ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಬದುಕಿನ ಬಗೆ

Author : ಕೆ.ಸಿ. ಶಿವಾರೆಡ್ಡಿ

Pages 72

₹ 200.00




Year of Publication: 2018
Published by: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
Address: ಕನ್ನಡ ಭವನ, ಜಯಚಾಮರಾಜ ರಸ್ತೆ, ಬೆಂಗಳೂರು

Synopsys

‘ಕೆ.ಪಿ. ಪೂರ್ಣಚಂದ್ರ ತೇಜಸ್ವಿ’ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತ ಹೆಸರು. ಸರಳ ಭಾಷಾಶೈಲಿ ಹಾಗೂ ವೈವಿದ್ಯಮಯ ವಿಷಯಗಳ ಮೂಲಕ ಹೊಸ ಯುವ ಓದುಗ ಸಮೂಹವನ್ನೇ ಸೃಷ್ಟಿಸಿದರು. ಇವರ ಕರ್ವಾಲೋ, ಅಬಚೂರಿನ ಪೋಸ್ಟಾಫೀಸು, ಕಿರುಗೂರಿನ ಗೈಯ್ಯಾಳಿಗಳು ಮುಂತಾದ ಕತೆಗಳನ್ನು ಓದುದವರ ಸಂಖ್ಯೆ ವಿರಳ ಎಂತಲೇ ಹೇಳಬಹುದು. ಇಂತಹ ಹೊಸ ವಿಸ್ಮಯ ವಿಭಿನ್ನ ಲೋಕವನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿದ ತೇಜಸ್ವಿ ಅವರ ಬದುಕು ಬರಹದ ಬಗ್ಗೆ ಕೆ.ಸಿ. ಶಿವಾರೆಡ್ಡಿ ಅವರು ಈ ಕೃತಿಯಲ್ಲಿ ಅಪರೂಪದ ಚಿತ್ರಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಈ ಕೃತಿಯಲ್ಲಿ ತೇಜಸ್ವಿ ಅವರ ಬಾಲ್ಯ, ಕಾಲೇಜು ದಿನಗಳು, ಬರಹ, ಇವರ ಕೃತಿಗಳ ಕುರಿತ ಸಂಕ್ಷಿಪ್ತ ವಿವರವಿದೆ.

About the Author

ಕೆ.ಸಿ. ಶಿವಾರೆಡ್ಡಿ
(01 June 1961)

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದದಲ್ಲಿ ಸಹ ಪ್ರಾಧ್ಯಾಪಕರಾಗಿರುವ ಕೆ.ಸಿ. ಶಿವಾರೆಡ್ಡಿ ಅವರು ಆಧುನಿಕ ಗ್ರಂಥ ಸಂಪಾದನೆಯಲ್ಲಿ ಮಹತ್ವದ ಕೆಲಸ ಮಾಡಿದ್ದಾರೆ. ಕುವೆಂಪು ಅವರ ಸಮಗ್ರ ಕೃತಿಗಳ ಸಂಪಾದಕರಾಗಿ ಅವರು ಮಾಡಿರುವ ಕೆಲಸ ಅನನ್ಯವಾದದ್ದು. ರಾಷ್ಟ್ರಕವಿ ಕುವೆಂಪು ಅವರ ಸಮಗ್ರ ಕೃತಿಗಳನ್ನು 9 ಸಂಪುಟಗಳಲ್ಲಿ ಸಂಪಾದಿಸಿ ಪ್ರಕಟಿಸಿದ್ದಾರೆ. ಹಾಗೆಯೇ ಬೇಂದ್ರೆಯವರ ಕವಿತೆಗಳನ್ನು ಕುರಿತ ’ಅಂಬಿಕಾತನಯನ ನಂಬಿಕೆಯ ಹಾಡು’ ಹಾಗೂ ’ಶತಮಾನದ ಕವಿತೆ ಜೋಗಿ’ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ.  ಒಂದನೇ ನಾಗವರ್ಮನ ಕರ್ನಾಟಕ ಕಾದಂಬರಿ, ಕನಸುಗಳ ಕವಿ ಕಂಬಾರರ ಚಕೋರಿ ಒಂದು ಅಧ್ಯಯನ, ಇದು ಎಂಥಾ ಹಾಡು (ಕವಿ ...

READ MORE

Related Books