ಕಾಳಿದಾಸನ ಮೇಘದೂತ ಮತ್ತು ಕನ್ನಡ ರೂಪಾಂತರಗಳು

Author : ಶೈಲಜಾ ಹೆಗಡೆ

Pages 298

₹ 200.00




Year of Publication: 2017
Published by: ಅಭಿಜಿತ್ ಪ್ರಕಾಶನ
Address: # A/404, ವಿನಾಯಕ ಆಶಿಸ್, ಎಂಎಂಎಂ ರಸ್ತೆ,, ಪಿ ಮತ್ತು ಟಿ ಕಾಲೊನಿ ಹತ್ತಿರ, ಮುಲುಂದ (ಪಶ್ಚಿಮ) ಮುಂಬೈ-400080

Synopsys

ಕವಯತ್ರಿ ಶೈಲಜಾ ಹೆಗಡೆ ಅವರ ಎಂ.ಫಿಲ್. ಕೃತಿ-ಕಾಳಿದಾಸನ ಮೇಘದೂತ ಮತ್ತು ಕನ್ನಡ ರೂಪಾಂತರಗಳು. ಕಾಳಿದಾಸನ ಮೇಘದೂತ ಎಂಬ ಸಂಸ್ಕೃತ ಕೃತಿಯು ಭಾರತೀಯ ಬಹುತೇಕ ಭಾಷೆಗಳಲ್ಲಿ  ಅನುವಾದಗೊಂಡಿದೆ.  ದ.ರಾ. ಬೇಂದ್ರೆ, ಎಸ್.ವಿ.ಪರಮೇಶ್ವರ ಭಟ್ , ಗಣಪತಿ ಮೊಳೆಯಾರ, ಸಾಲಿ ರಾಮಚಂದ್ರರಾಯರು, ಗೋಪಾಲಕೃಷ್ಣ ಪಾಲೆಪ್ಪಾಡಿ ಅವರೂ ಬಹು ಹಿಂದೆಯೇ ಮೇಘದೂತವನ್ನು ಅನುವಾದಿಸಿದ್ದರೆ, ಇತ್ತೀಚೆಗೆ ಅ.ರಾ. ಮಿತ್ರ ಅನುವಾದಿಸಿದ್ದಾರೆ. ಶತಾವಧಾನಿ ಆರ್. ಗಣೇಶ್ ಅವರು ಮೇಘದೂತದದ ವಿಡಂಬನೆಯಾಗಿ ಧೂಮದೂತ ಎಂಬ ಕೃತಿ ರಚಿಸಿದ್ದರೆ, ಹೊಸ್ತೋಟ ಮಂಜುನಾಥ ಭಾಗವತ ಹಾಗೂ ವಿದ್ವಾನ್ ಉಮಾಕಾಂತ ಭಟ್ಟರು ಮೇಘದೂತ ಕೃತಿಯನ್ನು ಯಕ್ಷಗಾನಕ್ಕೆ ಅಳವಡಿಸಿದ್ದಾರೆ. ಹೀಗೆ ಮೇಘದೂತ ಪಡೆದ ರೂಪಾಂತರಗಳು ಅನುವಾದಗಳನ್ನು, ಅದರ ವಸ್ತು, ಶೈಲಿ, ಛಂದಸ್ಸುಗಳ ವಿನ್ಯಾಸ, ಪ್ರಾಸ-ಅನುಪ್ರಾಸ, ಸೌಂದರ್ಯ ಅಂಶಗಳು, ಅಲಂಕಾರಗಳನ್ನು, ವಿವಿಧ ಅನುವಾದಕರು ಅರ್ಥೈಸಿದ ಅರ್ಥ ಸೂಕ್ಷ್ಮತೆಗಳನ್ನು, ಬರಹದ ವ್ಯವಸ್ಥೆಯನ್ನು ಲೇಖಕಿಯು ಸಮಗ್ರವಾಗಿ ಪರಿಶೀಲಿಸಿದ ಕೃತಿ ಇದು. 

 

About the Author

ಶೈಲಜಾ ಹೆಗಡೆ

ಹಿರಿಯ ಲೇಖಕಿ-ಚಿಂತಕಿ ಶೈಲಜಾ ಹೆಗಡೆ ಅವರ ತಂದೆ ಕೆರೆಕೈ ಕೃಷ್ಣಭಟ್ಟರು. ಹೆಸರಾಂತ ಯಕ್ಷಗಾನ ಕಲಾವಿದರು. ತಾಳಮದ್ದಲೆ ಅರ್ಥಧಾರಿಗಳು. ಇವರ ಎಂ.ಫಿಲ್ ಕೃತಿ-ಕಾಳಿದಾಸನ ಮೇಘದೂತ ಮತ್ತು ಕನ್ನಡ ರೂಪಾಂತರಗಳು.  ...

READ MORE

Related Books