ಜೀರ್ಣವಿಜಯನಗರಾದರ್ಶಂ

Author : ಲಕ್ಷ್ಮಣ್ ತೆಲಗಾವಿ

Pages 58

₹ 60.00




Year of Publication: 2015
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ
Phone: 08022372388

Synopsys

'ಜೀರ್ಣವಿಜಯನಗರಾದರ್ಶಂ' ಎಂಬುದು ವಿಜಯನಗರ ಇತಿಹಾಸದ ಹಿನ್ನೆಲೆಯೊಡನೆ ಹಂಪಿ ಪರಿಸರದ ಸ್ಮಾರಕಗಳ ಮಹತ್ವವನ್ನು ಸರಳವಾಗಿ ವಿವರಿಸುವ ಉಪಯುಕ್ತ ಕೈಪಿಡಿಯಾಗಿದೆ.

ನೂರು ವರ್ಷಗಳಷ್ಟು ಹಿಂದೆಯೇ ಕೆ. ರಾಮಸ್ವಾಮಯ್ಯಂಗಾರ್ ಅವರು ಪರಿಶ್ರಮವಹಿಸಿ, ಹಂಪಿಯ ಸ್ಮಾರಕಗಳ ಸುತ್ತ ಸುತ್ತಾಡಿ ಕನ್ನಡಿಗರಿಗಾಗಿ ಒಂದು ಉಪಯುಕ್ತ ಕೈಪಿಡಿಯನ್ನು ಸಿದ್ಧಪಡಿಸಿ ಪ್ರಶಂಸನೀಯ.  ದೀರ್ಘಕಾಲದವರೆಗೆ ಓದುಗರಿಗೆ ಈ ರೀತಿಯ ಮಾಹಿತಿ ಅಲಭ್ಯವಾಗಿತ್ತು. ಹಂಪಿ ಕುರಿತ ಪ್ರಥಮ ಪ್ರವಾಸಿ ಕೈಪಿಡಿ ಎಂದು ಗುರುತಿಸಿದವರು ಹಿರಿಯ ಇತಿಹಾಸಕಾರ ಲಕ್ಷ್ಮಣ್ ತೆಲಗಾವಿ ಅವರು.

About the Author

ಲಕ್ಷ್ಮಣ್ ತೆಲಗಾವಿ
(01 January 1947)

ಇತಿಹಾಸಜ್ಞ, ಸಂಶೋಧಕ ಲಕ್ಷ್ಮಣ್‌ ತೆಲಗಾವಿಯವರು 1947 ಜನವರಿ 01 ಹುಟ್ಟಿದ್ದು ಚಿತ್ರದುರ್ಗದಲ್ಲಿ. ಹಲವಾರು ಐತಿಹಾಸಿಕ, ಸಾಮಾಜಿಕ ಚಳುವಳಿಗಳ  ಗ್ರಂಥಗಳ ರಚಿಸಿ ಮತ್ತು ಪ್ರಕಟಿಸಿದ್ಧಾರೆ. ಚಿತ್ರದುರ್ಗ ದರ್ಶಿನಿ, ಇದು ಚಿತ್ರದುರ್ಗ, ಚಿತ್ರದುರ್ಗ ಹ್ಯಾನ್‌ ಇನ್‌ಸೈಟ್‌, ಬುರುಗು (ಚಿಂತನ ಲೇಖನಗಳು), ಕರ್ನಾಟಕ ಹಿಂದುಳಿದ ವರ್ಗಗಳ ಮತ್ತು ದಲಿತ ಚಳುವಳಿಗಳು, ಮೌರ್ಯ ಮತ್ತು ಶಾತವಾಹನಯುಗ, ಚಿತ್ರದುರ್ಗಜಿಲ್ಲಾ ಇತಿಹಾಸ, ಚಿತ್ರದುರ್ಗ ನಾಯಕ ಅರಸರು, ವಿಜಯನಗರಕಾಲದ ರಾಮಾನುಜಕೂಟಗಳು, ಎಪ್ಪತ್ತೇಳು ಪಾಳಯಗಾರರು, ಚಿತ್ರದುರ್ಗದ ಒನಕೆ ಓಬವ್ವ, ಚಾರಿತ್ರಿಕ ವಿವೇಚನೆ, ದೊಡ್ಡೇರಿಕದನ ಮುಂತಾದ ಕೃತಿಗಳನ್ನು ಸ್ವಾತಿ ಪ್ರಕಾಶನ, ವಾಲ್ಮೀಕಿ ಸಾಹಿತ್ಯ ಸಂಪದ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯಗಳು ...

READ MORE

Related Books