ಕಾಲ

Author : ಎಂ. ಶಿವರಾಂ (ರಾಶಿ)

Pages 160

₹ 120.00




Year of Publication: 2011
Published by: ಅಂಕಿತ ಪುಸ್ತಕ
Address: 53, ಗಾಂಧಿ ಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು

Synopsys

ವೈದ್ಯರಾದ ಡಾ. ಎಂ. ಶಿವರಾಂ ಅವರ ಕೃತಿ ’ಕಾಲ’.

’ಕಾಲ’ ಎಂಬ ವಿಷಯವನ್ನು ಕುರಿತು ನಡೆಸಿದ ವೈಜ್ಞಾನಿಕ ವಿಚಾರ ಶ್ರೇಣಿಯ ವಸ್ತುವನ್ನು ಈ ಕೃತಿ ಪ್ರಸ್ತಾಪಿಸುತ್ತದೆ. ಕಾಲದ ಬಗ್ಗೆ ಭಾರತೀಯರ ಕಲ್ಪನೆ ಏನು?, ಯಾವ ತತ್ವವನ್ನು ಪ್ರತಿಪಾದಿಸುತ್ತಾರೆ, ಅವರ ನಿಲುವುಗಳೇನು ಎಂಬುದರ ಬಗ್ಗೆ ಈ ಕೃತಿ ವಿಸ್ತರಿಸುತ್ತಾ ಸಾಗುತ್ತದೆ.

ಹೊಸ ವೈಜ್ಞಾನಿಕ ಶಾಸ್ತ್ರವೊಂದನ್ನು ಈ ಕೃತಿ ರಚನೆ ಮೂಲಕ ಓದುಗರಿಗೆ ಪರಿಚಯಿಸಲಾಗಿದೆ. ವಿಜ್ಞಾನ-ಶಾಸ್ತ್ರಿಗಳ ಸಮನ್ವಯ, ವೈದ್ಯ-ಧ್ಯಾನ. ಪ್ರಾರ್ಥನೆಗಳ ಏಕಸ್ವಭಾವ, ವಿಜ್ಞಾನ ಸಂಶೋಧನೆಗಿಂತ ಶಾಸ್ತ್ರಾನ್ವೇಷಣೆಯ ದೃಪ್ಟಿಯಲ್ಲಿ ಕಂಡುಬರುವ  ನೈಜ ಮತ್ತು  ಖಚಿತ ಸಮೀಕ್ಷೆ  ಇವುಗಳ ವಿವರವನ್ನು ಡಾ. ಶಿವರಾಂ ಅವರು ತಮ್ಮ ’ಕಾಲ’ ಕೃತಿಯ ಮೂಲಕ ನೀಡಿದ್ದಾರೆ.

 

About the Author

ಎಂ. ಶಿವರಾಂ (ರಾಶಿ)
(10 November 1905 - 13 January 1984)

ಲೇಖಕ ಎಂ.ಶಿವರಾಂ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ- ರಾಮಸ್ವಾಮಯ್ಯ. ತಾಯಿ- ಸೀತಮ್ಮ. ಬೆಂಗಳೂರಿನಲ್ಲಿಯೇ ಶಿಕ್ಷಣ ಪಡೆದ ಅವರು ಎಂ.ಬಿ.ಬಿ.ಎಸ್ ಓದುತ್ತಿರುವಾಗಲೇ ತಂದೆ ತೀರಿಕೊಂಡಿದ್ದರಿಂದ ಸಂಸಾರದ ಜವಾಬ್ದಾರಿ ಹೊರಬೇಕಾಯ್ತು. ಈ ವೇಳೆ ಸಾಹಿತಿ ಕೈಲಾಸಂ ಅವರು ವೈದ್ಯರಾಗಿ ಸೇವೆಸಲ್ಲಿಸುವಂತೆ ಸಲಹೆ ನೀಡಿದ್ದರು. ಈ ಕಾರಣದಿಂದಾಗಿಯೇ ಬೆಂಗಳೂರು ಮೆಡಿಕಲ್ ಕಾಲೇಜು ಸ್ಥಾಪಿಸಿದ ಶಿವರಾಂ ಅವರು ಕೈಗಾರಿಕೋದ್ಯಮದಲ್ಲೂ ಸೇವೆ ಸಲ್ಲಿಸಿದ್ದಾರೆ. ಅನೇಕ ಸಂಘ ಸಂಸ್ಥೆಗಳೊಡನಾಟವಿದ್ದ ಅವರು ಇಂಡಸ್ಟ್ರಿಯಲ್ ಟೆಸ್ಟಿಂಗ್ ಲ್ಯಾಬೋರೇಟರಿಯ ನಿರ್ದೇಶಕರಾಗಿ, ಕಿರ್ಲೋಸ್ಕರ್ ಕಾರ್ಖಾನೆಯ ನಿರ್ದೇಶಕರಾಗಿ, ಮೈಸೂರು ಲ್ಯಾಂಪ್ಸ್, ಇಂಡಿಯನ್ ಆಕ್ಸಿಜನ್ ಕಂಪನಿಗಳ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮೈಸೂರು ಕ್ಯಾನ್ಸರ್ ಸೊಸೈಟಿ ...

READ MORE

Related Books