ಜೀವನ ಗಂಗೋತ್ರಿ

Author : ವಿವೇಕಾನಂದ ಕಾಮತ್

Pages 168

₹ 90.00




Year of Publication: 2001
Published by: ಸಾಹಿತ್ಯ ಚಂದನ
Address: ನಂ.402 / 16, 4ನೇ ಮುಖ್ಯರಸ್ತೆ, 50 ಅಡಿ ರಸ್ತೆ, ಬನಶಂಕರಿ 1ನೇ ಹಂತ, 2ನೇ ಬ್ಲಾಕ್, ಬೆಂಗಳೂರು.-560050

Synopsys

ನಮ್ಮ ಕೈಯ್ಯ ಐದು ಬೆರಳುಗಳು ಹೇಗೆ ಒಂದೇ ಸಮವಿಲ್ಲವೋ , ಹಾಗೇ ಒಂದೇ ತಾಯಿಯ ಉದರದಿಂದ ಜನಿಸಿದ ಮಕ್ಕಳ ಗುಣ ಸ್ವಭಾವಗಳು ಒಂದೇ ತೆರನಾಗಿ ಇರುವುದಿಲ್ಲ. ಜೀವನ ಗಂಗೋತ್ರಿ ಕಾದಂಬರಿಯಲ್ಲಿ ಮಧ್ಯಮ ವರ್ಗದ ಮನೆಯ ಚಿತ್ರಣವಿದೆ. ಅಲ್ಲಿನ ಐದು ಮಕ್ಕಳು ತಂತಮ್ಮ ಕನಸುಗಳ ಬೆಂಬತ್ತಿ ಮನೆಯ ನೆಮ್ಮದಿಗೂ, ತಂತಮ್ಮ ವೈಯುಕ್ತಿಕ ಜೀವನದಲ್ಲಿ ಬಿರುಗಾಳಿ ತಂದುಕೊಂಡು ನಲುಗುವ ಚಿತ್ರಣವಿದೆ. ಅವರೆಲ್ಲರ ಜೀವನ ಗಂಗೋತ್ರಿ ತೀರ ಸೇರಿತೇ..? ಮಲ್ಲಿಗೆ ಮಾಸಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟಗೊಂಡ ಕಾದಂಬರಿ ಇದು.

About the Author

ವಿವೇಕಾನಂದ ಕಾಮತ್
(21 January 1976)

ತಮ್ಮ ಕತೆ-ಕಾದಂಬರಿಗಳ ಮೂಲಕ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ವಿವೇಕಾನಂದ ಕಾಮತ್ ಅವರು 100ಕ್ಕೂ ಹೆಚ್ಚು ಕತೆ ಹಾಗೂ 60 ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.  ಚಿಕ್ಕಮಗಳೂರು ಜಿಲ್ಲೆಯ ಕಳಸದವರಾದ ವಿವೇಕಾನಂದ ಅವರು ಜನಿಸಿದ್ದು 1976ರ ಜನವರಿ 21ರಂದು. ಮಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮ ಪದವಿ ಪಡೆದ ಈಗ ಅಲ್ಲಿಯೇ ಸ್ವಂತ ಉದ್ಯೋಗದಲ್ಲಿ ತೊಡಗಿದ್ದಾರೆ. ಸೊಗಸಾದ ಭಾಷೆ, ಸರಳ ಶೈಲಿ, ಆಕರ್ಷಕ ನಿರೂಪಣೆಗಳಿರುವ ಕತೆ ಬರೆಯುವ ವಿವೇಕಾನಂದ ಅವರು 1994ರಲ್ಲಿ ಬರವಣಿಗೆ ಆರಂಭಿಸಿದ ಅವರಿಗೆ ಕಾದಂಬರಿಯ ಪ್ರಕಾರದಲ್ಲಿ ಒಲವು. 40 ಕಾದಂಬರಿಗಳು, 150ಕ್ಕೂ ಹೆಚ್ಚು ಕಥೆ, 20 ಮಿನಿ ಕಾದಂಬರಿಗಳನ್ನು ರಚಿಸಿದ್ದಾರೆ. ಅವುಗಳು ನಾಡಿನ ಬಹುತೇಕ ...

READ MORE

Related Books