ಜೀವನ ವಿಜ್ಞಾನ ಶಿಕ್ಷಣ

Author : ಅರವಿಂದ ಚೊಕ್ಕಾಡಿ

Pages 120

₹ 85.00




Year of Publication: 2011
Published by: ನವಕರ್ನಾಟಕ ಪ್ರಕಾಶನ
Address: ಎಂಬಸಿ ಸೆಂಟರ್‍, ಕ್ರೆಸೆಂಟ್ ರೋಡ್, ಬೆಂಗಳೂರು.

Synopsys

ವಿಜ್ಞಾನವು ವಿಚಾರಗಳನ್ನು ಸಮರ್ಥಿಸಲು ಖಚಿತ ಮಾನದಂಡಗಳನ್ನು ಇಟ್ಟುಕೊಂಡಿರುತ್ತದೆ. ಇದು ವಿಜ್ಞಾನದ ವಿಶಿಷ್ಟ ಗುಣ. ವಿಜ್ಞಾನದ ಗ್ರಹಿಕೆಗಳು ಪ್ರಯೋಗ ಮತ್ತು ಪ್ರಮಾಣೀಕರಿಸಿದ ಸೂತ್ರಕ್ಕೆ ಒಳಪಟ್ಟಿರುತ್ತದೆ. ಹೊಸ ಪ್ರಯೋಗದಿಂದ ಹಿಂದಿನ ಫಲಿತಾಂಶ ಸರಿಯಿಲ್ಲವೆಂದು ಸಾಬೀತಾದಾಗ ಹಳೆಯದನ್ನು ಕೈಬಿಟ್ಟು ಹೊಸತನ್ನು ಸ್ಥಾಪಿಸುವುದು ವಿಜ್ಞಾನದ ಪದ್ಧತಿ. ಇದೇ ರೀತಿ ಜೀವನ ವಿಜ್ಞಾನ ಸಹ ಶಿಕ್ಷಣದ ವಿಷಯ ಬಂದಾಗ ಅದು ವೈಜ್ಞಾನಿಕವಾಗಿರಬೇಕಾದದ್ದು ಅನಿವಾರ್ಯ. ಯಾಕೆಂದರೆ ಕಲಿಸುವ ವಿಚಾರಗಳು ಎಲ್ಲರ ಅನುಭವಕ್ಕೂ ಸಿಗುವ, ತಾರ್ಕಿಕವಾಗಿ ಸರಿ ಇರುವ, ಪ್ರಮಾಣೀಕರಣಕ್ಕೆ ಒಳಪಡುವ ಸಂಗತಿಗಳಾಗಿರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಲೇಖಕರು ಡಿ.ಎಸ್.ಇ.ಆರ್.ಟಿ. ನಿಗದಿಪಡಿಸಿರುವ ಕೆಲವು ಸೂತ್ರಗಳನ್ನು ಅನುಸರಿಸಿ ಪುಸ್ತಕವನ್ನು ರಚಿಸಿದ್ದಾರೆ.

About the Author

ಅರವಿಂದ ಚೊಕ್ಕಾಡಿ
(21 December 1975)

 ಅರವಿಂದ ಚೊಕ್ಕಾಡಿ ಅವರು 1975ರ ಡಿಸೆಂಬರ್ 21ರಂದು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಮಾಲೆತ್ತೋಡಿ  ಎಂಬಲ್ಲಿ ಜನಿಸಿದರು. ತಂದೆ ಕುಕ್ಕೆಮನೆ ವೆಂಕಟ್ರಮಣಯ್ಯ ಗೋಪಾಲ ಶರ್ಮ. ತಾಯಿ ಪಾರ್ವತಿ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಚಕ್ಕಾಡಿಯಲ್ಲಿ ಮುಗಿಸಿ ಪದವಿ ಪೂರ್ವ ಮತ್ತು ಬಿ.ಎ ಪದವಿಯನ್ನು ಸುಳ್ಯದ ನೆಕರೂ ಮೆಮೋರಿಯಲ್ ಕಾಲೇಜಿನಲ್ಲಿ ಪಡೆದರು. ಮಂಗಳೂರಿನ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದಿಂದ  ಬಿ. ಇಡ್. ಪದವೀಧರರಾಗಿರುವ ಇವರು  ಕರ್ನಾಟಕ ರಾಜ್ಯ  ಮುಕ್ತ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ. ಎ ಪದವಿ ಪಡೆದರು. 2011 ರಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ...

READ MORE

Related Books