ಜೀವನ್ಮುಖಿ (ಶ್ರೀಮತಿ ಶಾಂತಾ ಪಸ್ತಾಪೂರ ಅವರ ಅಭಿನಂದನಾ ಗ್ರಂಥ)

Author : ಎ.ಕೆ.ರಾಮೇಶ್ವರ

Pages 298

₹ 350.00




Year of Publication: 2021
Published by: ಕಾವ್ಯಾಂಜಲಿ ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ ಸಂಸ್ಥೆ
Address: # ದೇಶಮುಖ ಕಾಂಪ್ಲೆಕ್ಸ್, ಮೊದಲ ಮಹಡಿ, ಲಾಲ್ ಗೇರಿ ವೃತ್ತ, ಕಲಬುರಗಿ-585103

Synopsys

ಹಿರಿಯ ಲೇಖಕಿ ಶಾಂತಾ ಪಸ್ತಾಪೂರ ಅವರು ಕಥೆ-ಕವನ-ಪ್ರವಾಸ ಕಥನ-ಕಾದಂಬರಿಗಳನ್ನು ರಚಿಸಿದ್ದು, ಅವರ ಒಡನಾಡಿ, ಅಭಿಮಾನಿ ಬಳಗದಿಂದ ಲೇಖನಗಳನ್ನು ಆಹ್ವಾನಿಸಿ ಪ್ರಕಟಿಸಿದ ಅಭಿನಂದನಾ ಗ್ರಂಥ-ಜೀವನಮ್ಮುಖಿ. ಮಕ್ಕಳ ಸಾಹಿತಿ ಎ.ಕೆ. ರಾಮೇಶ್ವರ ಪ್ರಧಾನ ಸಂಪಾದಕರು ಹಾಗೂ ಮಂಗಳಾ ಕಪರೆ ಸಂಪಾದಕರು. ಮನದಾಳದ ಮಾತು (ಕವನ ಸಂಕಲನ) ಪಯಣ (ಪ್ರವಾಸ ಕಥನ), ನೆನಪಿನಂಗಳ (ಕವನ ಸಂಕಲನ), ಕುಸುಮ ಬಾಲೆ (ಕವನ ಸಂಕಲನ), ಗೆಳೆತಿಯರ ದಂಡು ಯೂರೋಪ್ ಗೆ ಹೋಗಿದ್ದು (ಪ್ರವಾಸ ಕಥನ), ಬದುಕೇ ಒಂದು ಕಥೆ (ಕಥಾ ಸಂಕಲನ), ಅನುಭವ -ಅಭಿವ್ಯಕ್ತಿ ಮತ್ತು ಚಿಂತನ (ಲಲಿತ ಪ್ರಬಂಧಗಳು) , ಕಾವ್ಯಧಾರೆ (ಅವರು ರಚಿಸಿ, ಹಾಡಿದ ಧ್ವನಿ ಸುರುಳಿ) ಹೀಗೆ ಹಲವು ರೀತಿಯ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡಿದ್ದು, ಉನ್ನತ ಶಿಕ್ಷಣ ಪಡೆಯದಿದ್ದರೂ ಉತ್ತಮ ಗುಣಮಟ್ಟದ ಕೃತಿಗಳನ್ನು ನೀಡಿದ ಕೀರ್ತಿ ಇವರದ್ದು.

About the Author

ಎ.ಕೆ.ರಾಮೇಶ್ವರ
(02 May 1934)

ಎ.ಕೆ.ರಾಮೇಶ್ವರ ಮಕ್ಕಳ ಸಾಹಿತಿಗಳಲ್ಲಿ ಪ್ರಮುಖರು. ಮಕ್ಕಳಿಗಾಗಿಯೇ ಹಲವಾರು ಕೃತಿಗಳನ್ನು ರಚಿಸಿದ ಕೀರ್ತಿ ಇವರದು. 1934 ಮೇ 2ರಂದು ವಿಜಯಪುರ  ಜಿಲ್ಲೆಯ ದದಾಮಟ್ಟಿ ತಾಲ್ಲೂಕಿನಲ್ಲಿ ಹುಟ್ಟಿದ ಎ.ಕೆ.ರಾಮೇಶ್ವರ ಅವರು ಗುಲಬರ್ಗಾ ಜಿಲ್ಲೆಯನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ಬಂದಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ರಾಮೇಶ್ವರ ಅವರು ಮಕ್ಕಳ ಸಾಹಿತಿ ಎಂದೇ ಪ್ರಸಿದ್ಧರಾದವರು.  ಮಕ್ಕಳಿಗಾಗಿ ಸುಮಾರು ಹತ್ತು ಗ್ರಂಥಗಳನ್ನು ರಚಿಸಿರುವ ಇವರು ಜಾನಪದ ಕ್ಷೇತ್ರದಲ್ಲೂ ಗಮನಾರ್ಹ ಕೆಲಸ ಮಾಡಿದ್ದಾರೆ. ಸರಳ ಜೀವನ ನಡೆಸುವ ಎ.ಕೆ.ರಾಮೇಶ್ವರ ಅವರು ಹಳ್ಳಿಗಳತ್ತ ಆಕರ್ಷಿತರಾಗಿ ಜನಪದರ ಕಲೆ,ಸಾಹಿತ್ಯ, ಸಂಪ್ರದಾಯಗಳನ್ನೆಲ್ಲ ತೆರೆದ ಕಣ್ಣಿನಿಂದ ಕಂಡವರು.  ...

READ MORE

Related Books