ಜೀವಜಗತ್ತಿನ ಕೌತುಕಗಳು

Author : ಎನ್.ಎಸ್. ಲೀಲಾ

Pages 110

₹ 150.00

Buy Now


Year of Publication: 2019
Published by: ನವಕರ್ನಾಟಕ ಪ್ರಕಾಶನ
Address: 15, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು
Phone: 9480686862

Synopsys

ಪ್ರಕೃತಿಯಲ್ಲಿನ ಜೀವ ವೈವಿಧ್ಯ ಎಷ್ಟೊಂದು ಸ್ವಾರಸ್ಯಕರ ಮತ್ತು ಕೌತುಕಮಯ! ಗೂಡು ಕಟ್ಟುವ ಹಕ್ಕಿಯಾಗಲೀ, ಕಾಡಿನ ಪ್ರಾಣ  - ಸಾಕುಪ್ರಾಣ ಯಾಗಲೀ, ಭೂಮಿಯಲ್ಲಿ ಬಿಲ ತೋಡಿ ಬದುಕುವ ಜೀವಿಯಾಗಲಿ - ನಾವು `ಭಲೇ ನಿನ್ನ ಚಾಣಾಕ್ಷತನವೇ’ ಎನ್ನುವಂತೆ ತನ್ನತನವನ್ನು ಮೆರೆದು ನಮ್ಮನ್ನು ಮೂಕ ವಿಸ್ಮಿತರನ್ನಾಗಿ ಮಾಡುತ್ತವೆ. ಎಲ್ಲ ಜೀವಿಗಳೂ ಬದುಕಲು ಹೋರಾಡುತ್ತವೆ. ತಮ್ಮ ತಮ್ಮ ಆಹಾರ ಸಂಗ್ರಹಣೆಯಲ್ಲಿ ಅವು ತೋರುವ ಚಾಕಚಕ್ಯತೆ ಬೆರಗು ಮೂಡಿಸುವಂಥದು. ತಮ್ಮ ವಾಸಸ್ಥಳವನ್ನು ನಿರ್ಮಿಸಿಕೊಳ್ಳುವ ಕುಶಲತೆ ಅತ್ಯಂತ ನವಿರಾದುದು. ಸೃಷ್ಟಿಯಲ್ಲಿ ಸಹಬಾಳವೆಯ ತತ್ವವನ್ನು ಅನುಸರಿಸಿ ಎಲ್ಲ ಜೀವಿಗಳೂ ಬದುಕುತ್ತವೆ. ಮನುಷ್ಯ ಪ್ರಾಣ  ಮಾತ್ರ ಇದಕ್ಕೆ ಅಪವಾದವೆಂದರೆ ತಪ್ಪಾಗದು. ಅವನಿಂದಾಗಿ ಇಂದು ನಾವು ಅನೇಕ ಜೀವಿಗಳನ್ನು ಕೇವಲ ಚಿತ್ರಗಳಲ್ಲಿ ಮಾತ್ರ ಕಾಣುವಂತಾದದ್ದು ದುರಂತವೇ. ಪ್ರಾಣ -ಪಕ್ಷಿಗಳಲ್ಲದೆ ಇನ್ನಿತರ ಜೀವಿಗಳ ನಡವಳಿಕೆ ಮತ್ತು ವಿಶೇಷತೆಯನ್ನು ಇನ್ನೊಂದು ಕೌತುಕದ ಜೊತೆ ಹೋಲಿಸಿ ಸ್ವಾರಸ್ಯಿಕರವಾಗಿ ಈ ಕೃತಿಯಲ್ಲಿ ಬರೆದಿದ್ದಾರೆ.

About the Author

ಎನ್.ಎಸ್. ಲೀಲಾ
(10 December 1944)

ಎನ್.ಎಸ್. ಲೀಲಾ ಅವರು ಎಂ.ಎಸ್ಸಿ., ಪಿಎಚ್.ಡಿ ಪದವೀಧರರು.  ಎಂ.ಇ.ಎಸ್. ಕಾಲೇಜಿನಲ್ಲಿ ಪ್ರಾಣಿಶಾಸ್ತ್ರದ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿದ್ದಾರೆ. ತುಮಕೂರು ಜಿಲ್ಲೆಯ( ಜನನ 10-12-1944 ) ಮಧುಗಿರಿಯವರು. ತಂದೆ -ಎನ್.ಎಸ್. ಕೌಶಿಕ್, ತಾಯಿ- ಅಹಲ್ಯಾಬಾಯಿ ಕೃತಿಗಳು: ಇನ್ಸುಲಿನ್‌ನ ಆತ್ಮಕತೆ, ಜೀವ ಜಗತ್ತಿನ ಕೌತುಕಗಳ ಮಾಲೆ, ಚಲನೆ, ಲಾಲನೆ-ಪಾಲನೆ, ಪ್ರೀತಿ-ಪ್ರಣಯ, ಹುಟ್ಟು-ಸಾವು, ನಿದ್ದೆ-ವಿಶ್ರಾಂತಿ, ಜೈವಿಕ ತಂತ್ರಜ್ಞಾನ, ನೀರು, ಪ್ರಕೃತಿ-ವಿಕೃತಿ, ಜೆ.ಬಿ.ಎಸ್. ಹಾಲೇನ್, ಊತಕ ಕೃಷಿ, ನಮ್ಮೊಳಗಿನ ಖ್ಯಾತನಾಮರು ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಸದೋದಿತ ಪ್ರಶಸ್ತಿ, ವರ್ಷದ ಅಂತಾರಾಷ್ಟ್ರೀಯ ಮಹಿಳೆ-2001, ಬಿ.ಎ.ಆರ್‌.ಸಿ. ಪ್ರಶಸ್ತಿ, ಅತ್ಯುತ್ಯಮ ವಿಜ್ಞಾನ ಶಿಕ್ಷಕ ಪ್ರಶಸ್ತಿಗಳು ಲಭಿಸಿದೆ. ...

READ MORE

Related Books