೂರು- 560040
Phone: 9964124831

Synopsys

ಲೇಖಕ ಯಡೂರ ಮಹಾಬಲ ಅವರ ಕೃತಿ-ಜಯಪ್ರಕಾಶ ನಾರಾಯಣ. ‘ಬಾಲ್ಯದಿಂದ ಸಂಪೂರ್ಣ ಕ್ರಾಂತಿಯವರೆಗೆ ಒಂದು ಮೌಲ್ಯಮಾಪನ’ ಎಂಬ ಉಪಶೀರ್ಷಿಕೆ ಹೊಂದಿದ್ದು, ಈ ಕೃತಿಯು ವಿಮರ್ಶಾತ್ಮಕ ಚಿಂತನೆಗಳನ್ನು, ಅವರ ಬದುಕು ಹಾಗೂ ರಾಜಕೀಯ ವಲಯದ ಸಾಧನೆಯ ಕುರಿತ ಸಮಗ್ರ ಮಾಹಿತಿಯನ್ನು ತುಂಬಿಕೊಂಡಿದೆ. ಜಯಪ್ರಕಾಶ ನಾರಾಯಣ ಸ್ವಾತಂತ್ರ್ಯೋತ್ತರ ಭಾರತದಲ್ಲಿ ತುಂಬ ಮಹತ್ವದ ಪಾತ್ರವಹಿಸಿದ ಸಮಾಜವಾದಿ ಇವರು. ದೇಶದಲ್ಲಿ ಇಂದಿರಾಗಾಂಧಿ ಅವರಿಂದ ಹೇರಲ್ಪಟ್ಟ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಇಂದಿರಾಗಾಂಧಿ ಅವರ ಬಿಗಿಮುಷ್ಟಿಯಿಂದ ಭಾರತವನ್ನು ಕಾಪಾಡಿದವರು. ಅವರ ಬದುಕು ನಡೆದ ಬಂದ ದಾರಿಯ ಬಗ್ಗೆ ವಿಮರ್ಶಾತ್ಮಕ ನೋಟವಿರುವ ಪುಸ್ತಕ ಇದು..

ಜಯಪ್ರಕಾಶ ನಾರಾಯಣರು ಜವಾಹರ ಲಾಲ್ ನೆಹರು ನಂತರದ ಅತ್ಯಂತ ಪ್ರಭಾವಿ ವ್ಯಕ್ತಿ ಎನ್ನುವ ಪ್ರತೀತಿ ಇತ್ತು. ಅಲ್ಲದೆ ನೆಹರು ನಂತರದ ಪ್ರಧಾನಿ ಎಂತಲೂ ಕೇಳಿಬಂದಿತ್ತು. ಒಮ್ಮೆ ಅವರ ಹೆಸರನ್ನು ರಾಷ್ಟ್ರಾಧ್ಯಕ್ಷರ ಸ್ಥಾನಕ್ಕೆ ಕೆಲವರು ಸೂಚಿಸಿದ್ದರು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಗಾದೆ ಮಾತಿನಂತೆ ಅವರು ಮಾತನಾಡದ ವಿಷಯಗಳು ಇರಲಿಕ್ಕಿಲ್ಲವೇನೋ. ದೇಶದ ಅತಿಮುಖ್ಯ ಆಗು ಹೋಗುಗಳ ಬಗ್ಗೆ ಅವರ ಹೇಳಿಕೆಗಳು ಬರವಣಿಗೆಗಳು ಇರುತ್ತಿದ್ದವು. ಅಲ್ಲದೇ, ಕೇಂದ್ರದಲ್ಲಿ ಮೊಟ್ಟಮೊದಲ ಬಾರಿಗೆ ಕಾಂಗ್ರೇಸೇತರ ಸರ್ಕಾರ ಉಂಟುಮಾಡುವಲ್ಲಿ ಜಯಪ್ರಕಾಶ ನಾರಾಯಣರ ಪಾತ್ರ ಬಹಳ ದೊಡ್ಡದಿದೆ. ಈ ಎಲ್ಲಾ ಕಾರಣದಿಂದ ಅವರಿಗೆ ಲೋಕನಾಯಕ ಎನ್ನುವ ಬಿರುದೂ ಕೂಡ ಬಂದಿದೆ. ಅವರ ವ್ಯಕ್ತಿತ್ವವನ್ನು ಒಳಹೊಕ್ಕು ನೋಡಿ ಒಂದು ಸರಿಯಾದ ಮೌಲ್ಯ ಮಾಪನದ ಅವಶ್ಯಕತೆ ಇದೆ ಎಂದು ತಿಳಿದು ಪುಸ್ತಕ ಬರೆದಿರುವುದಾಗಿ ಲೇಖಕ ಯಡೂರು ಮಹಾಬಲ ಅವರು ಹೇಳಿಕೊಂಡಿದ್ದಾರೆ. 

About the Author

ಯಡೂರ ಮಹಾಬಲ
(11 June 1954)

ಯಡೂರ ಮಹಾಬಲ ಅವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಯಡೂರು ಗ್ರಾಮದವರು.ಭಾರತ ವಿದ್ಯಾರ್ಥಿ ಫೆಡರೇಶನ್, ಸಮುದಾಯ ಸಾಂಸ್ಕೃತಿಕ ಸಂಘಟನೆ, ನೌಕರ ಮತ್ತು ಕಾರ್ಮಿಕರ ಹೋರಾಟ ಸಂಘಟನೆಗಳಲ್ಲಿ ಭಾಗಿಯಾಗಿದ್ದರು.  ಹುಬ್ಬಳ್ಳಿಯಲ್ಲಿ ಗೆಳೆಯರೊಂದಿಗೆ ಸಮತಾ ಪ್ರಕಾಶನ ಕಾರ್ಯದಲ್ಲಿ ತೊಡಗಿ ಅನೇಕ ಕಿರುಹೊತ್ತಿಗೆಗಳನ್ನು ಹೊರತಂದಿದ್ದಾರೆ. ಬ್ಯಾಂಕ್ ಅಧಿಕಾರಿಯಾಗಿ 2014 ರಲ್ಲಿ ನಿವೃತ್ತಿಹೊಂದಿದ್ದಾರೆ.  ‘ಲೋಹಿಯಾ ವಿಚಾರಗಳ ಒಂದು ವಿಮರ್ಶೆ’, ‘ಕ್ವಿಟ್ ಇಂಡಿಯಾ ಚಳವಳಿಯ ಒಳಗುಟ್ಟುಗಳು’, ‘ದೋಕ್ಲಾಂ ಕರ್ಮಕಾಂಡ’, ‘ಅವಿಸ್ಮರಣೀಯ ಅರುಣಾಚಲ, ಅದರ ಚಿತ್ರ ವಿಚಿತ್ರ ಇತಿಹಾಸ’, ನಿಗೂಢ ಟಿಬೇಟ್, ಅಕ್ಸಾಯ್ ಚಿನ್ ವಿವಾದದ ಇತಿಹಾಸ, ‘ಯುದ್ಧಪೂರ್ವ ಕಾಂಡ’ ‘1962 ಯುದ್ಧ ಕಾಂಡ' ಕೃತಿಗಳನ್ನು ...

READ MORE

Related Books