ಕೆ. ಎಸ್. ನಿಸಾರ್‌ ಅಹಮದ್ ಆಯ್ದ ಗದ್ಯ ಬರಹಗಳು

Author : ಕೆ.ಎಸ್. ನಿಸಾರ್ ಅಹಮದ್

Pages 724

₹ 550.00




Year of Publication: 2017
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯ ರಸ್ತೆ. ಗಾಂಧಿನಗರ, ಬೆಂಗಳೂರು, 560009
Phone: 08040114455

Synopsys

ಕನ್ನಡ ನಾಡು ನುಡಿ ಬೆಳವಣಿಗೆಗೆ ಶ್ರಮಿಸಿದ್ದರ ಕುರಿತು ಒಂದು ಸ್ಪಷ್ಟ ಚಿತ್ರಣವನ್ನು ನೀಡುವ ವೈಚಾರಿಕ ಹಾಗೂ ಚಿಂತನಾ ಬರೆಹಗಳನ್ನು ಬರೆದವರು ಕವಿ ನಿಸಾರ್‌ ಅಹಮದ್. ಅವರು ಇದುವರೆಗೂ ಬರೆದ ಲೇಖನಗಳನ್ನು ಸಂಗ್ರಹಿಸಿ ಅತ್ಯುತ್ತಮ ಎನಿಸಿದವುಗಳನ್ನು ಆಯ್ದು ಸ್ವಪ್ನ ಬುಕ್‌ ಹೌಸ್‌ನವರು ಪ್ರಕಟಿಸಿದ್ದಾರೆ. ಕನ್ನಡ ಪುಸ್ತಕ ಸಂಸ್ಕೃತಿ ಬೆಳೆದು ಬಂದ ಹಾದಿ, ಕೊಡುಗೆ ನೀಡಿದ ಮಹನೀಯರ ಚಿತ್ರಣಗಳು ಕೃತಿಯಲ್ಲಿ ಕಾಣ ಸಿಗುತ್ತವೆ.

About the Author

ಕೆ.ಎಸ್. ನಿಸಾರ್ ಅಹಮದ್
(05 February 1936 - 03 May 2020)

ಭಾವಗೀತೆಗಳ ಮೊದಲ ಕನ್ನಡ ಧ್ವನಿಸುರುಳಿ ‘ನಿತ್ಯೋತ್ಸವ’ದ ಕವಿ ಕೆ.ಎಸ್. ನಿಸಾರ್ ಅಹಮದ್ ಅವರು ಕವಿತೆ, ವಿಮರ್ಶೆ, ಅನುವಾದದ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಅವರ ತಂದೆ ಮೈಸೂರು ಸರ್ಕಾರದಲ್ಲಿ ರೆವೆನ್ಯೂ ಅಧಿಕಾರಿಯಾಗಿದ್ದ ಕೆ.ಎಸ್. ಹೈದರ್ ಮತ್ತು ತಾಯಿ ಗೃಹ ವಿಜ್ಞಾನ ಪದವೀಧರೆ ಹಮೀದಾ ಬೇಗಂ. 1936ರ ಫೆಬ್ರುವರಿ 5ರಂದು ಜನಿಸಿದರು. ಬೆಂಗಳೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು, ಹೊಸಕೋಟೆಯಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಪದವಿಗಳಿಸಿದ ಇವರು ಭೂವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಗಳಿಸಿದರು. ಮೈಸೂರು ಸರಕಾರ ಭೂವಿಜ್ಞಾನ ಇಲಾಖೆಯಲ್ಲಿ ಒಂದಿಷ್ಟು ಕಾಲ ಸೇವೆ ಸಲ್ಲಿಸಿದರು. ಅನಂತರ ಕಾಲೇಜು ...

READ MORE

Related Books