ಕಬ್ಬಿಣದ ಕಾಚಾಗಳು

Author : ಸ. ರಘುನಾಥ

Pages 72

₹ 30.00




Year of Publication: 2005
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 7353530805 / 080 - 20161913

Synopsys

ತೆಲುಗಿನಲ್ಲಿ ಅತ್ಯಂತ ಜನಪ್ರಿಯವಾದ ಈ ಕೃತಿಯನ್ನು ಸ. ರಘುನಾಥ ಬಹಳ ಸೊಗಸಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.

ನಾಗರಿಕತೆಯ ವಿಕಾಸ ಮಾರ್ಗದಲ್ಲಿ ಮನುಷ್ಯ ಹಲವಾರು ಕಾಲ ಘಟ್ಟಗಳನ್ನು ದಾಟಿ ಬಂದಿದ್ದಾನೆ. ಸಮಾಜ ವ್ಯವಸ್ಥೆ ರೂಪುಗೊಳ್ಳುತ್ತಿದ್ದ ಸಂದರ್ಭದಲ್ಲಿ, ಪ್ರಾಯಶಃ ಹೆಂಗಸು ಗಂಡಿನ ಆಸ್ತಿ ಎಂಬ ನಂಬಿಕೆ ಬೇರೂರಲು ಪ್ರಾರಂಭವಾಗಿ, ಮುಂದೆ ಪ್ರಚಲಿತವಾಗಿರಬೇಕು. ಈ ಆಸ್ತಿಯನ್ನು ರಕ್ಷಿಸುವುದು, ಅದನ್ನು ಅನ್ಯರು ಆಕ್ರಮಿಸದಂತೆ ನೋಡಿಕೊಳ್ಳುವುದು ಗಂಡಿನ ಕರ್ತವ್ಯ ಆಯಿತು. ಈ ಪ್ರಯತ್ನದಲ್ಲಿ ತೊಡಕುಗಳು, ಕಷ್ಟ ಸಂಕಟಗಳು ಎದುರಾಗದೆ ಇರಲಿಲ್ಲ. ಹೆಣ್ಣೀಗೆ ಪಾತಿವ್ರತ್ಯದ ಸಂಕೋಲೆ ತೊಡಿಸಿದ್ದು ಸಹ ಈ ಆಸ್ತಿ ರಕ್ಷಿಸುವ ಮಾರ್ಗದಲ್ಲಿ ಸಮಾಜ ರೂಪಿಸಿದ ಉಪಾಯವಾಗಿರಬೇಕು. ಮನುಷ್ಯನ ಬುದ್ಧಿಗೆ ಹೊಳೆಯುವ ಉಪಾಯಗಳಾದರೂ ಎಂಥವು! ತನ್ನ ಆಸ್ತಿಯಾದ ಹೆಂಗಸನ್ನು ಅನ್ಯ ಗಂಡಸಿಗೆ ಸುಲಭವಶಳಾಗುವುದನ್ನು ತಡೆಯುವ ಒಂದು ಉಪಾಯವೇ ಅವಳಿಗೆ ಕಬ್ಬಿಣದ ಕಾಚಾ ತೊಡಿಸಿ, ಅದಕ್ಕೊಂದು ಬೀಗ ಹಾಕಿ ಕೀಲಿಕೈಯನ್ನು ತನ್ನಲ್ಲಿರಿಸಿಕೊಳ್ಳುವುದು. ಕಾರ್ಯ ನಿಮಿತ್ತ ವರ್ಷಗಳ ಕಾಲ ಮನೆಯಿಂದ ಹೊರಗಿರಬೇಕಾದರೂ ಏನಂತೆ, ಕೀಲಿ ಕೈ ತನ್ನಲ್ಲಿದೆಯಷ್ಟೆ!

ಈ ವಿಚಾರಪೂರ್ಣ ಕೃತಿಯ ಮೂಲ ರಚನಕಾರರು ತಾಪೀ ಧರ್ಮಾರಾವು.

About the Author

ಸ. ರಘುನಾಥ
(13 August 1954)

ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ  ಸ.ರಘುನಾಥ,ಕಥೆ, ಕಾವ್ಯ, ವಿಮರ್ಶೆ, ಅಂಕಣಬರಹ, ಅನುವಾದ, ಜಾನಪದ ಸಾಹಿತ್ಯ ಸಂಗ್ರಹ,ಮುಂತಾದ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದವರು. ಸುಮಾರು 40ಕ್ಕೂ ಹೆಚ್ಚಿನ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಸ. ರಘುನಾಥ ಅವರು ಸಮಾಜಸೇವೆಯಲ್ಲಿಯೂ ಹೆಚ್ಚಾಗಿ ತೊಡಗಿಸಿಕೊಂಡವರು. 1995 ರಿಂದ ’ನಮ್ಮ ಮಕ್ಕಳು’ ಎಂಬ ಸಂಸ್ಥೆಯ ಮೂಲಕ ಸಾಮಾಜಿಕ ಕಾರ್ಯ: ಭಿಕ್ಷುಕ, ಅನಾಥ, ವೃದ್ಧರಿಗೆ, ಅಂಗವಿಕಲರಿಗೆ ಶೈಕ್ಷಣಿಕ ಹಾಗು ಉಚಿತ ವೈದ್ಯಕೀಯ ನೆರವು. 1994 ರಿಂದ 2014 ರವರೆಗೆ ಗಾಯಗೊಂಡ ಪ್ರಾಣಿ  - ಪಕ್ಷಿಗಳ ಆರೈಕೆ. 2005ರಿಂದ ನಾಟಿ ಔಷಧ ತಯಾರಿಕೆ, ಉಚಿತ ...

READ MORE

Related Books