ಕಾಮ ಕೂಪ

Author : ಟಿ.ಡಿ.ರಾಜಣ್ಣ ತಗ್ಗಿ

Pages 352

₹ 250.00




Year of Publication: 2012
Published by: ದೇಸಿ ಪುಸ್ತಕ
Address: ನಂ.121, 13ನೇ ಮುಖ್ಯರಸ್ತೆ, ಎಂ.ಸಿ. ಲೇಔಟ್, ವಿಜಯನಗರ, ಬೆಂಗಳೂರು- 560040
Phone: 080 23153558

Synopsys

‘ಕಾಮ ಕೂಪ’ ರಷ್ಯಾ ಮೂಲದ ಖ್ಯಾತ ಲೇಖಕ ಅಲೆಗ್ಸಾಂಡರ್ ಕುಫ್ರಿನ್ ಅವರ ಕಾದಂಬರಿಯ ಅನುವಾದ. ತೆಲುಗಿಗೆ ಅನುವಾದವಾಗಿದ್ದ ಈ ಕಾದಂಬರಿಯನ್ನು ಲೇಖಕ, ಅನುವಾದಕ ಡಾ.ಟಿ.ಡಿ. ರಾಜಣ್ಣ ತಗ್ಗಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕಾದಂಬರಿಯ ವಸ್ತು-ವೇಶ್ಯಾಜಗತ್ತಿನ ಕಣ್ಣೀರ ಕಥನ. ಇದು ಕೇವಲ ರಷ್ಯಾ ಜನರ ಬದುಕು ಮಾತ್ರವಲ್ಲ, ಆ ನಗರದಲ್ಲಿರುವ ವ್ಯಭಿಚಾರದ ಶೃಂಗಾರಗಾಥೆ.  ಶೃಂಗಾರಪುರ(ಯಾಮಾ) ಪ್ರವೇಶ ವಿಶಿಷ್ಟ ಮತ್ತು ವಿಭಿನ್ನ ಓದುಗರನ್ನು ಬೇರೊಂದು ಪ್ರಪಂಚಕ್ಕೆ ತೆರೆದುಕೊಂಡು ಹೋಗುವ ಈ ಪುರದ ಬೀದಿಯನ್ನು ಪ್ರತಿಯೊಬ್ಬರೂ ಇಷ್ಟಪಟ್ಟು ಪ್ರವೇಶಿಸುತ್ತಾರೆ. ಉದ್ದಕ್ಕೂ ವಿಹರಿಸಿ, ಆನಂದಿಸಿ, ಅಚ್ಚರಿ ವ್ಯಕ್ತಪಡಿಸಿ, ಅಸಹ್ಯಪಟ್ಟು, ಮೂಗುಮುರಿಯುತ್ತಾ ಕಡೆಗೆ ಅನುಕಂಪದಿಂದ ಹೊರ ನಡೆಯುತ್ತಾರೆ. ಕಥಾ ವಸ್ತುವಿನಲ್ಲಿ ಹಸಿ, ಹಸಿ ಶೃಂಗಾರವಿದೆ. ನೋವಿದೆ, ಸಂಕಟವಿದೆ, ಸಿಟ್ಟಿದೆ, ದ್ವೇಷವಿದೆ ಅಸಹಾಯಕತೆ ಇದೆ ಮತ್ತು ಕ್ರೂರತೆ ಇದೆ. ಕೆಲವು ಕಡೆ ಮಾನವೀಯತೆಯೂ ಇದೆ.

About the Author

ಟಿ.ಡಿ.ರಾಜಣ್ಣ ತಗ್ಗಿ

ಕನ್ನಡದ ಯುವ ಸಂಶೋಧಕ, ಅನುವಾದಕ ಟಿ.ಡಿ. ರಾಜಣ್ಣ ತಗ್ಗಿ ಅವರು ಮೂಲತಃ ತುಮಕೂರು ಜಿಲ್ಲೆ, ಮಧುಗಿರಿ ತಾಲೂಕಿನ ತಗ್ಗಿಹಳ್ಳಿಯವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ, ಎಂ.ಫಿಲ್ ಮತ್ತು ಪಿಎಚ್.ಡಿ ಪದವಿಗಳನ್ನು ಪಡೆದಿರುವ ಅವರು ಮದರಾಸು ವಿಶ್ವವಿದ್ಯಾಲಯ ಹಾಗೂ ಜೈನ್ ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.  ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮೌಲಿಕ ಪ್ರಬಂಧಗಳನ್ನು ಮಂಡಿಸಿರುವ ರಾಜಣ್ಣ ತಗ್ಗಿ ಅವರು ಮದರಾಸು , ಬೆಂಗಳೂರು ಮತ್ತು ಗುಲಬರ್ಗಾ ಆಕಾಶವಾಣಿ ಕೇಂದ್ರಗಳಲ್ಲಿಯೂ ಹಲವು ಸಾಹಿತ್ಯಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.   ಕನ್ನಡ, ತೆಲುಗು, ತಮಿಳು, ಇಂಗ್ಲಿಷ್, ಭಾಷೆ ಬಲ್ಲವರಾಗಿದ್ದು, ...

READ MORE

Related Books