ಜೋಡ್ಪಾಲ

Author : ‌ಅನುಷ್ ಎ. ಶೆಟ್ಟಿ

Pages 180

₹ 100.00




Year of Publication: 2016
Published by: ಅನುಗ್ರಹ ಪ್ರಕಾಶನ
Address: ನಂ. 690, 80 ಅಡಿ ರಸ್ತೆ, ಕನಕದಾಸ ನಗರ,ತ್ರಿವೇಣಿ ಸೂಪರ್‍ ಮಾರ್ಕೆಟ್ ಹತ್ತಿರ, ದತ್ತಗಳ್ಳಿ 3ನೇ ಹಂತ ಮೈಸೂರು – 570022
Phone: 9980808031

Synopsys

ಲೇಖಕರಾದ ಅನುಷ್ ಎ ಶೆಟ್ಟಿಯವರ ಕಾದಂಬರಿ ಜೋಡ್ಪಾಲ.

ಮಡಿಕೇರಿಯಿಂದ ಮಂಗಳೂರಿಗೆ ಇಳಿಯುವ ಘಾಟಿಯ ಒಂದು ಪುಟ್ಟ ಊರೇ ಜೋಡ್ಪಾಲ. ಆ ಘಾಟಿಯಲ್ಲಿ ನಡೆಯುವ ವಿಚಿತ್ರ ಘಟನೆಗಳು, ಹಾಗು ಆ ಘಟನೆಗಳಿಗೆ ಹೆಣೆದುಕೊಂಡಿರುವ ರೋಚಕ ತಿರುವುಗಳೇ ಈ ಕಾದಂಬರಿಯ ತಿರುಳು.  ಒಂದು ಜೋಡ್ಪಾಲ ಘಾಟಿನಲ್ಲಿ ಒಂದು ಲಾರಿ ಬಿದ್ದು ಅಪಘಾತವಾಗುತ್ತದೆ. ಅದರ ಮಾರನೆಯ ದಿನ ಇದ್ದಕ್ಕಿದ್ದಂತೆ ಏನೇನೋ ಘಟನೆಗಳು ನಡೆಯುತ್ತವೆ. ರಾಬರ್ಟ್, ಪೆಮ್ಮಯ್ಯ ಮತ್ತು ಕಿಟ್ಟಿ, ರಾಜು ಎಂಬ ಗೆಳೆಯರು  ಕಾಣೆಯಾಗುತ್ತಾರೆ. ಕಿಟ್ಟಿಗೆ ಅವನ ಆಪ್ತ ಗೆಳೆಯ ಭೀಮನ ತೆಕ್ಕೆಯಲ್ಲಿ ಕೆಂಪು ಹರಳಿನ ಸರ ಸಿಗುತ್ತದೆ. ಹೀಗೆ ಕೆಲವು ವಸ್ತುಗಳಿಂದ ಕಾದಂಬರಿಯು ಹೊಸ ತಿರುವು ಪಡೆಯುತ್ತಾ ಕುತೂಹಲ, ಮತ್ತು ವಿಸ್ಮಯಕಾರಿ ಘಟನೆಗಳನ್ನು ಓದುಗರ ಮುಂದಿಡುತ್ತದೆ. ಕಳುವಾದ ಸರ ಮಡಿಕೇರಿಗೆ ಹೇಗೆ ಬಂತು ? ಕಾಣೆಯಾದವರಿಗೂ ಅಪಘಾತಕ್ಕೂ ಸಂಬಂಧಗಳೇನು ಎಂಬ ಪ್ರಶ್ನೆಗಳು ಓದುಗರ ಸುತ್ತ ಕುತೂಹಲ ಹುಟ್ಟಿಸುವಂತದ್ದಾಗಿದೆ. 

 

About the Author

‌ಅನುಷ್ ಎ. ಶೆಟ್ಟಿ

ಅನುಷ್ ಎ ಶೆಟ್ಟಿ ಜನಿಸಿದ್ದು ಮಂಗಳೂರಿನಲ್ಲಿ. ವಿದ್ಯಾಭ್ಯಾಸ ಹುಣಸೂರು, ಮೈಸೂರಿನಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಿಂದ ವಿದ್ಯುನ್ಮಾನ ಮಾಧ್ಯಮದಲ್ಲಿ ಎಂ.ಎಸ್ಸಿ ಪದವಿ ಪಡೆದಿರುವ ಇವರು ಕನ್ನಡಪ್ರಭ, ಸಾಧ್ವಿ ದಿನಪತ್ರಿಕೆಗಳಲ್ಲಿ, ಜೀ ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. 15 ವರ್ಷಗಳ ಕಾಲ ಮೃದಂಗ ವಾದನ ಕಲಿತ ಇವರು, ಅನೇಕ ಲಯವಾದ್ಯಗಳನ್ನು ನುಡಿಸಬಲ್ಲವರಾಗಿದ್ದು, ತಮ್ಮ ಗೆಳೆಯರೊಂದಿಗೆ ಕೂಡಿ ಆರಂಭಿಸಿರುವ ‘ನಾವು’ ಬ್ಯಾಂಡ್ ಮೂಲಕ ಸಂಗೀತದಲ್ಲಿ ಹೊಸ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಕಳೆದ 8 ವರ್ಷಗಳಿಂದ ರಂಗ ಸಂಗೀತವನ್ನೂ ಮಾಡುತ್ತ ದೇಶಾದ್ಯಂತ ಓಡಾಡುತ್ತಿದ್ದಾರೆ. ಪ್ರಸ್ತುತ, ಗೆಳೆಯ ಶ್ರೀವತ್ಸ ಅವರೊಂದಿಗೆ ‘ಇವೆಂಟೊ’ ಎಂಬ ಇವೆಂಟ್ ಕಂಪೆನಿ ಮತ್ತು ಅನುಗ್ರಹ ...

READ MORE

Conversation

Related Books