ಕಾಡ ಕಸ್ತೂರಿ

Author : ಪ್ರಸನ್ನ ಕರ್ಪೂರ

Pages 98

₹ 150.00




Year of Publication: 2020
Published by: ಉಮಾ ಪ್ರಕಾಶನ
Address: ಶ್ರೀ ಲಕ್ಷ್ಮೀ, ಹನುಮಂತನಗರ, ಧಾರವಾಡ
Phone: 9611466159

Synopsys

ಲೇಖಕ ಪ್ರಸನ್ನ ಕರ್ಪೂರ ಅವರು ಬರೆದ ಬುಡಕಟ್ಟು ಸಂಸ್ಕೃತಿಯ ಅಧ್ಯಯನದ ಕೃತಿ-ಕಾಡ ಕಸ್ತೂರಿ. ಕಾಡಿನಲ್ಲಿ ಬದುಕು ಸಾಗಿಸುತ್ತಾ ನಾಗರಿಕ ಜಗತ್ತಿಗೆ ಅಪರಿಚಿತರಾಗಿ ಬದುಕುತ್ತಿರುವ ಕುಣಬಿ ಬುಡಕಟ್ಟು ಜನಾಂಗದ ನತದೃಷ್ಟ ಜನರ ವ್ಯಥೆಯ ಕತೆ ಇದು. ಅಲ್ಲಿಯ ಜನರ ಸಾಂಸ್ಕೃತಿಕ ಸಿರಿವಂತಿಕೆ, ಹೃದಯ ವೈಶಾಲ್ಯತೆ, ಅವಿಭಕ್ತ ಕುಟುಂಬ ಪದ್ಧತಿ, ಸಮುದಾಯ ಅಭಿವೃದ್ಧಿ ಇತ್ಯಾದಿ ಅಂಶಗಳಿಗೆ ಸ್ಪಂದಿಸಿರುವ ಲೇಖಕರು ನಿಶ್ಚಿತ ಸಂಸ್ಕೃತಿಯ ಆಳ ಅಧ್ಯಯನ ಮಾಡಿದ್ದಾರೆ. ಈ ಕೃತಿಗೆ ಪತ್ರಕರ್ತ ರವಿ ಬೆಳಗೆರೆ ಅವರ ಮುನ್ನುಡಿ ಇದೆ.

About the Author

ಪ್ರಸನ್ನ ಕರ್ಪೂರ

ಪತ್ರಕರ್ತ, ಲೇಖಕ ಪ್ರಸನ್ನ ಕರ್ಪೂರ ಅವರು 2005ರಲ್ಲಿ ಪತ್ರಿಕೋದ್ಯಮಕ್ಕೆ ಹೆಜ್ಜೆ ಇಟ್ಟರು. ಸಂಯುಕ್ತ ಕರ್ನಾಟಕ, ಉಷಾಕಿರಣ, ಟೈಮ್ಸ್ ಆಫ್ ಇಂಡಿಯಾ ಕನ್ನಡ, ಕಸ್ತೂರಿ ವಾಹಿನಿ, ಕನ್ನಡಪ್ರಭ, ಹೊಸದಿಗಂತ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ಪ್ರಸ್ತುತ ವಿಜಯ ಕರ್ನಾಟಕದ ಹುಬ್ಬಳ್ಳಿ ಆವೃತ್ತಿಯಲ್ಲಿ ಪ್ರಧಾನ ಉಪಸಂಪಾದಕರಾಗಿದ್ದಾರೆ. ಅರಣ್ಯ, ಕೃಷಿ, ಸಿನಿಮಾ, ಸಾಹಿತ್ಯ ಅವರ ಆಸಕ್ತಿಯ ಕ್ಷೇತ್ರಗಳು. ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾದ ‘ಬಿಡುಗಡೆಯ ಬೇಡಿ’ ಎಂಬ ವಿನೂತನ ಪರಿಕಲ್ಪನೆಯ ಕಾರ್ಯಕ್ರಮಕ್ಕೆ 2008ರಲ್ಲಿ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಕೂಡ ಸಂದಿದೆ. ಉತ್ತರ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಓಡಾಡಿ ಜೈಲಿನಿಂದ ಬಿಡುಗಡೆಯಾದ ನಂತರ ಕೈದಿಗಳ ಜೀವನ ಸ್ಥಿತಿ ...

READ MORE

Related Books