ಜೀವಜಗತ್ತಿಗೆ ಜೇನಹನಿ

Author : ಕಾವ್ಯಶ್ರೀ ಮಹಾಗಾಂವಕರ

Pages 128

₹ 2015.00




Year of Publication: 90
Published by: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ
Address: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ, ಸರಸ್ವತಿ ಗೋದಾಮು, ಕಲಬುರಗಿ - 585101
Phone: 9448124431, 9880020808, 9731828999

Synopsys

ಹೈದ್ರಾಬಾದ ಕರ್ನಾಟಕದ ಲೇಖಕಿ ಕಾವ್ಯಶ್ರೀ ಮಹಾಗಾಂವಕರ ಅವರು ಕತೆ, ಕಾದಂಬರಿ, ಕಾವ್ಯ, ವಿಮರ್ಶೆ ಪ್ರಕಾರದಲ್ಲಿ ಕೃಷಿ ಮಾಡಿದವರು.‘ಜೀವಜಗತ್ತಿಗೆ ಜೇನಹನಿ’ ಅವರ ನಾಲ್ಕನೇ ಕೃತಿ . ಇದೊಂದು ವಿಮರ್ಶಾ ಲೇಖನಗಳ ಸಂಕಲನವಾಗಿದ್ದು, ಇಲ್ಲಿ ಹದಿನೈದು ವೈವಿಧ್ಯಮಯ ಬರಹಗಳಿವೆ. 

ಈ ಕೃತಿಯಲ್ಲಿ ಒಟ್ಟು ನಾಲ್ಕು ಭಾಗಗಳಿವೆ. ‘ಮೀಮಾಂಸೆಯ ದೃಷ್ಟಿಯಲ್ಲಿ ಭಾರತೀಯ ಕಾವ್ಯತತ್ವ ಚಿಂತನೆ’, ‘ಮಹಿಳಾ ಚಿಂತನೆ’, ‘ಸಾಹಿತ್ಯ ವಿಮರ್ಶೆ’ ಮತ್ತು ‘ವ್ಯಕ್ತಿ ಚಿತ್ರಣ’. 

ಮೊದಲ ಭಾಗದಲ್ಲಿ, ‘ನೀಲಾಂಜನೆಯ ನೃತ್ಯ ಪ್ರಸಂಗ: ಭೋಗ ವೈರಾಗ್ಯ’, ‘ರಸ ಮತ್ತು ರಸ ಪ್ರಭೇದಗಳು’, ‘ತೌಲನಿಕ ಸಾಹಿತ್ಯದ ಮಹತ್ವ’ ಮತ್ತು ‘ನೃತ್ಯ ಕಲೆ: ಭರತನಾಟ್ಯ’ ನಾಲ್ಕು ಲೇಖನಗಳಿವೆ. ಆಳ ಅಧ್ಯಯನದ ತೂಕ ಬದ್ಧ ಬರಹಗಳಿವೆ.

ಎರಡನೆಯ ಭಾಗದಲ್ಲಿ, ‘ಅವಳ ಹೆಜ್ಜೆ ಗುರುತುಗಳು’, ‘ಮಹಿಳಾ ಜಾಗೃತಿ’, ‘ ಜೀವಜಗತ್ತಿಗೆ ಜೇನಹನಿ - ಅಕ್ಕಮಹಾದೇವಿ’ ಮತ್ತು ‘ಕೆಂಪು ನೆಲದ ಹಸಿರು ತಳಿರು’ ನಾಲ್ಕು ಲೇಖನಗಳು, ಮಹಿಳೆಯ ಕುರಿತು ಗಂಭೀರ ವಿಚಾರಗಳ ಪ್ರತಿಪಾದನೆ. 

ಮೂರನೆಯ ಭಾಗದಲ್ಲಿ, ‘ವಸುಮತಿ ಉಡುಪ ಅವರ ಕಾದಂಬರಿಗಳು - ಒಂದು ಅವಲೋಕನ’, ‘ವಸುಮತಿ ಉಡುಪ ಅವರ ಕಥೆಗಳು - ಒಂದು ಅವಲೋಕನ’ ಮತ್ತು ‘ಭುಲಾಯಿ ಹಾಡುಗಳು : ಒಂದು ಚಿಂತನೆ’ ಮೂರು ಲೇಖನಗಳಿವೆ. ಸಂಶೋಧನೆಯ ಮಾದರಿಯಲ್ಲಿ ಅಧ್ಯಯನ ಮಾಡಿದ ಸ್ಪಷ್ಟ ದಾಖಲೆ ಇವುಗಳಾಗಿವೆ. 

ನಾಲ್ಕನೆಯ ಭಾಗದಲ್ಲಿ, ಪ್ರಮುಖ ವ್ಯಕ್ತಿಗಳ ಚಿತ್ರಣವನ್ನೊಳಗೊಂಡಿದೆ. ‘ಸರಳ ಸಜ್ಜನಿಕೆಯ ಸಾಕಾರ ಮೂರ್ತಿ’, ‘ಜೇನು ಜಿನುಗಿಸಿದ ಜೀವನ: ಡಾ.ಸಿದ್ದಾರೆಡ್ಡಿ’, ‘ಯಶೋದಮ್ಮ ಸಿದ್ದಬಟ್ಟೆ - ಬದುಕು ಮತ್ತು ಬರಹ’ ಮತ್ತು ‘ಡಾ.ಶಕುಂತಲಾ ದುರಗಿ: ಸಾಹಿತ್ಯ ಸಾಧನೆ’ ಹೀಗೆ ಸಮಾಜಮುಖಿ ವ್ಯಕ್ತಿ ಕೇಂದ್ರಿತ ವಿವರಣೆಗಳನ್ನು ಕಾಣುತ್ತೇವೆ. ಹಾಗೆಯೇ ಸಮಷ್ಟಿ ಪ್ರಜ್ಞೆಯನ್ನು ಬಿಂಬಿಸುತ್ತವೆ.

About the Author

ಕಾವ್ಯಶ್ರೀ ಮಹಾಗಾಂವಕರ
(11 April 1969)

ಲೇಖಕಿ, ಕಾವ್ಯಶ್ರೀ ಮಹಾಗಾಂವಕರ‌ ಮೂಲತಃ ಬೀದರನವರು. ‘ಸಿಕಾ’ ಎಂಬುದು ಇವರ ಕಾವ್ಯನಾಮ. ತಂದೆ  ಬಿ.ಜಿ.ಸಿದ್ದಬಟ್ಟೆ, ತಾಯಿ ಯಶೋದಮ್ಮ ಸಿದ್ದಬಟ್ಟೆ. ಸದ್ಯ ಕಲಬುರಗಿಯಲ್ಲಿ ವಾಸವಾಗಿದ್ದಾರೆ.  ಮೈಸೂರಿನ ನಿರ್ಮಲ ಕಾನ್ವೆಂಟ್ ನಲ್ಲಿ ಪ್ರಾಥಮಿಕ ಶಿಕ್ಷಣ, ಬೀದರಿನ ನಾರ್ಮ ಫೆಂಡ್ರಿಕ್ ಶಾಲೆಯಲ್ಲಿ ಮಾಧ್ಯಮಿಕ ಹಾಗೂ ಪದವಿಪೂರ್ವ ಶಿಕ್ಷಣ, ಸರಕಾರಿ ಪಾಲಿಟೆಕ್ನಿಕ್ ಕಾಲೇಜ್ ಬೀದರಿನಲ್ಲಿ ಡಿಪ್ಲೊಮ ಇನ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವೀಧರೆ. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವೀಧರೆ. . ಕೃತಿಗಳು: 'ಪ್ರೇಮ ಕಾವ್ಯ' (2006) ಕಾದಂಬರಿ, 'ಬೆಳಕಿನೆಡೆಗೆ' (2008) ಕಥಾ ಸಂಕಲನ , ಪ್ರಳಯದಲ್ಲೊಂದು ಪ್ರಣತಿ' (2013) ಕಥಾ ಸಂಕಲನ, 'ಜೀವಜಗತ್ತಿಗೆ ಜೇನಹನಿ' (2015) ವಿಮರ್ಶಾ ಬರಹ , ಪಿಸುಮಾತುಗಳ ...

READ MORE

Related Books