ಕಚ

Author : ಬಿ.ಎಸ್. ರುಕ್ಕಮ್ಮ

Pages 102

₹ 15.00




Year of Publication: 1973
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

ಕಚ ಪುರಾಣ ಪುರುಷರ ಜೀವನಗಾಥೆಯ ಪುಸ್ತಕವನ್ನು ಲೇಖಕಿ‌ ಬಿ.ಎಸ್. ರುಕ್ಕಮ್ಮ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಮಹಾಧೈರ್ಯವಂತ ಕಚನ ಕುರಿತಾಗಿ ತನ್ನವರ ಒಳಿತಿಗಾಗಿ ಶತ್ರುಗಳ ಮಧೈಯೇ ವಾಸಿಸಿ, ಶತ್ರುಗುರುವಿನಿಂದಲೇ ’ಸಂಜೀವಿನಿ’ ವಿದ್ಯೆ ಕಲಿತು, ಕರ್ತವ್ಯದ ಮುಂದೆ ಅಸಮಾನ ಸುಂದರಿಯ ಪ್ರೇಮವನ್ನೂ ತೃಣೀಕರಿಸಿ, ಮೂರು ಬಾರಿ ಸಾವು ಬಂದರೂ ಹೆದರದೆ ಸ್ವಬಾಂಧವರ ಕಲೆಣಕ್ಕಾಗಿ ಹಿಡಿದ ಕೆಲಸ ಸಾಧಿಸಿಯೇ ಸಾಧಿಸಿದ ವೀರ ತರುಣ ಎಂದು ಕೃತಿಯಲ್ಲಿ ವರ್ಣಿಸಲಾಗಿದೆ. ಕಚ ಓರ್ವ ಅಪೂರ್ವ ಸಾಹಾಸವಂತ. ಆತನ ಕಥೆ ಯುಗಯುಗಳಿಗೂ ಪ್ರೇರಣದಾಯಕ ಎಂದು ಕೃತಿಯಲ್ಲಿ ವಿವರಿಸಲಾಗಿದೆ.

About the Author

ಬಿ.ಎಸ್. ರುಕ್ಕಮ್ಮ

ರುಕ್ಕಮ್ಮ ಬಿ.ಎಸ್. ಅವರು  ಎಂ.ಎ.(ಕನ್ನಡ) ಸ್ನಾತಕೋತ್ತರ ಪದವೀಧರರು. ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ೨೩-೯-೧೯೩೪ ರಂದು ಮೈಸೂರಿನ  ಬಿ.ಟಿ. ಶ್ರೀನಿವಾಸ ಐಯ್ಯಂಗಾರ್, ಸೀತಮ್ಮ ದಂಪತಿಗಳಿಗೆ ಮಗಳಾಗಿ ಜನಿಸಿದರು. ಇವರ  ಕೃತಿಗಳು : ಶಾಲೆಯ ಮಕ್ಕಳು (ಕಾದಂಬರಿ) ೧೯೫೮. ಅನುವಾದ: ಕೀಟಗಳ ಒಡನಾಡಿ ಫೇಬರ್‌ ಜೀವನ ಮತ್ತು ಕೃತಿ ೧೯೬೦, ಸಮ್ಮುಕ್ತ ಕೌಮುದೀ ಸಂಗ್ರಹ (ಸಂಪಾದಿತ) ೧೯೬೩, ಮೇರಿಕ್ಯೂರಿ ಜೀವನ ಚರಿತ್ರೆ ೧೯೬೮, ಪಾಪು ಅಮ್ಮನಿಗೆ ಹೇಳಿದ ಕಥೆಗಳು (ಮಕ್ಕಳ ಸಾಹಿತ್ಯ) ೧೯೭೧, ಕಚ (ವ್ಯಕ್ತಿಚಿತ್ರ) ೧೯೭೩, ಹರಿಹರ ೧೯೭೩, ವ್ಯಾಪಾರಿ ನುಂಗಣ್ಣ (ಮಕ್ಕಳ ಸಾಹಿತ್ಯ) ...

READ MORE

Related Books