
ಬಂಗಾಳಿ ಕಥಾ ಸಾಹಿತ್ಯ ದಿಗ್ಗಜ ಶರಶ್ಚಂದ್ರ ಚಟರ್ಜಿ ಅವರು ಕಾದಂಬರಿ ‘ಕಾಶೀನಾಥ. ಇದನ್ನು ಸಿ.ಕೆ. ನಾಗರಾಜ ರಾವ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕಾಶೀನಾಥ ಮತ್ತು ಕಮಲಾ ದಂಪತಿಯ ಸಂಸಾರಿಕ ಜೀವನವು ಪ್ರತಿಯೊಬ್ಬ ದಂಪತಿಯ ಜೀವನವಾಗಿದೆ. ಅಲ್ಲಿಯ ಬೇಸರ, ನಿರಾಶೆ, ಸಂತಸ ಹೀಗೆ ಏನಿದ್ದರೂ ಸಹನೆಯೊಂದಿಗೆ ಎಲ್ಲವನ್ನೂ ನುಂಗಿಕೊಂಡು ಹೋದರೆ ಮಶಾತ್ರ ಜೀವನಕ್ಕೊಂದು ಅರ್ಥ ಎಂಬುದು ಕಾದಂಬರಿಯ ಸಂದೇಶ. ಕನ್ನಡ ಅನುವಾದಿತ ಕಾದಂಬರಿಗೆ ಮುನ್ನುಡಿ ಬರೆದ ನಾ. ಕಸ್ತೂರಿ ‘ಬಾಹ್ಯ ಪ್ರಪಂಚದ ಸುಂದರ -ಕ್ರೂರ ದೃಶ್ಯಗಳ ಬಗ್ಗೆ ಕಾದಂಬರಿ ಹೆಚ್ಚು ವಿವರಿಸಲು ಹೋಗುವುದಿಲ್ಲ. ಆದರೆ.ಅಂತರಂಗದ ಅಲ್ಲೋಲ-ಕಲ್ಲೋಲಗಳನ್ನು ಚಿತ್ರಿಸುತ್ತಾರೆ’ ಎಂದು ಪ್ರಶಂಸಿಸಿದ್ದಾರೆ.
©2025 Book Brahma Private Limited.