ಜೀವನಾರೋಗ್ಯ

Author : ಸಿ.ಆರ್. ಚಂದ್ರಶೇಖರ್

Pages 172

₹ 125.00




Year of Publication: 2019
Published by: ಸಪ್ನ ಬುಕ್ಸ್‌
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು
Phone: 08040114455

Synopsys

’ಊಟ ಬಲ್ಲವನಿಗೆ ರೋಗವಿಲ್ಲ’ ಎನ್ನುವಂತೆ ಆರೋಗ್ಯ ಉತ್ತಮವಾಗಿದ್ದರೆ, ಮನುಷ್ಯ ಹೇಗಾದರೂ ಬದುಕಬಲ್ಲ ಎಂಬ ಲೋಕಾರೂಢಿ ಮಾತಿದೆ. ಜಾಗತಿಕ ಕಾಲಘಟ್ಟದಲ್ಲಿ ನಾವು ಬದುಕುವ ರೀತಿಯು ಸಂಪೂರ್ಣವಾಗಿ ಬದಲಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯದ ಮಹತ್ವನ್ನು ಲೇಖಕರು ಜೀವನಾರೋಗ್ಯ ಕೃತಿಯ ಮೂಲಕ ಹೇಳಲು ಹೊರಟಿದ್ದಾರೆ.

ವೈದ್ಯ ಲೋಕಕ್ಕೆ ಸಂಬಂಧಿಸಿದ 10 ಲೇಖನಗಳಿವೆ. ಮಿದುಳು, ಮನಸ್ಸು, ನರಮಂಡಲ, ಜೀರ್ಣಾಂಗಗಳು, ಉಸಿರಾಟದ ವ್ಯವಸ್ಥೆ, ಹೃದಯ ರಕ್ತ ಪರಿಚಲನೆ, ವಿಸರ್ಜನಾಂಗಗಳು, ಸಂತಾನೋತ್ಪತ್ತಿ, ಮೂಳೆ-ಕೀಲು ಸ್ನಾಯುಗಳ ಚಲನಾ ವ್ಯವಸ್ಥೆ ಹೀಗೆ ಹಲವಾರು ವಿಷಯಗಳಿಗೆ ಸಂಬಂಧಿಸಿದ ಮಾಹಿತಿ ಈ ಕೃತಿ ನೀಡುತ್ತದೆ. 

About the Author

ಸಿ.ಆರ್. ಚಂದ್ರಶೇಖರ್
(12 December 1948)

ಡಾ. ಸಿ.ಆರ್. ಚಂದ್ರಶೇಖರ್  ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ರಾಷ್ಟ್ರೀಯ ಮನೋರೋಗ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಉಪ ಆರೋಗ್ಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯುಳ್ಳ ಹಿರಿಯ ವೈದ್ಯರು ರೋಗಿಗಳ ಶುಶ್ರೂಷೆ,  ಬೋಧನೆ ಮತ್ತು ತರಬೇತಿ ನೀಡುತ್ತಿರುವುದರ ಜೊತೆಗೆ ಕಳೆದ 30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಮನೋವಿಜ್ಞಾನದ ಬಗ್ಗೆ ಕನ್ನಡದಲ್ಲಿ ರಚಿಸಿರುವ ಇವರ ಹಲವು ಪುಸ್ತಕಗಳು ತೆಲುಗು, ಉರ್ದು, ಗುಜರಾತಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. 1000 ಕ್ಕೂ ಹೆಚ್ಚು  ಪ್ರೌಢ ಲೇಖನಗಳನ್ನು ಬರೆದಿದ್ದಾರೆ. ...

READ MORE

Related Books