ಜೀವನ ರಂಗ

Author : ಶ್ರೀರಂಗ (ಆದ್ಯ ರಂಗಾಚಾರ್ಯ)

Pages 105




Year of Publication: 1944
Published by: ಸರಸ್ವತಿ ನಿಲಯ
Address: ಧಾರವಾಡ

Synopsys

ಆಗಾಗ ಶ್ರೀರಂಗರು ಬರೆದು ಪ್ರಕಟಿಸಿದ ಏಕಾಂಕ ನಾಟಕಗಳ ಪೈಕಿ ನಾಲ್ಕು ನಾಟಕಗಳನ್ನು ಸಂಗ್ರಹಿಸಿದ ಕೃತಿ-ಜೀವನ ರಂಗ. ‘ಈ ನಾಲ್ಕು ಏಕಾಂಕಗಳಲ್ಲಿ ಇದ್ದವರು (ಪ್ರಪಂಚ ಪ್ರವಾಹ) ಸತ್ತವರು (ಶರಪಂಜರ), ಸಾಯಬೇಕೆಂದವರು (ಉತ್ತರರಂಗ) ಹಾಗೂ ಸ್ವರ್ಗದವರು (ಸುರಾಸುರ ಯುದ್ಧ) ಹೀಗೆ ಜೀವನದ ಮೆಟ್ಟಿಲುಗಳ ದೃಶ್ಯಗಳಿರುವುದರಿಂದ ಈ ಸಂಗ್ರಹಕ್ಕೆ ’ಜೀವನ ರಂಗ’ ಎಂಬ ಹೆಸರು ಕೊಟ್ಟಿರುವುದಾಗಿ ಲೇಖಕರು ಕೃತಿಯ ಆರಂಭದಲ್ಲಿ ತಿಳಿಸಿದ್ದಾರೆ.

ಇಲ್ಲಿಯ ನಾಟಕಗಳು ಚಿತ್ರಶಕ್ತಿ-ವಾಸ್ತವಿಕತೆ ಹಾಗೂ ವಿಡಂಬನಾಶಕ್ತಿಯನ್ನು ಹೊಂದಿವೆ ಎಂದು ಹಿರಿಯ ಸಾಹಿತಿ ವಿ.ಕೃ.ಗೋಕಾಕ್ ಅವರು ಕೃತಿಗೆ ಬರೆದ ಮುನ್ನುಡಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

About the Author

ಶ್ರೀರಂಗ (ಆದ್ಯ ರಂಗಾಚಾರ್ಯ)
(26 September 1904 - 17 October 1984)

ಶ್ರೀರಂಗ’ ಎಂದೇ ಖ್ಯಾತರಾಗಿರುವ ಆದ್ಯರಂಗಾಚಾರ್ಯರು ಕನ್ನಡ ನಾಟಕ ಪ್ರಪಂಚಕ್ಕೆ ವಿಶಿಷ್ಟ ಕೊಡುಗೆ ನೀಡಿದ ನಾಟಕಕಾರರು. ಅವರ ತಂದೆ ವಾಸುದೇವಾಚಾರ್ಯ ಜಾಗೀರದಾರ್ ಮತ್ತು ತಾಯಿ ರಮಾಬಾಯಿ. ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಗರ ಖೇಡದಲ್ಲಿ 1904ರ ಸೆಪ್ಟೆಂಬರ್ 26ರಂದು ಜನಿಸಿದರು. ವಿಜಾಪುರದಲ್ಲಿ ಶಾಲಾ ಶಿಕ್ಷಣ ಪೂರೈಸಿ, 1921ರಲ್ಲಿ ಪುಣೆಯ ಡೆಕ್ಕನ್ ಕಾಲೇಜಿಗೆ ಸೇರಿ ಬಿ. ಎ. (1925) ಪರೀಕ್ಷೆಯಲ್ಲಿ ಉತ್ತೀರ್ಣರಾದರು. 1925ರಲ್ಲಿ ಇಂಗ್ಲೆಂಡಿಗೆ ತೆರಳಿದ ಶ್ರೀರಂಗರು ಲಂಡನ್ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದಲ್ಲಿ ಎಂ. ಎ. ಪದವಿ ಪಡೆದು 1928ರಲ್ಲಿ ಭಾರತಕ್ಕೆ ಮರಳಿದರು. ಕೆಲವು ಕಾಲ ಹಾಫ್‍ಕಿನ್ ಸಂಸ್ಥೆಯಲ್ಲಿ ನೌಕರಿಯಲ್ಲಿದ್ದು 1930ರಲ್ಲಿ ...

READ MORE

Related Books