ಕಾಸನೋವ

Author : ಮನೋಜ್ ಪಿ ಎಂ (ದೇವೀಪುತ್ರನ್)

Pages 232

₹ 200.00
Year of Publication: 2018
Published by: ಯೋಗಮಾಯ ಪಬ್ಲಿಕೇಷನ್ಸ್
Address: ಯೋಗಮಾಯ ಪಬ್ಲಿಕೇಷನ್, ನಂ.1479, ಡಾ. ರಾಜ್ ಕುರಮಾರ್ ರಸ್ತೆ, ಕಲ್ಯಾಣಗಿರಿ ನಗರ, ಮೈಸೂರು- 19
Phone: 9008073499

Synopsys

ಇದೊಂದು ಮನೋವೈಜ್ಞಾನಿಕ ಕಾದಂಬರಿ. ಹದಿನೇಳನೇ ಶತಮಾನದಲ್ಲಿ ಇಟಲಿಯಲ್ಲಿ ಬದುಕಿದ್ದ ವ್ಯಕ್ತಿ ಗಯಾಕೊಮೊ ಕಾಸನೋವ. ಹೆಣ್ಣನ್ನು ಆಕರ್ಷಿಸಿ ದೈಹಿಕ ಸಂಪರ್ಕವನ್ನು ಬೆಳೆಸಿ ಅವಳನ್ನು ಕೊಂದು ಎಸೆಯುವುದು ಅವನ ಹವ್ಯಾಸ. ಆತನ ಮಾನಸಿಕಾವಸ್ಥೆಯನ್ನು ಅಧ್ಯಯನ ಮಾಡಿದ ಮೇಲೆ ಮನಶ್ಶಾಸ್ತ್ರಜ್ಞರು ಹೆಣ್ಣನ್ನು ಆಕರ್ಷಿಸುವ ಮನಸ್ಥಿತಿಗೆ ಕಾಸನೋವ ಮನಸ್ಥಿತಿ ಎಂದು ಹೆಸರು ಕೊಟ್ಟರು. ಈ ಕಾದಂಬರಿಯಲ್ಲಿ ಇಬ್ಬರು ಹುಡುಗರು- ನಚಿಕೇತ ಮತ್ತು ಚಾರುದತ್ತ ಹೇಗೆ ಕಾಸನೋವ ಮನಸ್ಥಿತಿಗೆ ಒಳಗಾಗುತ್ತಾರೆ ಎನ್ನುವುದನ್ನು ವಿವರಿಸಲು ಪ್ರಯತ್ನಿಸಿದೆ. ಕಾಸನೋವ ಏನು ಮಾಡುತ್ತಾನೆ ಎನ್ನುವುದಕ್ಕಿಂತ ಕಾಸನೋವ ಮನಸ್ಥಿತಿ ಹೇಗೆ ಬೆಳೆಯುತ್ತದೆ ಎನ್ನುವುದು ಇಲ್ಲಿ ಮುಖ್ಯ. ಅಪ್ಪ ಅಮ್ಮಂದಿರು ಮಕ್ಕಳನ್ನು ಯಾಕೆ ಗಮನಿಸಬೇಕು ಎನ್ನುವುದಕ್ಕೂ ಇಲ್ಲಿ ಉತ್ತರ ಸಿಗಬಹುದು. ಕಾಸನೋವ ಮನಸ್ಥಿತಿ ಇರುವವರ ಮೈಂಡ್ ಪವರ್ ಅಪಾರವಾಗಿದ್ದು, ಹೆಣ್ಣು ಎನ್ನುವ ಚಿಂತೆಯನ್ನು ಬಿಟ್ಟು ಪಾಸಿಟೀವ್ ಆಗಿ ಬದಲಾದರೆ ಹೇಗಿರುತ್ತದೆ, ನೆಗೆಟಿವ್ ಆಗಿಯೇ ಇದ್ದರೆ ಏನಾಗುತ್ತದೆ ಎನ್ನುವುದನ್ನು ವಿವರಿಸಲು ಪ್ರಯತ್ನಿಸಿದೆ.

Related Books